ದಸರಾ ಸಮಯದಲ್ಲೇ ಯುದುವೀರ್ ಎರಡನೇ ಮಗ ಜನಿಸಿದ್ರು ಅರಮನೆಗೆ ಸೂತಕ ಇರ್ಲಿಲ್ವಾ?
ಮೈಸೂರು, ಅಕ್ಟೋಬರ್ 16: ಈ ಬಾರಿ ನಾಡಹಬ್ಬ ದಸರಾದ ಸಂಭ್ರಮದ ಜೊತೆಗೆ ಮತ್ತೊಂದು ಸಂತೋಷ ಮನೆ ಮಾಡಿತ್ತು. ನವರಾತ್ರಿ ಹಾಗೂ ದಸರಾ, ಆಯುಧ ಪೂಜೆ ಸಂಭ್ರಮದ ಸಮಯದಲ್ಲೇ ಮೈಸೂರು ಒಡೆಯರ್ ರಾಜಪರಿವಾರಕ್ಕೆ ಹೊಸ ಸದಸ್ಯನ ಆಗಮನವಾಗಿದೆ. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಪತ್ನಿ ತ್ರಿಷಿಕಾ ದಂಪತಿಗೆ ಎರಡನೇ ಗಂಡು ಮಗು ಜನಿಸಿದ್ದು, ಈ ಬಾರಿ ದಸರಾ ಸಂತೋಷವನ್ನು ದುಪ್ಪಟ್ಟು ಮಾಡಿದೆ.
ನವರಾತ್ರಿ ಹಾಗೂ ದಸರಾ ಸಮಯದಲ್ಲೇ ಯುದುವೀರ್ ಒಡೆಯರ್‌ಗೆ ಎರಡನೇ ಮಗ ಜನಿಸಿದರೂ ಕೂಡ ಅರಮನೆಗೆ ಸೂತಕ ಇರ್ಲಿಲ್ವಾ ಎನ್ನುವ ಪ್ರಶ್ನೆ ಎಲ್ಲರಲ್ಲಿತ್ತು. ಈ ಪ್ರಶ್ನೆಗೆ ಆಧ್ಯಾತ್ಮಿಕ ಚಿಂತಕ ಡಾ.ಶೆಲ್ವ ಪಿಳ್ಳೈ ಉತ್ತರಿಸಿದ್ದಾರೆ.

ಈ ಬಗ್ಗೆ ವಿವರಿಸಿದ ಅವರು, 'ಅರಮನೆಯಲ್ಲಿ ಸೂತಕ ಎನ್ನುವುದು ಅನ್ವಯಿಸುವುದಿಲ್ಲ. ಯಾಕೆಂದರೆ ಅರಮನೆ ಮತ್ತು ದೇವಸ್ಥಾನಗಳಲ್ಲಿ ಕಂಕಣ ಧಾರಣೆಯನ್ನು ಮಾಡಿಕೊಂಡಿರುತ್ತಾರೆ. ಯಾವುದೋ ಒಂದು ಮುಖ್ಯವಾದ ಕೆಲಸದ ಸಮಯಗಳಲ್ಲಿ ಕಂಕಣ ಧಾರಣೆ ಮಾಡಿಕೊಂಡಿರುತ್ತಾರೆ. ಉದಾಹರಣೆಗೆ ಒಂದು ದೇವಸ್ಥಾನದ ಕುಂಭಾಭಿಷೇಕ ಅದು ಆಗುವ ತನಕ ಕಂಕಣ ಧಾರಣೆ ಮಾಡಿಕೊಂಡಿರುತ್ತಾರೆ. ಅದೇ ರೀತಿ ರಾಜವಂಶದಲ್ಲಿ ನವರಾತ್ರಿ ಮೊದಲ ದಿನವೇ ಕಂಕಣ ಧಾರಣೆ ಮಾಡಿಕೊಂಡಿರುತ್ತಾರೆ' ಎಂದರು.
'ವಿಜಯದಶಮಿಯ ಯಾತ್ರೆ ಮುಗಿಯುವ ತನಕ ನಮಗೆ ಯಾವುದೇ ಸೂತಕಗಳು ಬರದೇ ಇರಲಿ, ತಿಳಿದು ತಿಳಿಯದೆಯೇ ಯಾವುದೇ ರೀತಿಯ ಸೂತಕ ಬರದೇ ಇರಲಿ ಅಂತನೇ ಸಂಕಲ್ಪ ಮಾಡಲಾಗುತ್ತದೆ. ಮೊದಲ ದಿನ ಕಂಕಣ ಧಾರಣೆ ಮಾಡುವಾಗಲೇ, ಈ ಉತ್ಸವ ಆರಂಭಿಸುತ್ತಿದ್ದೇವೆ. ಈ ಉತ್ಸವದ ಮಧ್ಯದಲ್ಲಿ ಯಾವುದೇ ಸೂತಕ ತಾಗದೇ ಇರಲಿ ಅಂತಾಲೇ ಸಂಕಲ್ಪ ಮಾಡುತ್ತಾರೆ. ಕಂಕಣ ಧಾರಣೆ ಆಗಿರುವುದರಿಂದ ಕಂಕಣ ಇರುವ ತನಕ ಯಾವ ಸೂತಕವೂ ಅನ್ವಯಿಸುವುದಿಲ್ಲ' ಎಂದು ಹೇಳಿದರು.
'ಈ ರೀತಿಯ ಪರಿಸ್ಥಿತಿಗಳು ಈ ಹಿಂದೆ ಬಂದಿರುವುದನ್ನು ಕೂಡ ಗಮನಸಿದ್ದೇವೆ. ರಾಜ ಒಡೆಯರ್ ಅವರ ಕಾಲದಲ್ಲಿ ಒಡೆಯರ್ ಅವರು ಆಗ ತಾನೇ ಸಿಂಹಾಸನ ಏರಬೇಕಿತ್ತು. ಆದ ಅವರ ಮಗ ಮರಣ ಹೊಂದಿದರು. ರಾಜನ ಮಗನೇ ಮರಣ ಹೊಂದಿದರೆ ದಸರಾ ಮಾಡುವುದು ಹೇಗೆ? ಆಗ ಅವರು ಹೇಳುತ್ತಾರೆ ಕಂಕಣ ಧಾರಣೆ ಆಗಿರುವುದರಿಂದ ಇದು ಅನ್ವಯಿಸುವುದಿಲ್ಲ ಅಂತಾ ಹೇಳಿ ಅವರ ಅಣ್ಣ-ತಮ್ಮಂದಿರು ಆ ಕಾರ್ಯ ನಡೆಸುತ್ತಾರೆ. ಇವರು ನವರಾತ್ರಿ ಹಾಗೂ ದಸರಾವನ್ನು ಸಂಪೂರ್ಣಗೊಳಿಸುತ್ತಾರೆ' ಎಂದು ಡಾ.ಶೆಲ್ವ ಪಿಳ್ಳೈ ಉದಾಹರಣೆ ಸಮೇತ ವಿವರಿಸಿದರು.












Click it and Unblock the Notifications