ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಸರಾ ಉದ್ಘಾಟನೆಗಾಗಿ ಮೈಸೂರಿಗೆ ಆಗಮಿಸಿದ ನಿಸಾರ್ ಅಹ್ಮದ್

By Yashaswini
|
Google Oneindia Kannada News

ಮೈಸೂರು, ಸೆಪ್ಟೆಂಬರ್ 20: ನಿತ್ಯೋತ್ಸವ ಕವಿ ನಿಸಾರ್ ಅಹಮ್ಮದ್ ದಸರೆಯ ಉದ್ಘಾಟನೆಗಾಗಿ ಮೈಸೂರಿಗೆ ಬಂದಿಳಿದಿದ್ದಾರೆ. ನಾಳೆ(ಸೆ.21) ನಡೆಯುವ ದಸರೆಯ ಕಾರ್ಯಕ್ರಮಕ್ಕೆ ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ನಾಡ ಹಬ್ಬ ದಸರಾವನ್ನು ಉದ್ಘಾಟಿಸಲಿದ್ದಾರೆ.

ವೈಭವದ ದಸರಾ ವಿಶೇಷ ಪುಟ

ಇದೇ ಮೊದಲ ಬಾರಿಗೆ ದಸರಾ ಉದ್ಘಾಟನೆಗೆ ಮುಸ್ಲಿಂ ವ್ಯಕ್ತಿಯನ್ನು ಸರ್ಕಾರ ಆಹ್ವಾನಿಸಿದ್ದು, ಈ ಕುರಿತಾಗಿ ಪ್ರತಿಕ್ರಿಯಿಸಿದ ಕವಿ ಕವಿ ನಿಸಾರ್ ಅಹ್ಮದ್, "ಇದು ನನ್ನ ಜೀವನದ ಅತ್ಯುತ್ತಮ ಕ್ಷಣ" ಎಂದರು.
1952 ರಲ್ಲಿ ಬಿಎಸ್ಸಿ ವಿದ್ಯಾರ್ಥಿಯಾಗಿದ್ದಾಗ ದಸರಾ ಮೆರವಣಿಗೆ, ವಿಜಯದಶಮಿಯಂದು ನಡೆಯುವ, ಜಂಬೂ ಸವಾರಿ ಮೆರವಣಿಗೆಯನ್ನು ತಮ್ಮ ಕುಟುಂಬದವರೊಡನೆ ನೋಡಿದ ದಿನಗಳನ್ನು ಮೆಲುಕು ಹಾಕಿದರು.

Nissar ahmed comes mysuru to inaugurate Dasara on 21st Sep

ನಾನು ಮೈಸೂರಿಗೆ ಬರಲು ಸಂತೋಷ ಪಡುತ್ತೇನೆ ಎಂದ ಕವಿ ನಿಸಾರ್, ರಾಜ್ಯದಲ್ಲಿ ಒಳ್ಳೆಯ ಮಳೆ ಬೀಳುವ ಮೂಲಕ ರೈತರ ಸಂತಸಕ್ಕೆ ಕಾರಣವಾಗಿದೆ. ಈ ವರುಷ ಇದೇ ಪ್ರಾರ್ಥನೆಯನ್ನು ದೇವರಲ್ಲಿ ಮಾಡುತ್ತೇನೆ ಎಂದು ತಿಳಿಸಿದರು.

Photos : 407ನೇ ಮೈಸೂರು ದಸರಾಗೆ ವೈಭವದ ಚಾಲನೆ

ಪ್ರವಾಸಿಗರಿಗೆ ಆರತಿ ಬೆಳಗಿ ಸ್ವಾಗತ
ದೇಶ ವಿದೇಶಗಳಿಂದ ಜನರು ದಸರಾ ವೈಭವವನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಿದ್ದಾರೆ. ಮೈಸೂರಿನ ಜನನೀ ಟ್ರಸ್ಟ್ ವತಿಯಿಂದ ಮೈಸೂರಿಗೆ ಆಗಮಿಸಿದ ದೇಶ-ವಿದೇಶಗಳ ಆತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ವಿದೇಶದಿಂದ ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿದ ಜನತೆಯನ್ನು ಅರಮನೆಯ ಬಳಿ ಆರತಿ ಬೆಳಗಿ, ಹೂ ನೀಡಿ, ಮೈಸೂರು ಪೇಟ ತೊಡಿಸಿ, ಮಹಿಳೆಯರಿಗೆ ಬಳೆ ನೀಡಿ, ಪನ್ನೀರು ಚಿಮುಕಿಸಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.

ನಾಡಹಬ್ಬ ಉದ್ಘಾಟನೆ ನೆರವೇರಿಸಿದ ಕವಿ ನಿಸಾರ್ ಅಹ್ಮದ್ನಾಡಹಬ್ಬ ಉದ್ಘಾಟನೆ ನೆರವೇರಿಸಿದ ಕವಿ ನಿಸಾರ್ ಅಹ್ಮದ್

Nissar ahmed comes mysuru to inaugurate Dasara on 21st Sep

ಈ ಸಂದರ್ಭ ಮಾತನಾಡಿದ ಪ್ರವಾಸಿಗರು ದಸರಾ ವೈಭವವನ್ನು ಕಣ್ತುಂಬಿಕೊಳ್ಳಲು ಬಂದಿದ್ದೇವೆ. ನೀವು ಆತ್ಮೀಯವಾಗಿ ನಮ್ಮನ್ನು ಸ್ವಾಗತಿಸಿರುವುದು ನಮಗೆ ಸಂತಸ ನೀಡಿದೆ ಎಂದರು. ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಜು, ಅರಮನೆ ಆಡಳಿತ ಮಂಡಳಿಯ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣಿ, ಜನನಿ ಟ್ರಸ್ಟ್ ಅಧ್ಯಕ್ಷ .ಕೆ.ಅಶೋಕ್, ಡಿ.ಟಿ.ಪ್ರಕಾಶ್, ನಾಗರತ್ನಮ್ಮ ಮತ್ತಿತರರು ಉಪಸ್ಥಿತರಿದ್ದರು.

English summary
Kannada writer K S Nissar Ahmed has come to Mysuru on Sep 20th to inaugurate Mysuru Dasara on Sep 21st.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X