ನಂಜನಗೂಡು ಕಾಮುಕ ಶಿಕ್ಷಕನ ವಿರುದ್ಧ ತಿರುಗಿಬಿದ್ದ ಪೋಷಕರು

ಮೈಸೂರು, ಮಾರ್ಚ್ 02: ನಂಜನಗೂಡಿನ ಕಾಮುಕ ಶಿಕ್ಷಕ ಸಿದ್ಧರಾಜು ಮಾಜಿ ವಿದ್ಯಾರ್ಥಿನಿಯೊಂದಿಗಿನ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮುಕ ಶಿಕ್ಷಕನನ್ನು ಸೇವೆಯಿಂದ ವಜಾ ಗೊಳಿಸುವಂತೆ ಒತ್ತಾಯಿಸಿ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕು ಶ್ರೀರಾಮಪುರದಲ್ಲಿ ಗ್ರಾಮಸ್ಥರು, ವಿದ್ಯಾರ್ಥಿಗಳ ಪೋಷಕರು ಪ್ರತಿಭಟನೆ ನಡೆಸಿದರು.

Recommended Video

      Tejasvi Surya Exclusive interview part 2 | Tejasvi Surya | Oneindia Kannada

      ತನ್ನ ಮಾಜಿ ವಿದ್ಯಾರ್ಥಿನಿಯೊಂದಿಗೆ ಸರ್ಕಾರಿ ಶಾಲಾ ಶಿಕ್ಷಕನಾದ ಸಿದ್ಧರಾಜು ರಾಸಲೀಲೆ ನಡೆಸಿದ ಫೋಟೋಗಳು ಸೋಮವಾರ ಬೆಳ್ಳಂಬೆಳಿಗ್ಗೆ ಮೈಸೂರು ಜಿಲ್ಲೆಯಲ್ಲಿ ಸದ್ದು ಮಾಡುತ್ತಿವೆ.

      ಮೈಸೂರಿನಲ್ಲಿ ಹಳೇ ವಿದ್ಯಾರ್ಥಿನಿಯೊಂದಿಗೆ ಶಿಕ್ಷಕನ ರಾಸಲೀಲೆ

      ರಾಜಕಾರಣಿಗಳ ಜೊತೆ ನಿಕಟ ಸಂಪರ್ಕ‌ ಹೊಂದಿರುವ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ಶ್ರೀರಾಂಪುರದ ಸರ್ಕಾರಿ ಶಾಲಾ ಶಿಕ್ಷಕ ಸಿದ್ದರಾಜು ತನ್ನ ಹಳೇ ವಿದ್ಯಾರ್ಥಿನಿ ಎನ್ನಲಾದ ಯುವತಿಯೊಂದಿಗೆ ಕಾಮದಾಟ ನಡೆಸಿರುವುದು ಬಯಲಾಗಿದೆ. ಶಿಕ್ಷಕನ ರಾಸಲೀಲೆ ಫೋಟೋಗಳು ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗಿವೆ.

      Parents Protest Against Nanjanagud Teacher

      ಸರ್ಕಾರಿ ಶಾಲೆಯ ಮುಂಭಾಗದಲ್ಲಿಂದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ವಿದ್ಯಾರ್ಥಿಗಳ ಪೋಷಕರು ಕಾಮುಕ ಶಾಲಾ ಶಿಕ್ಷಕನ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

      ಸಿದ್ದರಾಜುನನ್ನು ಸೇವೆಯಿಂದ ವಜಾಗೊಳಿಸುವಂತೆ ಒತ್ತಾಯಿಸಿದರು. ಕೂಡಲೇ ಶಿಕ್ಷಕನನ್ನು ಅಮಾನತುಗೊಳಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಎಂದು ಒತ್ತಾಯಿಸಿದರು.

      Parents Protest Against Nanjanagud Teacher

      ಅನೇಕ ಮಹಿಳೆಯರೂ ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+