ಫೇಸ್ ಬುಕ್ ಪ್ರೇಮ, ಅತ್ಯಾಚಾರದಲ್ಲಿ ಅಂತ್ಯ: ಟೆಕ್ಕಿ ಬಂಧನ
ಮೈಸೂರು, ಜುಲೈ 19: ಫೇಸ್ಬುಕ್ ನಿಂದ ಆರಂಭವಾದ ಪ್ರೇಮವೊದು ಅತ್ಯಾಚಾರದಿಂದ ಅಂತ್ಯವಾದ ಘಟನೆ ಮೈಸೂರಿನ ಕುವೆಂಪು ನಗರದ 'ಎಂ' ಬ್ಲಾಕ್ ನಲ್ಲಿ ನಡೆದಿದೆ. ಆರೋಪಿ ಟೆಕ್ಕಿ, ಪ್ರೇಮ್ ಪಟೇಲ್(28)ನನ್ನು ಜುಲೈ 18 ರಂದು ಮೈಸೂರು ಪೊಲೀಸರು ಬಂಧಿಸಿದ್ದಾರೆ.
ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಪ್ರೇಮ್ ಪಟೇಲ್, ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಯುವತಿಯೊಬ್ಬಳನ್ನು ಪರಿಚಯಿಸಿಕೊಂಡಿದ್ದನು. ಸ್ನೇಹ ಕೆಲವೇ ದಿನದಲ್ಲಿ ಪ್ರೇಮವಾಗಿ ಬದಲಾಗಿತ್ತು. ಮದುವೆಯಾಗುವುದಾಗಿ ನಂಬಿಸಿ 6 ತಿಂಗಳ ಕಾಲ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ ಆತ, ನಂತರ ಬೇರೆ ಹುಡುಗಿಯ ಹಿಂದೆ ಬಿದ್ದಿದ್ದಾನೆ.

ಈಗ ಮದುವೆಯಾಗಲೊಲ್ಲೆ ಎನ್ನುತ್ತಿರುವ ಹುಡುಗನ ವಿರುದ್ಧ ಯುವತಿ ಇಲ್ಲಿನ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆರೋಪಿ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.












Click it and Unblock the Notifications