ಮೈಸೂರು: ಪಾರ್ಕ್‌ನಲ್ಲಿ ಬಾಂಬ್ ಇಟ್ಟಿರುವುದಾಗಿ ಅಪರಿಚಿತ ಕರೆ
Recommended Video

ಅಪರಿಚಿತ ಕರೆಗೆ ಬಿಚ್ಚಿ ಬಿದ್ದ ಮೈಸೂರು | Oneindia Kannada
ಮೈಸೂರು, ಡಿಸೆಂಬರ್ 20: ನಗರದ ಪೀಪಲ್ಸ್ ಪಾರ್ಕ್ ನಲ್ಲಿ ಬಾಂಬ್ ಇಟ್ಟಿರುವುದಾಗಿ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿದ ಕಾರಣ ಆತಂಕ ನಿರ್ಮಾಣವಾಗಿದೆ.
ಪೊಲೀಸ್ ನಿಯಂತ್ರಣ ವಿಭಾಗಕ್ಕೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ಪೀಪಲ್ಸ್ ಪಾರ್ಕ್‌ನಲ್ಲಿ ಬಾಂಬ್ ಇಟ್ಟಿರುವುದಾಗಿ ಹೇಳಿದ್ದಾನೆ. ಹಾಗಾಗಿ ಪೀಪಲ್ಸ್ ಪಾರ್ಕ್‌ಗೆ ಬಾಂಬ್ ನಿಷ್ಟ್ರೀಯ ದಳ ದೌಡಾಯಿಸಿದ್ದು, ತಪಾಸಣೆ ನಡೆಸಲಾಗುತ್ತಿದೆ.

ಪಾರ್ಕ್‌ನಲ್ಲಿರುವ ಬಟ್ಟೆಯಿಂದ ಸುತ್ತಿದ ಅನುಮಾನಾಸ್ಪದ ವಸ್ತುವೊಂದು ಕಂಡು ಬಂದಿದ್ದು, ಅದೇ ಬಾಂಬ್ ಆಗಿರಬಹುದು ಎಂಬ ಗುಮಾನಿ ವ್ಯಕ್ತವಾಗಿದೆ. ಹೆಚ್ಚಿನ ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸುತ್ತಿದ್ದಾರೆ.
ವಿಷಯ ತಿಳಿದು ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ, ಪೀಪಲ್ಸ್ ಪಾರ್ಕ್ ಮತ್ತು ಅದಕ್ಕೆ ಹೊಂದಿಕೊಂಡತೆ ಇರುವ ಬಸ್ ನಿಲ್ದಾಣದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.












Click it and Unblock the Notifications