Whatsapp ಗ್ರೂಪ್ ನಲ್ಲಿ ಉಲ್ಟಾ ಹೊಡೆದ ಜನ: ಶಾಸಕರ ವಿರುದ್ಧವೇ ಫೈಟು!
ಮೈಸೂರು, ಜನವರಿ 8 : ಇನ್ನೇನು ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿರುವಾಗಲೇ ಮತದಾರರ ಮನ ಓಲೈಕೆಗಾಗಿ ರಾಜಕಾರಣಿಗಳು ಸಜ್ಜಾಗಿದ್ದಾರೆ. ಸಾಮಾಜಿಕ ಜಾಲತಾಣವನ್ನು ಸ್ಪರ್ಧಾತ್ಮಕವಾಗಿ ಬಳಸಿಕೊಳ್ಳಲು ಹಾಗೂ ಕ್ಷೇತ್ರದ ಜನತೆ ಸಮಸ್ಯೆ ಆಲಿಸಲು ಕಾಂಗ್ರೆಸ್ ಶಾಸಕರೊಬ್ಬರು ವಾಟ್ಸಪ್ ಗ್ರೂಪ್ ಕ್ರಿಯೇಟ್ ಮಾಡಿ ಪೇಚಿಗೆ ಸಿಲುಕಿದ ಘಟನೆ ನಡೆದಿದೆ.
ಮೈಸೂರಿನ ಕೆ.ಆರ್.ಕ್ಷೇತ್ರದ ಕಾಂಗ್ರೆಸ್ ಶಾಸಕ ಎಂ.ಕೆ.ಸೋಮಶೇಖರ್ ಅವರೇ ಈಗ ಪೇಚಿಗೆ ಸಿಲುಕಿರುವ ಶಾಸಕರು. ಕೆಲ ದಿನಗಳ ಹಿಂದೆಯಷ್ಟೆ 'ಎಂ.ಎಲ್.ಎ. ಕೆ.ಆರ್.ಕ್ಷೇತ್ರ' ಎಂಬ ಹೆಸರಿನಲ್ಲಿ ವಾಟ್ಸ್ ಆಪ್ ಗ್ರೂಪ್ ಕ್ರಿಯೇಟ್ ಮಾಡಲಾಗಿತ್ತು, ಕ್ಷೇತ್ರದ ಜನರ ಸಮಸ್ಯೆ ಆಲಿಸುವುದಾಗಿ ಅದರಲ್ಲಿ ಹೇಳಲಾಗಿತ್ತು. ಆದರೆ ವಿಪರ್ಯಾಸವೆಂದರೆ ಆ ವಾಟ್ಸ್ ಆಪ್ ಗ್ರೂಪಿನಲ್ಲಿದ್ದ ಸದಸ್ಯರೇ ಶಾಸಕರಿಗೆ ಹಿಗ್ಗಾ ಮುಗ್ಗಾ ತರಾಟೆ ತೆಗೆದುಕೊಂಡದ್ದಾರೆ!
ಶಾಸಕರಾಗಿ ಐದು ವರ್ಷ ಪೂರ್ಣಗೊಳ್ಳುತ್ತಾ ಇದೆ. ಈ ಅವಧಿಯಲ್ಲಿ ಕ್ಷೇತ್ರದ ಬಗ್ಗೆ ಇಲ್ಲದ ಕಾಳಜಿ ಈಗ ಚುನಾವಣೆ ಸಮೀಪಿಸುತ್ತಿದ್ದಂತೆ ದಿಢೀರನೆ ಯಾಕೆ ಬಂದಿದೆ ಎಂದು ತರಾಟೆ ತೆಗೆದುಕೊಂಡರು. ಅಷ್ಟು ಮಾತ್ರವಲ್ಲದೆ ಶಾಸಕ ಎಂ.ಕೆ.ಸೋಮಶೇಖರ್ ಗೆ ಅವ್ಯಾಚ ಶಬ್ದಗಳಿಂದಲೂ ಕೆಲವರು ನಿಂದಿಸಿದ್ದಾರೆ.

MLA ಕೆಆರ್ ಕ್ಷೇತ್ರ ಪಬ್ಲಿಕ್ 7 ಹೆಸರಿಸಲ್ಲಿ ಕ್ಷೇತ್ರದ ಮತದಾರನ್ನ ಒಳಗೊಂಡ ವಾಟ್ಸಪ್ ಗ್ರೂಪ್ ಅನ್ನು ಸೋಮಶೇಖರ್ ಗನ್ ಮ್ಯಾನ್ ಮಹೇಶ್ ರಚಿಸಿದ್ದರು. ಗ್ರೂಪ್ ರಚನೆಯಾಗ್ತಿದಂತೆ ಶಾಸಕರಿಗೆ ಬೈಗುಳ ಸುರಿಮಳೆಯೇ ಶುರುವಾಗಿದೆ.
ಲೋನ್ ಮಾಡ್ಸಿ ಕೊಡಿ ಅಂದ್ರೆ ಏರಿಯಾದಲ್ಲೇ ನಿಮ್ಮನ್ನು ನೋಡಿಲ್ಲ ... ಅಂತೀರಾ .., ಈಗ ಗ್ರೂಪ್ ಮಾಡಿ ನಂಬರ್ ಸೇರಿಸುತ್ತೀರಾ..? ಯಾಕೆ ಎಲೆಕ್ಷನ್ ಹತ್ತಿರ ಬಂತಾ..? ಎಂದು ಒಬ್ಬರು ಕಾಲೆಳೆದಿದ್ದರೆ, ಮತ್ತೊಬ್ಬರು ಇದೊಂದು ಈಡಿಯಟ್ ಗ್ರೂಪ್, ಎಲ್ಲರೂ ಬಿಜೆಪಿಗೆ ಓಟ್ ಹಾಕಿ ಎಂದು ಹೇಳಿದ್ದಾರೆ. ಆದರೆ ಈ ಕಾಮೆಂಟ್ಸ್ ಗೆ ಶಾಸಕರಿಗೆ ಸಂಬಂಧಿಸಿದವರಾಗಲಿ ಅಥವಾ ವಾಟ್ಸ್ ಅಪ್ ಗ್ರೂಪ್ ನ ಅಡ್ಮಿನ್ ಆಗಲಿ ಯಾವುದೇ ಉತ್ತರ ನೀಡದೆ ಸದಸ್ಯರ ನಿಂದನೆಗೆ ಗಪ್ ಚುಪ್ ಆಗಿದ್ದಾರೆ.

ಇನ್ನೊಬ್ಬರು ಶಾಸಕ ಸೋಮಶೇಖರ್ ರ ವಾಟ್ಸ್ ಅಪ್ ಗ್ರೂಪ್ ಡಿಪಿಗೆ ಪ್ರಧಾನಿ ಮೋದಿ ಭಾವಚಿತ್ರ ಹಾಕಿ ಆಕ್ರೋಶವನ್ನು ಹೊರ ಹಾಕಿದ್ದಾರೆ. ಇದನ್ನೆಲ್ಲ ಗಮನಿಸುತ್ತಿದ್ದ ಸಾಕಷ್ಟು ಸದಸ್ಯರು ತಕ್ಷಣವೇ ಗ್ರೂಪ್ ನಿಂದ ಎಗ್ಸಿಟ್ ಆಗಿದ್ದಾರೆ.












Click it and Unblock the Notifications