ಮೈಸೂರಿನ ವೇಶ್ಯಾವಾಟಿಕೆ ದಂಧೆಗೆ ಕೇರಳದ ನಂಟು!

ಮೈಸೂರು, ಡಿಸೆಂಬರ್, 09: ಹೊರ ರಾಜ್ಯದ ಆರು ಮಹಿಳೆಯರನ್ನು ವೇಶ್ಯಾವಾಟಿಕೆಗೆ ದೂಡಲು ಯತ್ನ ಮಾಡುತ್ತಿದ್ದ 5 ಜನ ಆರೋಪಿಗಳನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ.

ಮೈಸೂರು ಸಮೀಪದ ಅತಿಥಿ ಆರಾಧನಾ ರೆಸಾರ್ಟ್ ನಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ರೆಸಾರ್ಟ್ ನಡೆಸುತ್ತಿದ್ದ ಸ್ರೀವೆಲ್ಸನ್, ಲತೀಫ್, ಸುಲೇಮಾನ್, ಬಷೀರ್, ರಾಮನ್ ಕುಮಾರ್ ಎಂಬುವರನ್ನು ಬಂಧಿಸಲಾಗಿದೆ. ಬಂಧಿತ ಐದು ಜನರಲ್ಲಿ ನಾಲ್ವರು ಕೇರಳದವರು ಎಂಬುದು ಆತಂಕಕಾರಿ ಅಂಶ.[ಕೇರಳದ ಹೈಟೆಕ್ ವೇಶ್ಯಾವಾಟಿಕೆ ಜಾಲ ಭೇದಿಸಿದ್ದು ಹೇಗೆ?]

women

ಮುಂಬೈ ಮತ್ತು ಕೋಲ್ಕತ್ತಾ ಮೂಲದ ಮಹಿಳೆಯರನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ದೂಡಲು ಯತ್ನ ಮಾಡುತ್ತಿದ್ದರು. ರೆಸಾರ್ಟ್ ನಿಂದ ಆರು ಮಹಿಳೆಯರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಕಳೆದ ಕೆಲ ವರ್ಷಗಳ ಹಿಂದೆಯೂ ಇದೇ ಬಗೆಯ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ರೆಸಾರ್ಟ್ ಮೇಲೆ ದಾಳಿ ಮಾಡಲಾಗಿತ್ತು.[ವೇಶ್ಯಾವಾಟಿಕೆ ಜಾಲದಲ್ಲಿ ಸಿಕ್ಕಿಬಿದ್ದ ಕಿಸ್ ಆಫ್ ಲವ್ ನಾಯಕಿ]

ಆನ್ ಲೈನ್ ವೇಶ್ಯಾವಾಟಿಕೆ ಜಾಲ ಮತ್ತು ಮಕ್ಕಳ ಮಾರಾಟಕ್ಕೆ ಸಂಬಂಧಿಸಿ ಕೇರಳ ಪೊಲೀಸರು ರಾಹುಲ್ ಪಶುಪಾಲನ್ ಮತ್ತು ಆತನ ಪತ್ನಿ ಕಿಸ್ ಆಫ್ ಲವ್ ಅಭಿಯಾನದಲ್ಲಿ ಕಾಣಿಸಿಕೊಂಡಿದ್ದ ರೇಶ್ಮಿ ಆರ್ ನಾಯರ್ ಳನ್ನು ಕಳೆದ ತಿಂಗಳು ಬಂಧಿಸಿದ್ದು ಸುದ್ದಿಯಾಗಿತ್ತು. ಆಪರೇಶನ್ ಬಿಗ್ ಡ್ಯಾಡಿ ಎಂಬ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿದ್ದ ಪೊಲೀಸರಿಗೆ ಅನೇಕ ಆತಂಕಾರಿ ಮಾಹಿತಿ ಸಿಕ್ಕಿತ್ತು. ಇದೀಗ ಕರ್ನಾಟಕ ಪೊಲೀಸರು ಆರೋಪಿಗಳನ್ನು ಬೇಟೆಯಾಡಿದ್ದು ಎರಡು ಪ್ರಕರಣಗಳಿಗೂ ಸಂಬಂಧವಿದೆಯೇ ಎಂದು ತಾಳೆ ಹಾಕುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+