ರೈತರ ಪ್ರತಿಭಟನೆ: ಬಾಲಿವುಡ್ ನಟಿ ತಾಪ್ಸಿ ಪನ್ನು Vs ಪ್ರತಾಪ್ ಸಿಂಹ

ಮೈಸೂರು, ಫೆ 6: ದೆಹಲಿ ಗಡಿಯಲ್ಲಿ ಅನ್ನದಾತರು ನಡೆಸುತ್ತಿರುವ ಪ್ರತಿಭಟನೆಯ ವಿಚಾರದಲ್ಲಿ ಬಾಲಿವುಡ್ ಚಿತ್ರೋದ್ಯಮ ಇಬ್ಬಾಗವಾಗಿದೆ. ಪರ, ವಿರೋಧ ಚರ್ಚೆ, ಹೇಳಿಕೆಗಳು ಜೋರಾಗಿ ನಡೆಯುತ್ತಿದೆ.

ಕೆಲವು ದಿನಗಳ ಹಿಂದೆ ಸ್ಯಾಂಡಲ್ ವುಡ್ ನಟಿ ರಮ್ಯಾ ಅವರು ಅಕ್ಷಯ್ ಕುಮಾರ್ ಬಗ್ಗೆ ಟ್ವೀಟ್ ಮಾಡಿದ್ದರು. ನಮ್ಮ ದೇಶದ ಆಂತರಿಕ ವಿಚಾರದ ಬಗ್ಗೆ ಪರದೇಶದವರು ಕಾಮೆಂಟ್ ಮಾಡುತ್ತಿರುವುದಕ್ಕೆ ಅಕ್ಷಯ್ ಕುಮಾರ್ ಆಕ್ಷೇಪ ವ್ಯಕ್ತ ಪಡಿಸಿದ್ದರು.

ರೈತರ ಪ್ರತಿಭಟನೆಯನ್ನು ಸಮರ್ಥಿಸಿಕೊಂಡಿರುವ ಬಾಲಿವುಡ್ ನಟಿ ತಾಪ್ಸಿ ಪನ್ನು, ತಮ್ಮದೇ ಚಿತ್ರೋದ್ಯಮದ ಕಲಾವಿದರ ವಿರುದ್ದ ಕಿಡಿಕಾರಿದ್ದರು. ಈ ಸಂಬಂಧ, ತಾಪ್ಸಿ ಟ್ವೀಟ್ ಒಂದನ್ನು ಮಾಡಿದ್ದರು.

ತಾಪ್ಸಿ ಟ್ವೀಟ್ ಗೆ ಮೈಸೂರು ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. ತಾಪ್ಸಿ ಮಾಡಿರುವ ಟ್ವೀಟ್ ಸುಮಾರು ತೊಂಬತ್ತು ಸಾವಿರ ರಿಟ್ವೀಟ್ ಆಗಿದ್ದು, 282 ಸಾವಿರ ಲೈಕ್ ಅನ್ನು ಪಡೆದುಕೊಂಡಿದೆ.

ತಾಪ್ಸಿ ಮಾಡಿರುವ ಟ್ವೀಟ್ ಹೀಗಿದೆ

ತಾಪ್ಸಿ ಮಾಡಿರುವ ಟ್ವೀಟ್ ಹೀಗಿದೆ, "ಒಂದು ಟ್ವೀಟ್ ನಿಮ್ಮ ಒಗ್ಗಟ್ಟನ್ನು ಮುರಿಯುತ್ತದೆ ಅಂದರೆ, ಒಂದು ಜೋಕ್ಸ್ ನಿಮ್ಮ ನಂಬಿಕೆಯನ್ನು ಕಳೆದುಕೊಳ್ಳುತ್ತದೆ ಅಂದರೆ, ಒಂದು ಪ್ರದರ್ಶನ ನಿಮ್ಮ ಧರ್ಮದ ಮೇಲಿನ ನಂಬಿಕೆಯನ್ನು ಕೆರಳಿಸುವುದಾದರೆ, ಮೊದಲು ನೀವು ನಂಬಿರುವ ಮೌಲ್ಯಗಳನ್ನು ಗಟ್ಟಿಗೊಳಿಸಿ, ಅದು ಬಿಟ್ಟು ಉಳಿದವರಿಗೆ ಬುದ್ದಿ ಹೇಳಲು ಬರಬೇಡಿ"ಎಂದು ಬರೆದುಕೊಂಡಿದ್ದಾರೆ.

ತಾಪ್ಸಿ ಅವರ ಈ ಟ್ವೀಟ್ ಗೆ ಸುಮಾರು 25 ಸಾವಿರ ಪ್ರತಿಕ್ರಿಯೆ

ತಾಪ್ಸಿ ಅವರ ಈ ಟ್ವೀಟ್ ಗೆ ಸುಮಾರು 25 ಸಾವಿರ ಪ್ರತಿಕ್ರಿಯೆ

ತಾಪ್ಸಿ ಅವರ ಈ ಟ್ವೀಟ್ ಗೆ ಸುಮಾರು 25 ಸಾವಿರ ಪ್ರತಿಕ್ರಿಯೆಗಳು ಬಂದಿವೆ. 'ನಿಮಗೂ ಈ ಆಂದೋಲನಕ್ಕೂ ಏನು ಸಂಬಂಧ', 'ಬಿ-ಗ್ರೇಡ್ ಜನರ ಬಿ-ಗ್ರೇಡ್ ಥಿಂಕಿಂಗ್, ಪ್ರತಿಯೊಬ್ಬರು ತಮ್ಮ ದೇಶಕ್ಕಾಗಿ ನಿಲ್ಲಬೇಕು. ಇದೇ ಈ ಮಣ್ಣಿನ ಗುಣ, ಪುಕ್ಸಟೆ ಸಿಕ್ಕ ಹಣವನ್ನು ಬರೀ ತಿನ್ನೋದಕ್ಕೆ ಬಳಸಬೇಡಿ' ಈ ರೀತಿಯ ಪ್ರತಿಕ್ರಿಯೆಗಳು ತಾಪ್ಸಿ ಟ್ವೀಟ್ ಗೆ ಬಂದಿದೆ.

ಪ್ರತಾಪ್ ಸಿಂಹ್ ಅವರ ಖಡಕ್ ರಿಪ್ಲೈ ಹೀಗಿದೆ

ತಾಪ್ಸಿ ಟ್ವೀಟ್ ಗೆ ಸಂಸದ ಪ್ರತಾಪ್ ಸಿಂಹ್ ಅವರ ಖಡಕ್ ರಿಪ್ಲೈ ಹೀಗಿದೆ, "ಓ ತಾಪ್ಸಿ, ಓರ್ವ ರಶ್ದಿ ಭಾರತೀಯ ಮುಸ್ಲಿಮರನ್ನು ಕೆರಳಿಸಿತು. ಒಂದು ವ್ಯಂಗ್ಯ ಚಿತ್ರ ಪ್ರಪಂಚದಾದ್ಯಂತ ಮುಸ್ಲಿಮರನ್ನು ಕೆರಳಿಸಿತು. ಒಂದು ಪುಸ್ತಕ (ದಿ ಡಾ ವಿನ್ಸಿ ಕೋಡ್) ವಿಶ್ವದೆಲ್ಲೆಡೆ ಕ್ರಿಶ್ಚಿಯನರಲ್ಲಿ ಸಂಚಲನ ಮೂಡಿಸಿತ್ತು'.. ಮುಂದೆ..

ಸ್ಕ್ರಿಪ್ಟೆಡ್ ಸಿನಿಮಾ ಡೈಲಾಗ್

ಸ್ಕ್ರಿಪ್ಟೆಡ್ ಸಿನಿಮಾ ಡೈಲಾಗ್

"ಅಂತೆಯೇ ಕೇವಲ ಒಂದು ಬಾರಿ ಕೆನ್ನೆಗೆ ಬಾರಿಸಿದ್ದಕ್ಕೆ ನೀವು ಮದುವೆ ಮುರಿದುಕೊಂಡ್ರಿ. ದಯವಿಟ್ಟು ಸ್ಕ್ರಿಪ್ಟೆಡ್ ಸಿನಿಮಾ ಡೈಲಾಗ್ ಗಳಿಗೆ ನಿಮ್ಮನ್ನು ನೀವು ಸೀಮಿತಗೊಳಿಸಿಕೊಳ್ಳಿ. ಉಳಿದ ವಿಚಾರಗಳು ನಿಮ್ಮ ಜ್ಞಾನದ ಹೊರಗಿದೆ" ಎಂದು ಪ್ರತಾಪ್ ಸಿಂಹ ರಿಪ್ಲೈ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+