ಶನಿವಾರ ಮೈಸೂರು ಪ್ರವಾಸ: ವಾಹನ ಸಂಚಾರ, ನಿಲುಗಡೆಗೆ ನಿರ್ಬಂಧ ಮಾಹಿತಿ

ಮೈಸೂರು, ಆಗಸ್ಟ್ 09: ವಾರಾಂತ್ಯದ ರಜೆಯಲ್ಲಿ ಬೆಂಗಳೂರು ಬಿಟ್ಟು ಮೈಸೂರು ಕಡೆ ಸಾಗುವ ಆಲೋಚನೆ ಇದ್ದರೆ ತಪ್ಪದೇ ಗಮನಿಸಿ. ರಾಜಕೀಯ ಪಕ್ಷಗಳ ಪಾದಯಾತ್ರೆ, ಸಮಾವೇಶದ ಕಾರಣಕ್ಕೆ ಎರಡು ದಿನಗಳ ಕಾಲ ಮೈಸೂರು ನಗರ ಫುಲ್ ಬ್ಯುಸಿ ಆಗಿರಲಿದೆ. ಶನಿವಾರ (ಆಗಸ್ಟ್ 10) ಬಿಜೆಪಿ-ಜೆಡಿಎಸ್ ಪಕ್ಷಗಳ ಪಾದಯಾತ್ರೆ ಸಮಾವೇಶದ ಹಿನ್ನಲೆಯಲ್ಲಿ ನಗರದಲ್ಲಿ ಸಂಚಾರ ದಟ್ಟಣೆ ಉಂಟಾಗುವ ನಿರೀಕ್ಷೆ ಇದೆ.

ಮೈಸೂರು ನಗರ ಪೊಲೀಸರು ಈಗಾಗಲೇ ದಿನಾಂಕ 10/08/2024ರಂದು ಬಿಜೆಪಿ-ಜೆಡಿಎಸ್ ಪಕ್ಷದ ಪಾದಯಾತ್ರೆ ಮತ್ತು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಸಮಾವೇಶದ ಹಿನ್ನಲೆಯಲ್ಲಿ ಶುಕ್ರವಾರ ಮತ್ತು ಶನಿವಾರ ನಗರದಲ್ಲಿ ವಾಹನಗಳ ಸಂಚಾರದ ಮೇಲೆ ಮತ್ತು ನಿಲುಗಡೆ ಮೇಲೆ ನಿರ್ಬಂಧ ವಿಧಿಸಿ ಆದೇಶವನ್ನು ಹೊರಡಿಸಿದ್ದಾರೆ.

Mysore Chalo Padayatra Traffic Restrictions In Mysuru City On August 9 And 10

ಈ ಕುರಿತು ಸೀಮಾ ಲಾಟ್ಕರ್, ಪೊಲೀಸ್ ಆಯುಕ್ತರು, ಮೈಸೂರು ನಗರ ಆದೇಶವನ್ನು ಹೊರಡಿಸಿದ್ದಾರೆ. 'ಮೈಸೂರು ಚಲೋ ಪಾದಯಾತ್ರೆ' ಮತ್ತು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಸಮಾವೇಶ ಕಾರ್ಯಕ್ರಮಕ್ಕೆ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಲಿದ್ದು, ಪಾದಯಾತ್ರೆ ಸಾಗುವ ಮಾರ್ಗಗಳಲ್ಲಿ ಮತ್ತು ಕಾರ್ಯಕ್ರಮ ನಡೆಯುವ ಮಹಾರಾಜ ಕಾಲೇಜು ಮೈದಾನದ ಸುತ್ತಲಿನ ರಸ್ತೆಗಳಲ್ಲಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗಿ ಸುಗಮ ಸಂಚಾರಕ್ಕೆ ಅಡಚಣೆಯುಂಟಾಗುವ ಸಾಧ್ಯತೆಯಿರುವುದರಿಂದ ವಾಹನ ಸಂಚಾರವನ್ನು ಮತ್ತು ವಾಹನಗಳ ನಿಲುಗಡೆಗೆ ನಿರ್ಬಂಧವನ್ನು ವಿಧಿಸಿ ಬದಲಿ ಮಾರ್ಗಗಳನ್ನು ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.

ಶುಕ್ರವಾರ ಸಂಜೆಯ ನಿರ್ಬಂಧಗಳು ಹೀಗಿದೆ: ದಿನಾಂಕ 9/8/2024ರ ಶುಕ್ರವಾರ ಸಂಜೆ 4 ಗಂಟೆಯಿಂದ 8 ಗಂಟೆಯವರೆಗೆ ಮೈಸೂರಿನಿಂದ ಬೆಂಗಳೂರಿಗೆ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳು ಮತ್ತು ಇತರೆ ವಾಹನಗಳು ಫೌಂಟೆನ್ ವೃತ್ತ- ಎಲ್.ಐ.ಸಿ ವೃತ್ತ- ಲಿಂಕ್ ರಸ್ತೆ ಜಂಕ್ಷನ್- ಹಳೆ ಮೈಸೂರು ಬೆಂಗಳೂರು ರಸ್ತೆ- ಕೆಂಪೇಗೌಡ ಜಂಕ್ಷನ್ ಮೂಲಕ ಸಂಚರಿಸುವ ಬದಲಿಗೆ ಈ ಮಾರ್ಗಗಳನ್ನು ಉಪಯೋಗಿಸಲು ಸೂಚಿಸಿದೆ.

* ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ-ಸರ್ಕಾರಿ ಭವನ ಉತ್ತರ ದ್ವಾರ ಜಂಕ್ಷನ್- ಕಾಳಿಕಾಂಭ ಜಂಕ್ಷನ್- ಸಮೋಸಾ ಕಾರ್ನರ್-ಉದಯಗಿರಿ ರಸ್ತೆ-ಉದಯಗಿರಿ ಜಂಕ್ಷನ್- ಮಹದೇವಪುರ ರಿಂಗ್ ರಸ್ತೆ ಜಂಕ್ಷನ್- ರಮ್ಮನಹಳ್ಳಿ ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ಸಾಗುವುದು.

* ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ ಸರ್ಕಾರಿ ಭವನ ಉತ್ತರ ದ್ವಾರ ಜಂಕ್ಷನ್- ಕಾಳಿಕಾಂಭ ಜಂಕ್ಷನ್- ನಜರ್‌ಬಾದ್ ವೃತ್ತ-ಎಂ.ಎಂ.ರಸ್ತೆ- ಆರ್.ಮಹದೇವಪ್ಪ ವೃತ್ತ- ದೇವಗೌಡ ವೃತ್ತ- ಬನ್ನೂರು- ಮಳವಳ್ಳಿ ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ಸಾಗುವುದು.

* ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ-ಹಾರ್ಡಿಂಜ್ ವೃತ್ತ-ಗನ್ ಹೌಸ್ ವೃತ್ತ-ರಾಮಸ್ವಾಮಿ ವೃತ್ತ- ಮೂಡಾ ಜಂಕ್ಷನ್- ಮೆಟ್ರೋಪೋಲ್ ವೃತ್ತ- ದಾಸಪ್ಪ ವೃತ್ತ- ಕೆ.ಆರ್.ಎಸ್ ರಸ್ತೆ- ರಾಯಲ್ ಇನ್ ಜಂಕ್ಷನ್- ಪಾಲಹಳ್ಳಿ ಪಂಪ್‌ಹೌಸ್‌- ಶ್ರೀರಂಗಪಟ್ಟಣ ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ಸಾಗುವುದು.

* ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ-ಇರ್ವಿನ್ ರಸ್ತೆ- ನೆಹರು ವೃತ್ತ- ಆಯುರ್ವೇದಿಕ್ ವೃತ್ತ- ರೈಲ್ವೇ ನಿಲ್ದಾಣ- ದಾಸಪ್ಪ ವೃತ್ತ- ಕೆ.ಆರ್.ಎಸ್ ರಸ್ತೆ- ರಾಯಲ್ ಇನ್ ಜಂಕ್ಷನ್- ಪಾಲಹಳ್ಳಿ- ಪಂಪ್ ಹೌಸ್- ಶ್ರೀರಂಗಪಟ್ಟಣ ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ಸಾಗುವುದು.

ಬೆಂಗಳೂರಿನಿಂದ ಮೈಸೂರು ನಗರಕ್ಕೆ ಆಗಮಿಸುವ ವಾಹನಗಳು ಎಕ್ಸ್‌ಪ್ರೆಸ್ ವೇ ಮತ್ತು ಸರ್ವೀಸ್ ರಸ್ತೆ ಮೂಲಕ ಸಂಚರಿಸುವ ಬದಲಿಗೆ ಈ ಕೆಳಕಂಡ ಮಾರ್ಗ ಉಪಯೋಗಿಸಲು ಸೂಚಿಸಿದೆ.

* ಗೌರಿ ಪುರ- ಶ್ರೀರಂಗಪಟ್ಟಣ- ಪಶ್ಚಿಮವಾಹಿನಿ- ರಾಯಲ್ ಇನ್ ಜಂಕ್ಷನ್- ಕೆ.ಆರ್.ಎಸ್ ರಸ್ತೆ- ದಾಸಪ್ಪ ವೃತ್ತದ ಮೂಲಕ ಬಸ್‌ ನಿಲ್ದಾಣ ತಲುಪುವುದು.

* ಕಳಸ್ತವಾಡಿ- ಮಹದೇವಪುರ ರಸ್ತೆ- ಪುಷ್ಪಾಶ್ರಮ ಜಂಕ್ಷನ್- ಮಹದೇವಪುರ ರಿಂಗ್ ರಸ್ತೆ ಜಂಕ್ಷನ್- ಉದಯಗಿರಿ ರಸ್ತೆ- ಕಾಳಿಕಾಂಭ ಜಂಕ್ಷನ್ ಮೂಲಕ ಬಸ್ ನಿಲ್ದಾಣ ತಲುಪುವುದು.

* ಕನಕಪುರ- ಮಳವಳ್ಳಿ- ಬನ್ನೂರು- ದೇವೇಗೌಡ ವೃತ್ತ- ಎಂ.ಎಂ ರಸ್ತೆ- ನಜರ್‌ಬಾದ್ ವೃತ್ತದ ಮೂಲಕ ಬಸ್‌ ನಿಲ್ದಾಣ ತಲುಪುವುದು.

ಕೆಂಪೇಗೌಡ ಜಂಕ್ಷನ್- ನ್ಯೂ ಬೆಂಗಳೂರು ಮೈಸೂರು ರಸ್ತೆ- ಎಲ್.ಐ.ಸಿ ವೃತ್ತ- ನೆಲ್ಸನ್ ಮಂಡೇಲಾ ರಸ್ತೆ- ಹೈವೇ ವೃತ್ತ- ಎಸ್ ಆರ್ ರಸ್ತೆ- ಡೆಫ್ & ಡಂಬ್ ಜಂಕ್ಷನ್ ಆರ್.ಎಂ.ಸಿ ವೃತ್ತ- ಜೆ.ಕೆ.ಮೈದಾನ ಜಂಕ್ಷನ್ (ಮೇಲ್ಕಂಡ ರಸ್ತೆಗಳಲ್ಲಿ ವಾಹನ ಸಂಚಾರ ಮತ್ತು ನಿಲುಗಡೆಯನ್ನು ನಿಷೇಧಿಸಿದೆ)

ಆಗಸ್ಟ್ 10ರ ಶನಿವಾರ: ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಾಹನಗಳ ಸಂಚಾರ ಮತ್ತು ನಿಲುಗಡೆಯನ್ನು ರಾಮಸ್ವಾಮಿ ವೃತ್ತದಿಂದ ಅಗ್ನಿಶಾಮಕ ಠಾಣೆ ಜಂಕ್ಷನ್ ವರೆಗಿನ ರಸ್ತೆಯ ಎರಡು ಕಡೆಗಳಲ್ಲಿ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳ ಸಂಚಾರ ಮತ್ತು ವಾಹನ ನಿಲುಗಡೆಯನ್ನು ನಿರ್ಬಂಧಿಸಿದೆ. (ಕಾರ್ಯಕ್ರಮಕ್ಕೆ ಆಗಮಿಸುವ ಆಗಮಿಸುವ ವಾಹನಗಳನ್ನು ಹೊರತುಪಡಿಸಿ)

ಮೂಡಾ ಜಂಕ್ಷನ್‌ನಿಂದ ವಿ.ಎಂ.ಡಿ ಜಂಕ್ಷನ್ ವರೆಗೆ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿದೆ. (ಕಾರ್ಯಕ್ರಮಕ್ಕೆ ಆಗಮಿಸುವ ಆಗಮಿಸುವ ವಾಹನಗಳನ್ನು ಹೊರತುಪಡಿಸಿ)

ಡಿ.ಸಿ ಕಛೇರಿ ಆರ್ಚ್ ಗೇಟ್ ಜಂಕ್ಷನ್‌ನಿಂದ ಕೋರ್ಟ್ ಜಂಕ್ಷನ್‌ವರೆಗಿನ ಕೆ.ಆರ್.ಬಿ ರಸ್ತೆಯ ಎರಡು ಕಡೆಗಳಲ್ಲಿ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳ ಮತ್ತು ವಾಹನ ನಿಲುಗಡೆಯನ್ನು ನಿರ್ಬಂಧಿಸಿದೆ. (ಕಾರ್ಯಕ್ರಮಕ್ಕೆ ಆಗಮಿಸುವ ಆಗಮಿಸುವ ವಾಹನಗಳನ್ನು ಹೊರತುಪಡಿಸಿ)

ಜೆ.ಎಲ್.ಬಿ ರಸ್ತೆಯಲ್ಲಿ ಮೆಟ್ರೋಪೋಲ್ ವೃತ್ತದಿಂದ ರಾಮಸ್ವಾಮಿ ವೃತ್ತದವರೆಗೆ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿದೆ. (ಕಾರ್ಯಕ್ರಮಕ್ಕೆ ಆಗಮಿಸುವ ಆಗಮಿಸುವ ವಾಹನಗಳನ್ನು ಹೊರತುಪಡಿಸಿ)

ಬಿಜೆಪಿ-ಜೆಡಿಎಸ್ ಪಾದಯಾತ್ರೆ ಮೆರವಣಿಗೆ ಸಂಚರಿಸಲಿದ್ದು, ಈ ಮಾರ್ಗದ ಬದಲಿಗೆ ಪರ್ಯಾಯ ರಸ್ತೆಗಳನ್ನು ಉಪಯೋಗಿಸಲು ಸೂಚಿಸಿದೆ. ಜೆ.ಕೆ.ಮೈದಾನ ಜಂಕ್ಷನ್- ಗಾಯತ್ರಿಭವನ್ ಜಂಕ್ಷನ್- ದಿವಾನ್ಸ್ ರಸ್ತೆ-ಶಿವರಾಂಪೇಟೆ ರಸ್ತೆ- ಎನ್.ಎಸ್.ರಸ್ತೆ- ಚಾಮರಾಜ ಡಬಲ್ ರಸ್ತೆ- ಜೆ.ಎಲ್.ಬಿ ರಸ್ತೆ- ಕೆ.ಆರ್.ಬಿ ರಸ್ತೆ- ಸ್ವಿಮಿಂಗ್ ಪೂಲ್ ರಸ್ತೆ (ಮೇಲ್ಕಂಡ ರಸ್ತೆಗಳಲ್ಲಿ ವಾಹನ ಸಂಚಾರ ಮತ್ತು ನಿಲುಗಡೆಯನ್ನು ನಿಷೇಧಿಸಿದೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+