ಐಟಿ ರೇಡ್ ಆಗುವಂತಹ ಸಿನಿಮಾಗಳು ಬರಲಿ : ನಟ ಡಾಲಿ ಧನಂಜಯ್
ಮೈಸೂರು, ಜನವರಿ 5 : ಮಾನವ ಕಳ್ಳ ಸಾಗಾಣಿಕೆ ಮತ್ತು ಲಾಕ್ರಿಮ್ ಸಿಂಡ್ರೋಮ್ ಕಾಯಿಲೆಗೆ ಒಳಗಾದ ಮಹಿಳೆ ಕಥಾಹಂದರ ಹೊಂದಿರುವ ಗಿಫ್ಟ್‍ಬಾಕ್ಸ್' ಪೋಸ್ಟರ್‍ಅನ್ನು ಬಿಡುಗಡೆಗೊಳಿಸಲಾಯಿತು.
ಗಿಫ್ಟ್‍ಬಾಕ್ಸ್' ಪೋಸ್ಟರ್‍ಅನ್ನು ನಟ ಧನಂಜಯ ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು, ಸಿನಿಮಾ ಪೋಸ್ಟರ್ ನೋಡಿದರೇ ಉತ್ತಮ ಕಥೆ ಹೊಂದಿದಂತಿದೆ. ಕನ್ನಡ ಸಿನಿಮಾ ಕ್ಷೇತ್ರ ಹಾಗೂ ಸಿನಿಮಾಗಳು ಬೆಳೆಯುತ್ತಿವೆ. ಮತ್ತಷ್ಟು ಐಟಿ ದಾಳಿಯಾಗುವ ಮಟ್ಟಕ್ಕೆ ಕನ್ನಡ ಸಿನಿಮಾಗಳು ಬೆಳೆಯಬೇಕು. ಅಲ್ಲದೆ, ಗಿಫ್ಟ್ ಬಾಕ್ಸ್ ಸಿನಿಮಾ ಕೂಡ ಐಟಿ ರೇಡ್ ಆಗುವಷ್ಟು ಜನಮೆಚ್ಚುಗೆ ಗಳಿಸಲಿ ಎಂದು ನುಡಿದು ಅಚ್ಚರಿ ಮೂಡಿಸಿದರು.
ನಿರ್ದೇಶಕ ರಘು ಮಾತನಾಡಿ, ಪಲ್ಲಟ ಸಿನಿಮಾದ ಮೂಲಕ ಕನ್ನಡಕ್ಕೆ ಉತ್ತಮ ಸಿನಿಮಾ ನೀಡಲಾಗಿದೆ. ಗಿಫ್ಟ್‍ಬಾಕ್ಸ್' ನನ್ನ ಎರಡನೇ ಸಿನಿಮಾವಾಗಿದೆ. ಮಾನವ ಸಾಗಾಣಿಕೆ ಹಾಗೂ ಲಾಕ್ರಿಮ್ ಸಿಂಡ್ರೋಮ್ ಕಾಯಿಲೆಗೆ ಒಳಗಾದ ಮಹಿಳೆ ಕಥೆಯನ್ನು ಇಟ್ಟುಕೊಂಡು ಸಿನಿಮಾ

ಮಾಡಲಾಗಿದೆ. ಪ್ರೇಕ್ಷಕರ ಮನಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಿರ್ಮಾಪಕ ಎನ್.ಎಸ್.ಶಂಕರ್, ಕತೆಗಾರ ಬಾದಲ್ ನಂಜುಂಡಸ್ವಾಮಿ ಮಾತನಾಡಿದರು. ಪೋಸ್ಟರ್ ವಿನ್ಯಾಸಕ ಗೌರೀಶ್ ಕಪನಿ, ಗಿಫ್ಟ್‍ಬಾಕ್ಸ್ ಸಿನಿಮಾ ನಾಯಕ ರೇಣುಕ್ ಮಠದ್, ನಾಯಕಿ ದೀಪ್ತಿ ಮೋಹನ್ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.












Click it and Unblock the Notifications