ಗೆಳತಿಯ ನಿಶ್ಚಿತಾರ್ಥದ ಸಮಯದಲ್ಲಿ ಒಡವೆ ಕಳ್ಳತನ; ಯುವತಿ ಬಂಧನ

ಮೈಸೂರು, ಆಗಸ್ಟ್ 26: ತನ್ನ ಗೆಳತಿಯ ನಿಶ್ಚಿತಾರ್ಥದ ಸಮಯದಲ್ಲೇ ಲಕ್ಷಾಂತರ ರೂಪಾಯಿ ಬೆಲೆಯ ಒಡವೆಗಳನ್ನು ಕಳ್ಳತನ ಮಾಡಿರುವ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.

ನಗರದ ಕುಂಬಾರಕೊಪ್ಪಲಿನ ಸುಭಾಷ್‌ ನಗರದ ನಿವಾಸಿ ರಮೇಶ್ ಎಂಬುವವರ ಮನೆಯಲ್ಲಿ ಕಳೆದ 23ರಂದು ಅವರ ಮಗಳ ನಿಶ್ಚಿತಾರ್ಥ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಗಳು ಧರಿಸಿದ್ದ ಆಭರಣಗಳನ್ನು ಕಾರ್ಯಕ್ರಮ ಮುಗಿದ ನಂತರ ಮನೆಯಲ್ಲಿಯೇ ಬಿಚ್ಚಿ ಅಲ್ಮೆರಾದಲ್ಲಿ ಇಟ್ಟಿದ್ದರು. ಆದರೆ ಅದೇ ದಿವಸ ಸಂಜೆ ನೆಂಟರೆಲ್ಲಾ ಮನೆಯಿಂದ ಹೋದ ಮೇಲೆ ಅಲ್ಮೆರಾದಲ್ಲಿದ್ದ ಒಡವೆಗಳು ನಾಪತ್ತೆ ಆಗಿದ್ದವು.

ನಂತರ ಈ ಕುರಿತು ಮೇಟಗಳ್ಳಿ ಠಾಣೆಗೆ ದೂರು ನೀಡಿ ಪ್ರಕರಣವನ್ನು ದಾಖಲಿಸಲಾಗಿತ್ತು. ಈ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು 25ರಂದು ಸಂಶಯದ ಮೇರೆಗೆ ಈ ದಿನದಂದು ಕಾರ್ಯಕ್ರಮದಲ್ಲಿ ರಮೇಶ್ ಮನೆಗೆ ಬಂದಿದ್ದ ಅವರ ಮಗಳ ಸ್ನೇಹಿತೆ ಆದ ಅಶ್ರಿತಾ ಎಂಬಾಕೆಯನ್ನು ವಿಚಾರಣೆಗೊಳಪಡಿಸಿದಾಗ ಈಕೆ ಒಡವೆಗಳನ್ನು ಕದ್ದು ತನ್ನ ಮನೆಯಲ್ಲಿಟ್ಟು ಕೊಂಡಿರುವುದಾಗಿ ಒಪ್ಪಿಕೊಂಡಳು.

 Mysuru: Police Arrested Girl Who Stolen Jewellery In Friend Engagement Function

ಆಕೆಯನ್ನು ಬಂಧಿಸಿ, 4,15,000 ರೂ. ಬೆಲೆಬಾಳುವ 85 ಗ್ರಾಂ ತೂಕದ ಎರಡು ನೆಕ್ಲೇಸ್ ಗಳು ಮತ್ತು ಒಂದು ಜೊತೆ ಓಲೆಯನ್ನು ವಶಪಡಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+