ಮೈಸೂರಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ; ಸಾ. ರಾ. ಮಹೇಶ್, ಸೋಮಶೇಖರ್ ಭೇಟಿ!

ಮೈಸೂರು, ಫೆಬ್ರವರಿ 09; ಮೈಸೂರು ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಚುನಾವಣೆಗೆ ಇಂದು ಮೀಸಲಾತಿ ಪ್ರಕಟವಾಗುವ ನಿರೀಕ್ಷೆ ಇದೆ. ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿಯುವುದು ಬಹುತೇಕ ಖಚಿತವಾಗಿದೆ.

ಮೈಸೂರು ನಗರದ ಆಡಳಿತ ಹಿಡಿಯಲು ಮೈತ್ರಿ ರಾಜಕಾರಣ ಆರಂಭವಾಗಿದೆ. ಜೆಡಿಎಸ್ ಶಾಸಕ ಸಾ. ರಾ. ಮಹೇಶ್ ನಿವಾಸಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ ಸೋಮಶೇಖರ್ ಭೇಟಿ ನೀಡಿದ್ದಾರೆ.

ಸೋಮವಾರ ಸಂಜೆ ಎಸ್. ಟಿ. ಸೋಮಶೇಖರ್ ಮತ್ತು ಸಾ. ರಾ. ಮಹೇಶ್ ಉಭಯ ಕುಶಲೋಪರಿ ನಡೆಸಿದ್ದಾರೆ. ಮೇಯರ್ ಮತ್ತು ಉಪಮೇಯರ್ ಚುನಾವಣೆ ಕುರಿತು ಬಿಜೆಪಿ ನಾಯಕರ ಜೊತೆ ಬೆಳಗ್ಗೆ ಸಭೆ ನಡೆಸಿದ್ದ ಸಚಿವರು ಸಂಜೆ ಜೆಡಿಎಸ್ ನಾಯಕರನ್ನು ಭೇಟಿ ಮಾಡಿದರು.

Mysuru Mayor Election ST Somashekar Meets Sa Ra Mahesh

ಕಾಂಗ್ರೆಸ್ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿದೆ ಎಂಬ ವರದಿಗಳಿಗೆ ತೆರೆ ಬಿದ್ದಿತ್ತು. ಸ್ವತಃ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮೈತ್ರಿ ಮಾಡಿಕೊಳ್ಳುವ ಸುದ್ದಿಯನ್ನು ತಳ್ಳಿ ಹಾಕಿದ್ದರು. ಆದ್ದರಿಂದ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಗೆ ವೇದಿಕೆ ಸಿದ್ಧವಾಗುತ್ತಿದೆ.

ಸಾ. ರಾ. ಮಹೇಶ್ ಭೇಟಿ ಬಳಿಕ ಮಾತನಾಡಿದ ಸಚಿವ ಎಸ್. ಟಿ. ಸೋಮಶೇಖರ್, "ಸಾ. ರಾ. ಮಹೇಶ್ ಮೈಸೂರು ಭಾಗದ ನಾಯಕ ಎಂದು ಅವರ ವರಿಷ್ಠರು ಹೇಳಿದ್ದಾರೆ. ಹಾಗಾಗಿ ಅವರ ಬಳಿ‌ ಮೈತ್ರಿಗೆ ಮನವಿ ಮಾಡುತ್ತೇವೆ. ಮೈತ್ರಿಯಾದರೆ ಮೇಯರ್ ಸ್ಥಾನ ಬಿಜೆಪಿಗೆ ನೀಡುವಂತೆ ಕೇಳಲಿದ್ದೇವೆ. ಸದ್ಯ, ಮೀಸಲಾತಿ ಇನ್ನೂ ಪಟ್ಟಿ‌ ಪ್ರಕಟವಾಗಿಲ್ಲ" ಎಂದರು.

"ಮೀಸಲಾತಿ ಪಟ್ಟಿ ಬಿಡುಗಡೆಯಾದ ಬಳಿಕ ಸಾ. ರಾ. ಮಹೇಶ್ ಜೊತೆ ಮತ್ತೊಮ್ಮೆ ಮಾತುಕತೆ ನಡೆಸುತ್ತೇವೆ" ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+