ಮೈಸೂರು: 'ಧೂಮಕೇತು'ಗಳಿಗಾಗಿ ಪ್ರತ್ಯೇಕ ಹೊಗೆಗೂಡು!

ಮೈಸೂರು, ಜೂನ್ 9: ಮೈಸೂರಿನಲ್ಲಿ ಬೀಡುಬಿಟ್ಟವರು ಇನ್ಮುಂದೆ ಸಾರ್ವಜನಿಕವಾಗಿ ಸಿಗರೇಟು ಸೇದುವ ಮುನ್ನ ಹತ್ತಾರು ಬಾರಿ ಯೋಚಿಸಬೇಕು. ಎಲ್ಲೆಂದರಲ್ಲಿ ಸ್ಮೋಕಿಂಗ್ ಮಾಡುವಂತಿಲ್ಲ. ತೀರಾ ಧೂಮಪಾನ ಮಾಡಲೇಬೇಕು ಅಂತಾದರೆ

ಸೀದಾ ಬೂತಿಗೆ (cubicle) ತೆರಳಿ ಅಲ್ಲಿ ಮನಸಾರೆ ದಂ ಎಳೆದು ಹೊರಬರಬಹುದು. ಹೌದು ಮೈಸೂರು ಧೂಮ ಪ್ರಿಯರಿಗಾಗಿ ಇಂತಹದೊಂದು ವಿನೂತನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಆರೋಗ್ಯ ಇಲಾಖೆಯು ಧೂಮಪಾನಕ್ಕೆ ಕಡಿವಾಣ ಹಾಕಲೇಬೇಕೆಂದು ಆಗಾಗ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದುಂಟು. ಆದರೆ ಧೂಮ ಪ್ರಿಯ ತಮ್ಮ ಸಿಗರೇಟಿನ ಮೇಲೆ ನೀರೆರೆಯುವ ಬದಲು ಜಾಣತನದಿಂದ ಇಲಾಖೆಯ ಪ್ರಯತ್ನಗಳ ಮೇಲೆ ನೀರು ಎರಚುತ್ತಾರೆ.

ಸ್ಮೋಕರ್ಸ್ ಕೈಗೆಟುಕುವಂತೆ ಹೊಗೆ ಚಿಮಣಿಗಳು:

Mysore district health dept to provide separate cubicles for smokers to puff away
ತನ್ನ ಕಠಿಣ ಕ್ರಮಗಳು ನೀರಿನಲ್ಲಿ ಮಾಡಿದ ಹೋಮದಂತಾಗುತ್ತಿದೆ ಎಂಬುದನ್ನು ಅರಿತ ಇಲಾಖೆಗೆ ಧೂಮ ಪ್ರಿಯರು ದಾರಿಗೆ ಬರುವವರ ಯಳಿ ಅಲ್ಲ ಎಂಬುದು ಮನದಟ್ಟಾಗಿದೆ. ಹಾಗಾಗಿ ನಗರದಾದ್ಯಂತ ಅಲ್ಲಲ್ಲಿ ಸ್ಮೋಕರ್ಸ್ ಕೈಗೆಟುಕುವಂತೆ ಬೂತ್ (cubicle) ಗಳನ್ನು ತೆರೆಯಲು ಆಲೋಚಿಸುತ್ತಿದೆ. ಈ ಹೊಗೆ ಗೂಡುಗಳು ಅಸ್ತಿತ್ವಕ್ಕೆ ಬರುತ್ತಿದ್ದಂತೆ ಸ್ಮೋಕರ್ಸ್ ಸಾರ್ವಜನಿಕ ಸ್ಥಳದಲ್ಲಿ ಸಿಗರೇಟು ಸೇದುವಂತಿಲ್ಲ.

ಧೂಮ ಕೇತುಗಳಿಂದ ಸಾಮಾನ್ಯ ಜನ ಪಾರು:
ಬಾಯಿಗೆ ಸಿಗರೇಟು ಸಿಕ್ಕಿಸಿಕೊಂಡು ಸೀದಾ ಈ ಹೀಗೆ ಚಿಮಣಿಗಳೊಳಕ್ಕೆ ಹೊಕ್ಕು ಹೊಗೆ ಬಿಡಬೇಕಾಗುತ್ತದೆ. ಅಷ್ಟರಮಟ್ಟಿಗೆ ಹೊರಗಿನ ಜನ ಧೂಮ ಕಾಟದಿಂದ ಬಚಾವಾಗಬಹುದು.

'ಬೆಂಗಳೂರು ಮಿರರ್' ಪತ್ರಿಕೆಯ ವರದಿ ಪ್ರಕಾರ ಜಿಲ್ಲಾ ಆರೋಗ್ಯ ಇಲಾಖೆ ಹೊಗೆ ಚಿಮಣಿಗಳ ನಿರ್ಮಾಣಕ್ಕೆ ಮುಂದಾಗಿದೆಯಂತೆ. ಉನ್ನತಾಧಿಕಾರಿಯೊಬ್ಬರು ಇತ್ತೀಚೆಗೆ ವಿದೇಶ ಪ್ರವಾಸಕ್ಕೆ ಹೋದಾಗ ಇಂತಹ ಗೂಡುಗಳನ್ನು ಕಂಡು ಬಂದಿದ್ದರಂತೆ. ಹಾಗಾಗಿ ಅದನ್ನೇ ಮೈಸೂರಿನಲ್ಲೂ ಜಾರಿಗೊಳಿಸಲು ಮುಂದಾಗಿದ್ದಾರೆ.

ಅಂದಹಾಗೆ ಮೈಸೂರಿನ ಕೆಲವೇ ಮಾಲ್ ಮತ್ತು ಹೋಟೆಲುಗಳಲ್ಲಿ ಇಂತಹ ಹೊಗೆ ಚಿಮಣಿಗಳು ಇವೆ. ಇನ್ಮುಂದೆ ಸರಕಾರಿ ಹೊಗೆ ಗೂಡುಗಳು ಬಸ್ ನಿಲ್ದಾಣ, ರೈಲು ನಿಲ್ದಾಣ, ಆಸ್ಪತ್ರೆಗಳು, ಪ್ರವಾಸಿ ಕೇಂದ್ರಗಳ ಬಳಿ ತಲೆಯೆತ್ತಲಿವೆ. ಗಮನಾರ್ಹವೆಂದರೆ ವಿದ್ಯಾರ್ಥಿಗಳು, ಪಡ್ಡೆಗಳಿಗೆ ಇವು ಹೇಳಿ ಮಾಡಿಸಿದಂತಾಗಬಲ್ಲದು.

ಹೊರಗಿನ ಜಗತ್ತಿಗೆ ಕಾಣದಂತೆ ಗೌಪ್ಯವಾಗಿ ಸ್ಮೋಕಿಂಗ್ ಮಾಡಬಹುದು ಎಂದು ಈಗಾಗಲೇ ಆಲೋಚಿಸುತ್ತಿರುವವರಿಗೆ ಕಡಿವಾಣ ಹಾಕಲು ಹೊಗೆ ಚಿಮಣಿಗಳನ್ನು ಪಾರದರ್ಶಕಗೊಳಿಸಲು ಅಂದರೆ ಹೆಚ್ಚಾಗಿ ಗ್ಲಾಸ್ ಗೋಡೆಗಳಿಂದ ಇವು ಆವೃತ್ತವಾಗಿರುತ್ತವೆ. ಧೂಮ ಪ್ರಿಯರು ಆರಾಮವಾಗಿ ಚೇರುಗಳಲ್ಲಿ ಕುಳಿತು ಸಿಗರೇಟು ಸೇದುವಂತಾಗಲು ಆಸನಗಳನ್ನು ಹಾಕಲಾಗುತ್ತದೆ. ಜತೆಗೆ ರಾತ್ರಿ ವೇಳೆಯೂ ಇವು ಕಾರ್ಯವಹಿಸುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+