ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅರಮನೆ ದ್ವಾರದಲ್ಲಿ ಬೆಂಕಿ: ತಾತ್ಕಲಿಕ ಕೌಂಟರ್ ಓಪನ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 12 : ಅರಮನೆಯ ವರಾಹ ದ್ವಾರದ ಬಳಿ ಬೆಂಕಿ ಅವಘಡ ಸಂಭವಿಸಿದ್ದರಿಂದ ತಾತ್ಕಲಿಕವಾಗಿ ಅರಮನೆ ಆಡಳಿತ ಮಂಡಳಿ ಬೇರೊಂದು ಟಿಕೆಟ್ ಕೌಂಟರ್ ನ್ನು ತೆರೆದಿದ್ದಾರೆ.

ಇಂದು (ಮೇ 12) ಬೆಳ್ಳಂಬೆಳಿಗ್ಗೆ ಅರಮನೆ ವರಾಹ ದ್ವಾರದಲ್ಲಿರುವ ಬಳಿ ಬೆಂಕಿ ಆವರಿಸಿ ಟಿಕೆಟ್ ಕೌಂಟರ್ ಸಂಪೂರ್ಣವಾಗಿ ಸುಟ್ಟು ಹೋಗಿತ್ತು. ತಕ್ಷಣವೇ ಅವಘಡ ಸಂಭವಿಸಿದ ಘಟನಾ ಸ್ಥಳಕ್ಕೆ ಆಗಮಿಸಿದ್ದ ಬಾಂಬ್ ಪತ್ತೆ ದಳ ಹಾಗೂ ಶ್ವಾನದಳದ ಸಿಬ್ಬಂದಿ ವರ್ಗ ಬೆಂಕಿ ಬಿದ್ದ ಸ್ಥಳವನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಿದರು.[ಮೈಸೂರಿನ ಅರಮನೆ ದ್ವಾರದ ಆವರಣದಲ್ಲಿ ಬೆಂಕಿ]

New ticket counter opened in Mysuru Palace

ಒಂದು ಟಿಕೇಟ್ ಕೌಂಟರ್ ಗೆ ಬೆಂಕಿ ಬಿದ್ದಿರುವ ಹಿನ್ನೆಲೆಯಲ್ಲಿ ಮತ್ತೊಂದು ಟಿಕೆಟ್ ಕೌಂಟರ್ ಮೂಲಕ ಪ್ರವಾಸಿಗರಿಗೆ ಟಿಕೆಟ್ ವಿತರಣೆ ಮಾಡಲು ಅರಮನೆ ಆಡಳಿತ ಮಂಡಳಿ ವ್ಯವಸ್ಥೆ ಮಾಡಿದೆ.

ಬೆಂಕಿ ಪ್ರಕರಣಕ್ಕೆ ಕಾವಲುಗಾರನ ಹೇಳಿಕೆ:

ಬೆಳಗ್ಗೆ 5.45ರ ಸುಮಾರಿಗೆ ಮೂತ್ರ ವಿಸರ್ಜನೆಗೆ ಹೊರಗೆ ಹೋದೆ. ಮೂತ್ರ ವಿಸರ್ಜನೆ ಮಾಡಿ ಬಂದು ನೋಡಿದಾಗ ಎಟಿಎಂ ಬಾಗಿಲಲ್ಲಿ ಹೊಗೆ ಕಾಣಿಸಿಕೊಂಡಿತ್ತು.

ತಕ್ಷಣ ಪಕ್ಕದ ರೂಮಿನಲ್ಲಿ ಮಲಗಿದ್ದ ಪೊಲೀಸರು ಎಚ್ಚರಗೊಂಡು ಹೊರಗೆ ಬಂದರು. ಆಗ ನೋಡ ನೋಡುತ್ತಿದಂತೆ ಇಡೀ ಎಟಿಎಂಗೆ ಬೆಂಕಿ ಆವರಿಸಿಕೊಂಡಿತು.

ಕೂಡಲೇ ಪೊಲೀಸರು ಅಗ್ನಿಶಾಮಕ ದಳದವರಿಗೆ ಫೋನ್ ಮಾಡಿದರು. ಈ ಸಂದರ್ಭದಲ್ಲಿ ಪೊಲೀಸರ ಮೊಬೈಲ್ ಹಾಗೂ ಮಲಗಿದ್ದ ಹಾಸಿಗೆ ಸುಟ್ಟು ಕರಕಲಾಯಿತು ಎಂದು ಭಯದಿಂದಲೇ ಎಟಿಎಂ ಕಾವಾಲುಗಾರ ಶಿವಣ್ಣ ಅವರು ಘಟನೆ ಬಗ್ಗೆ ಹೇಳಿದರು.

ಅರಮನೆ ಆಡಳಿತ ಮಂಡಳಿ ವಿರುದ್ಧ ಆಕ್ರೋಶಗೊಂಡ ಮೇಯರ್
ವರಾಹ ದ್ವಾರದ ಬಳಿ ಬೆಂಕಿ ಬಿದ್ದಿದ್ದ ಸ್ಥಳವನ್ನು ಪರಿಶೀಲಿಸಲು ಆಗಮಿಸಿದ ವೇಳೆ ಇಲ್ಲಿ ಸ್ವಚ್ಛತೆ ಇಲ್ಲದಿರುವುದು ಮೇಯರ್ ಎಂ.ಜೆ ರವಿಕುಮಾರ್ ಅವರ ಗಮನಕ್ಕೆ ಬಂದಿದ್ದು ಅರಮನೆ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅರಮನೆಯ ವರಾಹ ದ್ವಾರದ ಬಳಿಯಿರುವ ಶುದ್ದ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿರುವುದಕ್ಕೆ ಕಿಡಿಕಾರಿದರು. ಅರಮನೆ ವರಾಹದ್ವಾರದ ಬಳಿ ಕುಡಿಯುವ ನೀರಿನ ಸ್ಥಳದಲ್ಲಿ ಸಂಗ್ರಹವಾಗಿದ್ದ ಪ್ಲಾಸ್ಟಿಕ್ ಬಾಟಲಿ ಸೇರಿದಂತೆ ಇನ್ನಿತರ ತ್ಯಾಜ್ಯಗಳನ್ನು ಮೇಯರ್ ಅವರು ಸ್ವತಃ ತಮ್ಮ ಕೈಯ್ಯಾರೆ ತಾವೇ ತೆರವುಗೊಳಿಸಿದರು.

English summary
The Bomb diffusion squad and sniffer dog squad visited the spot after the ticket counter was gutted in a fire at the Mysuru Palace this morning. Meanwhile, the Palace Board has opened another counter to issue tickets to the visitors
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X