ಸಾಂಸ್ಕೃತಿಕ ನಗರಿಗೆ ದಾಂಗುಡಿಯಿಟ್ಟ ಆನ್ ಲೈನ್ ಮಟ್ಕಾ ದಂಧೆ

ಮೈಸೂರು, ಜನವರಿ 27 : ಆಟ ಆಡುತ್ತಿದ್ದಾರಾ, ಇಲ್ಲವಾ? ಎಂದು ತಿಳಿಯುವುದಿಲ್ಲ, ಆಟ ಆಡುವುದಕ್ಕೆ ಅಡ್ಡೆಯೂ ಬೇಕಿಲ್ಲ, ಆಟ ಆಡಿಸುವವರು ಯಾರು? ಅದೂ ಗೊತ್ತಾಗುವುದಿಲ್ಲ. ಆಟಕ್ಕೆ ಬೇಕಾದ ಪರಿಕರ ಮೊಬೈಲ್ ಮತ್ತು ಇಂಟರ್ನೆಟ್ ಅಷ್ಟೇ. ಕೊನೆಗೆ, ಜೇಬು ಖಾಲಿಯಾದದ್ದು ಮಾತ್ರ ತಿಳಿಯುತ್ತದೆ. ಇಷ್ಟಾದರೂ ಆಟ ಆಡುವುದನ್ನು ಮಾತ್ರ ಜನರು ಬಿಡಲೊಲ್ಲರು.

ಹೌದು, ಇದು ಆನ್‌ಲೈನ್ ಮಟ್ಕಾ. ಸಾಂಪ್ರದಾಯಿಕ ಮಟ್ಕಾದಂತೆ ಇದಕ್ಕೊಂದು ಅಡ್ಡೆ ಬೇಕಿಲ್ಲ. ಜನರು ಒಟ್ಟಿಗೆ ಗುಂಪು ಸೇರುವ ಅಗತ್ಯವೂ ಇಲ್ಲ. ಆದರೆ, ಆಟ ಮಾತ್ರ ಸಾಗುತ್ತದೆ. ಜನರು ಮೋಸ ಹೋಗುತ್ತಾರೆ. ಸ್ಮಾರ್ಟ್‌ಫೋನ್‌ಗಳು ಎಲ್ಲರ ಕೈಗೆ ಬಂದ ಮೇಲೆ ಹಾಗೂ ಇಂಟರ್ ನೆಟ್ ಅಗ್ಗವಾದ ಬಳಿಕ ಮಟ್ಕಾದ ಹೊಸ ಹೈಟೆಕ್ ರೂಪ ಹೀಗಿದೆ.

ನಗರದ ಕೊಳೆಗೇರಿಗಳಲ್ಲಿ, ಕಾರ್ಮಿಕರು ವಾಸ ಮಾಡುವ ಕಾಲೋನಿಗಳಲ್ಲಿ, ಆಟೊ ಚಾಲಕರು, ಮಧ್ಯಮವರ್ಗದವರು ಹೆಚ್ಚಾಗಿ ಈ ದಂಧೆಗೆ ಸಿಲುಕಿದ್ದಾರೆ. ಬೆಳಗ್ಗೆಯಿಂದ ಸಂಜೆಯವರೆಗೆ ದುಡಿದ ಹಣವನ್ನು ಕೆಲವೇ ಗಂಟೆಗಳಲ್ಲಿ ಕಳೆದುಕೊಳ್ಳುತ್ತಿದ್ದಾರೆ. ₹ 10ರಿಂದ ಇದರ ಆಟ ಆರಂಭವಾಗುತ್ತದೆ. ಕೆಲವು ಆನ್ ಲೈನ್ ಮಟ್ಕಾ ದಂಧೆ ಗಂಟೆಗೊಮ್ಮೆಯಂತೆ ನಡೆಯುತ್ತವೆ. ಹೀಗಾಗಿ, ಸಾಮಾನ್ಯ ಕೂಲಿಕಾರ್ಮಿಕರೂ ಇದರ ಕಬಂಧ ಬಾಹುವಿಗೆ ಸಿಲುಕಿ ನರಳುತ್ತಿದ್ದಾರೆ.

Online matka game came to Mysuru

ಇಂತಹ ಆನ್ ಲೈನ್ ಮಟ್ಕಾ ಆಡಲು ಹೆಚ್ಚಾಗಿ ಆಟೋಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಮೇಲ್ನೋಟಕ್ಕೆ ಪ್ರಯಾಣಿಕರಿಗಾಗಿ ಆಟೊ ನಿಂತಿವೆ ಎಂದು ಅನ್ನಿಸುತ್ತದೆ. ಪ್ರಯಾಣಿಕರು ಕೇಳಿದರೆ ಬರುವುದಿಲ್ಲ ಎನ್ನುತ್ತಾರೆ. ಒಳಗಡೆ 3 ರಿಂದ 4 ಮಂದಿ ಕುಳಿತು ಮೊಬೈಲ್ ಕೈಲಿಡಿದು ಇಂತಹ ಆಟ ಆಡುತ್ತಿರುತ್ತಾರೆ. ಇದು ಗಮನಕ್ಕೆ ಬರುವುದೇ ಇಲ್ಲ.

ಆನ್‌ಲೈನ್ ಮಟ್ಕಾ ಏಕಪ್ರಕಾರದ ಸ್ವರೂಪವನ್ನು ಹೊಂದಿಲ್ಲ. ಇದಕ್ಕೆ ರಾವಣನ ತಲೆಗಳಂತೆ ಹತ್ತಾರು ಸ್ವರೂಪಗಳಿವೆ. ಹಲವು ವೆಬ್‌ಸೈಟ್‌ಗಳು ವಿಭಿನ್ನ ಸ್ವರೂಪದ ಆಟವನ್ನು ಆಡಿಸುತ್ತವೆ. ಇದಕ್ಕೆಲ್ಲ ಏಜೆಂಟರೂ ಇದ್ದಾರೆ. ಬೆಳಿಗ್ಗೆ ಅಥವಾ ಸಂಜೆ ಗ್ರಾಹಕರಿಂದ ಹಣ ಸಂಗ್ರಹಿಸಿ ಸಂಖ್ಯೆಯನ್ನು ಪಡೆದುಕೊಳ್ಳುತ್ತಾರೆ.

ನಿರ್ದಿಷ್ಟ ವೆಬ್‌ಸೈಟ್‌ನಲ್ಲಿ ನಿಗದಿತ ಸಮಯಕ್ಕೆ ಸರಿಯಾಗಿ ಸಂಖ್ಯೆಗಳು ಬರುತ್ತವೆ. ಗ್ರಾಹಕರು ಹೇಳಿದ ಒಂದು ಅಂಕಿ ಬಂದರೆ ಎಂಟು ಪಟ್ಟು ಜೋಡಿ ಅಂಕಿ ಬಂದರೆ 80 ಪಟ್ಟು ಹಣ ಸಿಗುತ್ತದೆ. ಈ ನಮೂನೆಯಲ್ಲಿ ಪ್ರತಿ ಗಂಟೆಗೊಮ್ಮೆ ಆಡುವ ಆಟಗಳೂ ಇವೆ.

ಒಟ್ಟಾರೆ ಆನ್ ಲೈನ್ ಮಟ್ಕಾ ದಂಧೆ ಸಾಂಸ್ಕೃತಿಕ ನಗರಿಯಲ್ಲಿ ಕಾಲಿಟ್ಟಿರುವುದು ಮಾತ್ರ ವಿಪರ್ಯಾಸವೇ ಸರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+