• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜೂನ್ 8ಕ್ಕೆ ತೆರೆಯಲು ಸಜ್ಜಾಗುತ್ತಿದೆ ಮೈಸೂರು ಮೃಗಾಲಯ

By ಮೈಸೂರು ಪ್ರತಿನಿಧಿ
|

ಮೈಸೂರು, ಜೂನ್ 06: ಕೊರೊನಾ ಭೀತಿಯಿಂದಾಗಿ ಇಷ್ಟು ದಿನ ಮುಚ್ಚಿದ್ದ ಮೈಸೂರು ಮೃಗಾಲಯ ಜೂನ್ 8ರಿಂದ ಬೆಳಿಗ್ಗೆ 10 ಗಂಟೆಗೆ ಪುನರಾರಂಭಗೊಳ್ಳಲಿದ್ದು, ಸಾರ್ವಜನಿಕರಿಗೆ ಮುಕ್ತವಾಗಲಿದೆ.

ಕೆಲವು ಮಾರ್ಗಸೂಚಿಗಳೊಂದಿಗೆ ಮೃಗಾಲಯವನ್ನು ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದ್ದು, ಮೃಗಾಲಯ ಪುನರಾರಂಭಕ್ಕೆ ಸಿದ್ಧತೆ ನಡೆಯುತ್ತಿದೆ. ಮೃಗಾಲಯದ ಒಳಭಾಗದಲ್ಲಿ ಸಾಮಾಜಿಕ ಅಂತರಕ್ಕೆ ಆದ್ಯತೆ ನೀಡಲಾಗಿದೆ. ಪ್ರತಿ ಕೀ ಪಾಯಿಂಟ್‌ನಲ್ಲಿ ಸ್ಯಾನಿಟೈಸರ್ ಬಳಸುವುದನ್ನು ಕಡ್ಡಾಯ ಮಾಡಲಾಗಿದೆ. ಪ್ರವಾಸಿಗರ ಮಧ್ಯೆ 6 ಅಡಿ ಅಂತರವನ್ನು ಕಡ್ಡಾಯ‌ವಾಗಿ ಕಾಯ್ದುಕೊಳ್ಳಲು ತಿಳಿಸಿದ್ದು, ಗಂಟೆಗೆ ಒಂದು ಸಾವಿರ ಜನರಿಗೆ ಮಾತ್ರ ಪ್ರವೇಶಾವಕಾಶ ನೀಡಲಾಗಿದೆ.

ಕರ್ನಾಟಕದಲ್ಲಿ ಮೃಗಾಲಯಗಳು ಜೂನ್ 8 ರಿಂದ ಪುನರಾರಂಭ

ಒಂದು ಸಾವಿರ ಜನರಿಗಿಂತಲೂ ಹೆಚ್ಚಿದ್ದರೆ, ಒಂದು ಗಂಟೆ ಆದ ನಂತರ ಮೃಗಾಲಯಕ್ಕೆ ಪ್ರವೇಶ ಮಾಡಬೇಕು ಎಂಬ ನಿಯಮವನ್ನೂ ಹೇರಲಾಗಿದೆ. ಮೃಗಾಲಯದ ಒಳ ಪ್ರವೇಶಿಸುವಾಗ ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆ ಮಾಡಲಾಗುತ್ತದೆ. 10 ವರ್ಷದೊಳಗಿನ ಮಕ್ಕಳಿಗೆ, 65 ವರ್ಷದವರಿಗೆ ಮೃಗಾಲಯಕ್ಕೆ ಅನುಮತಿ ನೀಡಿಲ್ಲ.

ನಿತ್ಯ 8 ಗಂಟೆ ಮೃಗಾಲಯ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಉಸ್ತುವಾರಿ ಸಚಿವರು, ಸ್ಥಳೀಯ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಮೃಗಾಲಯ ಪುನರಾರಂಭವಾಗಲಿದ್ದು, ಮಂಗಳವಾರದಿಂದ 8.30ಕ್ಕೆ ಎಂದಿನಂತೆ ಆರಂಭವಾಗಲಿದೆ ಎಂದು ತಿಳಿದುಬಂದಿದೆ.

English summary
Mysuru zoo will restart from june 8, monday with government guidelines
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X