ಮುಡಾದಿಂದ ಶೆಡ್ ಗಳ ಒತ್ತುವರಿ ತೆರವು; 6 ಕೋಟಿ ರೂ ಆಸ್ತಿ ವಶ

ಮೈಸೂರು, ಸೆಪ್ಟೆಂಬರ್ 16: ಆಶಾಮಂದಿರ ಯೋಜನೆಯಡಿ ನಗರದ ದೇವನೂರು 1ನೇ ಹಂತ ಬಡಾವಣೆಯ ಮೂಲೆ ನಿವೇಶನಗಳಲ್ಲಿ ಮುಡಾ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಹತ್ತಾರು ಶೆಡ್ಡುಗಳನ್ನು ಇಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದವರು ತೆರವುಗೊಳಿಸಿದರು.

ದೇವನೂರು ಬಡಾವಣೆಯ ಮೂಲೆ ನಿವೇಶನಗಳಲ್ಲಿ 40X40 ಅಡಿ ಅಳತೆಯ 4 ನಿವೇಶನ ಹಾಗೂ 30X40 ಅಡಿ ಅಳತೆಯ 2 ನಿವೇಶನಗಳಲ್ಲಿ ಒಟ್ಟು 8800 ಚದರ ಅಡಿಗಳಷ್ಟನ್ನು ಒತ್ತುವರಿ ಮಾಡಿಕೊಂಡು ಶೆಡ್ ನಿರ್ಮಿಸಲಾಗಿತ್ತು. ಶೆಡ್ ತೆರವುಗೊಳಿಸಲಾದ ಈ ನಿವೇಶನಗಳ ಒಟ್ಟು ಮೌಲ್ಯ ಆರು ಕೋಟಿ ರೂಪಾಯಿ ಎಂದು ಮುಡಾ ಆಯುಕ್ತ ನಟೇಶ್ ತಿಳಿಸಿದರು.

Mysuru: Muda Cleared Sheds Encroached Worth 6 Crores

ಆಯುಕ್ತ ನಟೇಶ್ ನೇತೃತ್ವದಲ್ಲಿ ನಡೆದ ಒತ್ತುವರಿ ತೆರುವು ಕಾರ್ಯಾಚರಣೆಯಲ್ಲಿ ಅಧೀಕ್ಷಕ ಅಭಿಯಂತರ ಶಂಕರ್, ಕಾರ್ಯಪಾಲಕ ಅಭಿಯಂತರರಾದ ಎಂ.ಆರ್.ಪಾಂಡುರಂಗ, ಜಿ.ಸುವರ್ಣ, ವಲಯ ಅಧಿಕಾರಿಗಳಾದ ಜಿ.ಮೋಹನ್, ಎಸ್.ಕೆ.ಭಾಸ್ಕರ್, ಸಿ.ಕಿರಣ್, ಕೆ.ಆರ್.ಮಹೇಶ್, ಎಚ್.ಪಿ.ಶಿವಣ್ಣ, ನಾಗೇಶ್, ಎಚ್.ಎನ್.ರವೀಂದ್ರ ಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರ ರಾಘವೇಂದ್ರ ಇತರರು ಇದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+