• search
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಿರಿಯಾಪಟ್ಟಣ: ರಾಣಿಗೇಟ್ ಆದಿವಾಸಿಗಳದ್ದು ನರಕದ ಬದುಕು!

By ಮೈಸೂರು ಪ್ರತಿನಿಧಿ
|

ಮೈಸೂರು: ಅರಣ್ಯದಲ್ಲಿ ಬದುಕು ಕಟ್ಟಿಕೊಂಡಿದ್ದ ಆದಿವಾಸಿಗಳನ್ನು ನಾಡಿಗೆ ತರುವ ಯತ್ನ ಹಿಂದಿನಿಂದಲೂ ನಡೆಯುತ್ತಲೇ ಬಂದಿದೆ. ಈಗಾಗಲೇ ಅಲ್ಲಲ್ಲಿ ಆದಿವಾಸಿಗಳಿಗಾಗಿ ಕಾಲೋನಿ ನಿರ್ಮಾಣ ಮಾಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯಗಳು ನಡೆಯುತ್ತಲೇ ಇದೆ.

ಆದರೆ ಕಳೆದ ಮೂರ್ನಾಲ್ಕು ದಶಕಗಳ ಹಿಂದೆಯೇ ಅರಣ್ಯವನ್ನು ತ್ಯಜಿಸಿ ನಾಡಿಗೆ ಬಂದು ಬದುಕು ಕಟ್ಟಿಕೊಂಡಿರುವವರ ಪರಿಸ್ಥಿತಿ ಮಾತ್ರ ನರಕವಾಗಿದೆ.

'ಶಾಸಕರು ನಿಮ್ಮ ಕೆಲಸ ಮಾಡಿಲ್ಲವೆಂದರೆ ಹುಚ್ಚು ನಾಯಿ ರೀತಿ ಹೊಡೆಯಿರಿ'

ಆದಿವಾಸಿಗಳು ನಾಡಿನಲ್ಲೇ ಇದ್ದರೂ ಕಾಡಿನಲ್ಲಿ ಕಟ್ಟಿಕೊಂಡಿದ್ದ ಬದುಕಿಗಿಂತಲೂ ಹೀನಾಯ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ.

ಮೂಲಭೂತ ಸವಲತ್ತುಗಳು ಮರೀಚಿಕೆಯಾಗಿದೆ. ಇದಕ್ಕೆ ಸಾಕ್ಷಿ ಪಿರಿಯಾಪಟ್ಟಣದ ರಾಣಿಗೇಟ್ ಹಾಡಿಯಲ್ಲಿ ಬದುಕು ಕಟ್ಟಿಕೊಂಡಿರುವ ಆದಿವಾಸಿಗಳದ್ದಾಗಿದೆ.

150ಕ್ಕೂ ಹೆಚ್ಚು ಕುಟುಂಬ

150ಕ್ಕೂ ಹೆಚ್ಚು ಕುಟುಂಬ

ರಾಣಿಗೇಟ್ ಹಾಡಿಯಲ್ಲಿ 150ಕ್ಕೂ ಹೆಚ್ಚು ಕುಟುಂಬಗಳು ಬದುಕು ಕಟ್ಟಿಕೊಂಡಿದ್ದು, ಮೂಲಭೂತ ಸೌಲಭ್ಯಗಳ ಕೊರತೆಯಿಂದಾಗಿ ನರಕಯಾತನೆ ಅನುಭವಿಸಬೇಕಾದ ಪರಿಸ್ಥಿತಿ ಬಂದೊದಗಿದೆ.

ಇಲ್ಲಿ ಸೋಲಿಗ ಮತ್ತು ಜೇನು ಕುರುಬ ಸಮುದಾಯವು ಕಳೆದ 30 ವರ್ಷಗಳಿಂದ ನೆಲೆಸಿವೆ. ಆಗ ಕಟ್ಟಿಕೊಟ್ಟ ಮನೆಗಳು ಈಗ ಶಿಥಿಲಾವಸ್ಥೆಗೆ ತಲುಪಿವೆ.

ಅವುಗಳನ್ನು ಕೆಡವಿ ಹೊಸ ಮನೆಗಳನ್ನು ನಿರ್ಮಿಸಿಕೊಳ್ಳಲು ಸಾಧ್ಯವಾಗದೆ ಇಂದೋ ನಾಳೆಯೋ ನೆಲಕ್ಕುರುವಂತಿರುವ ಮನೆಯಲ್ಲೇ ಬದುಕನ್ನು ಕಟ್ಟಿಕೊಳ್ಳುವ ಸಂಕಟದ ಸ್ಥಿತಿಯಲ್ಲಿ ಜನರು ದಿನ ಕಳೆಯುತ್ತಿದ್ದಾರೆ.

ಅರಣ್ಯ ಇಲಾಖೆಯ ಕಾಟ

ಅರಣ್ಯ ಇಲಾಖೆಯ ಕಾಟ

ಇನ್ನೊಂದೆಡೆ, ಅರಣ್ಯ ಹಕ್ಕು ಕಾಯ್ದೆ ಪ್ರಕಾರ ಸುಪ್ರೀಂ ಕೋರ್ಟ್ ಆದೇಶದಂತೆ ಸರ್ಕಾರವು ಬುಡಕಟ್ಟು ವ್ಯವಹಾರಗಳ ಮಂತ್ರಾಲಯ (ಅನುಸೂಚಿತ ಬುಡಕಟ್ಟುಗಳ ಮತ್ತು ಇವರ ಪಾರಂಪರಿಕ ಅರಣ್ಯವಾಸಿಗಳ ಅರಣ್ಯ ಹಕ್ಕುಗಳ ಮಾನ್ಯತೆ) ನಿಯಮ, 2018 (ಎಚ್) ಅನುಗುಣವಾಗಿ ಸಮುದಾಯ ಅರಣ್ಯ ಸಂಪನ್ಮೂಲಗಳಿಗೆ ಹಕ್ಕು ಪತ್ರವನ್ನು ನೀಡಲಾಗಿದೆಯಾದರೂ ಅರಣ್ಯ ಇಲಾಖೆಯಿಂದ ಈ ಜನರಿಗೆ ಕಿರುಕುಳ ತಪ್ಪಿಲ್ಲ.

ಬುಡಕಟ್ಟು ಸಮುದಾಯದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ತಮ್ಮದೇ ಸಮುದಾಯದ ಸ್ವಾಮಿ ಎಂಬ ವ್ಯಕ್ತಿಯನ್ನು ಗ್ರಾಮ ಪಂಚಾಯಿತಿಗೆ ಆಯ್ಕೆ ಮಾಡಿ ಈ ಹಿಂದೆಯೇ ಕಳುಹಿಸಿಕೊಟ್ಟಿದ್ದರು. ಆದರೆ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ.

ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದವರಿಗೂ ಒಂದು ಮನೆ ನಿರ್ಮಿಸಿಕೊಳ್ಳಲಾಗದೆ ಗುಡಿಸಲಲ್ಲಿ ಬದುಕು ಕಳೆಯಬೇಕಾದ ದುರವಸ್ಥೆ ತಪ್ಪಿಲ್ಲ.

ಯಾರೂ ಸ್ಪಂದಿಸುತ್ತಿಲ್ಲ

ಯಾರೂ ಸ್ಪಂದಿಸುತ್ತಿಲ್ಲ

ಇನ್ನು ಹಾಡಿಯ ಜನಕ್ಕೆ ವಿದ್ಯುತ್, ನೀರು, ರಸ್ತೆ, ಶೌಚಾಲಯ ಸೇರಿದಂತೆ ಹಲವು ರೀತಿಯ ಸಮಸ್ಯೆಗಳಿದ್ದು, ಅದು ಪರಿಹಾರವಾಗದ ಕಾರಣದಿಂದಾಗಿ ಸಮಸ್ಯೆಗಳಲ್ಲಿಯೇ ಬದುಕನ್ನು ಸಾಗಿಸುವಂತಾಗಿದೆ.

ಹಾಡಿಯ ಅಭಿವೃದ್ಧಿಯ ಬಗ್ಗೆ ಪ್ರತಿ ಚುನಾವಣೆ ಬಂದಾಗಲೂ ಜನಪ್ರತಿನಿಧಿಗಳು ಭರವಸೆ ನೀಡುತ್ತಲೇ ಬಂದಿದ್ದಾರೆ. ಆದರೆ ಭರವಸೆಯನ್ನು ಈಡೇರಿಸುವ ಕೆಲಸವನ್ನು ಮಾತ್ರ ಯಾರೂ ಮಾಡಿಲ್ಲ.

ಹಾಡಿಗಳ ಸಮಸ್ಯೆ ಕುರಿತಂತೆ ಹಲವು ಬಾರಿ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಿ ಎಂದು ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಸೌಲಭ್ಯ ಕಲ್ಪಿಸಿಕೊಡಿ: ಅಹವಾಲು

ಸೌಲಭ್ಯ ಕಲ್ಪಿಸಿಕೊಡಿ: ಅಹವಾಲು

ಯಾರೂ ಕೂಡ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಮನೆಗಳು ಶಿಥಿಲಾವಸ್ಥೆಯಲ್ಲಿದ್ದು, ಜೋರಾಗಿ ಮಳೆ ಬಂದರೆ ಎಲ್ಲಿ ಬಿದ್ದು ಹೋಗಿ ಬಿಡುತ್ತೋ ಎಂಬ ಭಯದಲ್ಲಿ ಬದುಕಬೇಕಾಗಿದೆ. ನಮ್ಮ ಕಷ್ಟವನ್ನರಿತು ಸೌಲಭ್ಯ ಕಲ್ಪಿಸಿಕೊಡಿ ಎನ್ನುವುದು ಇಲ್ಲಿನ ನಿವಾಸಿಗಳ ಮನವಿಯಾಗಿದೆ.

ಇದೀಗ ನೂತನ ಶಾಸಕರಾಗಿ ಮಹದೇವು ಅವರು ಆಯ್ಕೆಯಾಗಿ ಬಂದಿದ್ದು, ಈ ಬಗ್ಗೆ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.

ಸಂಬಂಧಿಸಿದವರು ಇವರ ಸಮಸ್ಯೆಗೆ ಸ್ಪಂದಿಸಿ ಸೌಲಭ್ಯ ಕಲ್ಪಿಸಿ ಕೊಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಮೈಸೂರು ಸುದ್ದಿಗಳುView All

English summary
Life of the Tribles of Periyapatna Taluq's Ranigate is very pathetic. Trible people are struggling without basic facilities to the colony specially built for the.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more