ರಾಹುಲ್ ಗಾಂಧಿ, 5 ಬಾರಿ ವಿಶ್ವೇಶ್ವರಯ್ಯ ಎನ್ನಲಿ ಸಾಕು: ಮೋದಿ
ಮೈಸೂರು, ಮೇ 01: ಚಾಮರಾಜನಗರದ ಸಂತೆಮರನಹಳ್ಳಿಯಲ್ಲಿ ಆಯೋಜಿಸಿದ್ದ ಬಿಜೆಪಿ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಮೋದಿ ಅವರು ತಮ್ಮ ಎಂದಿನ ಶೈಲಿಯಲ್ಲಿ ರಾಹುಲ್ ಗಾಂಧಿ ಅವರ ಬುದ್ಧಿವಂತಿಕೆ ಬಗ್ಗೆ ವ್ಯಂಗ್ಯ ಮಾಡಿದರು.
ಅದರಲ್ಲಿಯೂ ಇತ್ತಿಚೆಗೆ ರಾಹುಲ್ ಅವರು ಹಾಕಿದ್ದ '15 ನಿಮಿಷ' ಸವಾಲಿನ ಬಗ್ಗೆ ವ್ಯಂಗ್ಯ ಮಾಡಿದ ಮೋದಿ, ರಾಹುಲ್ ಗಾಂಧಿಗೆ 15 ನಿಮಿಷ ಮಾತನಾಡುವ ಬೌದ್ಧಿಕ ಸಾಮರ್ಥ್ಯ ಇದೆ ಎಂಬುದೇ ಆಶ್ಚರ್ಯ ಎಂದು ಚಟಾಕಿ ಹಾರಿಸಿದರು.
ರಾಹುಲ್ ಗಾಂಧಿಗೆ ಪ್ರತಿ ಸವಾಲು ಹಾಕಿದ ಮೋದಿ, 'ಸತತವಾಗಿ 15 ನಿಮಿಷಗಳ ಕಾಲ ಯಾವುದೇ ಕಾಗದ ನೋಡದೆ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಸಾಧನೆಗಳ ಬಗ್ಗೆ ಅವರಿಗೆ ಇಷ್ಟವಾದ ಭಾಷೆಯಲ್ಲಿ ಮಾತನಾಡಲಿ ನೋಡೋಣ' ಎಂದರು.

ಇತ್ತೀಚೆಗಷ್ಟೆ ಕರ್ನಾಟಕದ ಚುನಾವಣಾ ಪ್ರಚಾರದ ವೇಳೆ ವಿಶ್ವೇಶ್ವರಯ್ಯ ಅವರ ಹೆಸರನ್ನು ಹೇಳಲು ಪರದಾಡಿ ಕೊನೆಗೆ ಹೆಸರನ್ನು ತಪ್ಪಾಗಿ ಉಚ್ಚರಿಸಿ ನಗೆ ಪಾಟಲಿಗೀಡಾದ ರಾಹುಲ್ ಅವರನ್ನು ವ್ಯಂಗ್ಯ ಮಾಡಿದ ಮೋದಿ, 'ರಾಹುಲ್ ಅವರು 5 ಬಾರಿ ವಿಶ್ವೇಶ್ವರಯ್ಯ ಅವರ ಹೆಸರು ಹೇಳಲಿ ಸಾಕು' ಎಂದರು.
ರಾಹುಲ್ ಅವರು ಕನ್ನಡದ ಹೆಸರುಗಳನ್ನು ಅಪಭ್ರಂಶ ಮಾಡುತ್ತಿರುವುದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನಗೆ ಪಾಟಲಿಗೀಡಾಗುತ್ತಿದೆ. ವಿಶ್ವೇಶ್ವರಯ್ಯ ಅವರ ಹೆಸರು ಹೇಳಲು ಪರದಾಡಿದ ರಾಹುಲ್ ಅವರು ಈ ಮುಂಚೆ ಬಸವಣ್ಣ ಅವರ ವಚನವನ್ನು ಚಿತ್ರ ವಿಚಿತ್ರವಾಗಿ ಹೇಳಿ ನಗೆ ಪಾಟಲಿಗೀಡಾಗಿದ್ದರು.












Click it and Unblock the Notifications