ಮೈಸೂರಲ್ಲಿ ಜ. 23ರಿಂದ ಮುಡುಕುತೊರೆ ಜಾತ್ರೆ
ಮೈಸೂರು, ಜ. 20: ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಜ. 23ರಿಂದ ಫೆಬ್ರವರಿ 8ರ ವರಗೆ ಟಿ. ನರಸೀಪುರ ತಾಲೂಕಿನ ಮುಡುಕುತೊರೆ ಗ್ರಾಮದಲ್ಲಿ ಶ್ರೀ ಮಲ್ಲಿಕಾರ್ಜುನಸ್ವಾಮಿ ಜಾತ್ರೆ ಆಯೋಜಿಸಲಾಗಿದೆ. [ಮುಡುಕುತೊರೆ ಜಾತ್ರೆ ವಿಶೇಷತೆ]

ಜ. 23ರಂದು ಅಂಕುರಾರ್ಪಣದೊಂದಿಗೆ ಜಾತ್ರೆಗೆ ಚಾಲನೆ ನೀಡಲಾಗುವುದು. ಪ್ರತಿದಿನವೂ ವಿಶಿಷ್ಠ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 24ರಂದು ಧ್ವಜಾರೋಹಣ, 25ರಂದು ಚಂದ್ರಮಂಡಲಾರೋಹಣ, 26ರಂದು ಅನಂತ ಪೀಠಾರೋಹಣ, 27ರಂದು ಪುಷ್ಯಮಂಟಪಾರೋಹಣ, 28ರಂದು ವೃಷಭಾರೋಹಣ, 29ರಂದು ಗಿರಿಜಾಕಲ್ಯಾಣ ಗಜಾರೋಹಣ, 30ರಂದು ಶ್ರೀಮದ್ ದಿವ್ಯ ಬ್ರಹ್ಮರಥೋತ್ಸವ, ಜ. 31ರಂದು ಚಿತ್ರರಥ ಹಾಗೂ ಶಯನೋತ್ಸವ ಆಯೋಜಿಸಲಾಗಿದೆ.
ಫೆಬ್ರವರಿ 1ರಂದು ತೀರ್ಥಸ್ಥಾನೋತ್ಸವ ಹಾಗೂ ಪಲ್ಲಕ್ಕಿ ಉತ್ಸವ, ಫೆಬ್ರವರಿ 2ರಂದು ತೆಪ್ಪೋತ್ಸವ, ಫೆಬ್ರವರಿ 3ರಂದು ಮರಿತೆಪ್ಪೋತ್ಸವ, 4ರಂದು ಕೈಲಾಸ ವಾಹನೋತ್ಸವ, 5ರಂದು ಮಂಟಪೋತ್ಸವ, 6ರಂದು ಗಿರಿಪ್ರದಕ್ಷಿಣೆ, 7ರಂದು ಪರ್ವತ ಪರಿಷೆ ಹಾಗೂ 8ರಂದು ಮಹಾಭಿಷೇಕ ಹಾಗೂ ಶೆಟ್ಟರ ಸೇವೆ ನಡೆಯಲಿದೆ.
ಮುಡುಕುತೊರೆ ಜಾತ್ರೆಗೆಂದು ಬಂದವರು ಹಲವು ಜನಪ್ರಿಯ ದೇಗುಲಗಳನ್ನು ನೋಡಬಹುದು. ಈ ಗ್ರಾಮಕ್ಕೆ ಟಿ. ನರಸೀಪುರ ತಾಲೂಕು ಕೇಂದ್ರದಿಂದ ಸುಮಾರು 19 ಕಿ.ಮೀ. ಪ್ರಯಾಣಿಸಬೇಕು.












Click it and Unblock the Notifications