ಸರಳವಾಗಿ ದಸರಾ ಆಚರಿಸಿದರೆ ಚಾಮುಂಡೇಶ್ವರಿಗೆ ಅವಮಾನ ಮಾಡಿದಂತೆ: ಶಾಸಕ ತನ್ವೀರ್ ಸೇಠ್

ಮೈಸೂರು, ಆಗಸ್ಟ್ 15: "ನೆರೆ ಹಿನ್ನೆಲೆ ಸರಳವಾಗಿ ದಸರಾ ಆಚರಿಸಿದರೆ ಪ್ರವಾಸೋದ್ಯಮಕ್ಕೆ ಹೊಡೆತ ಬೀಳುತ್ತದೆ. ಸರಳವಾಗಿ ನಾಡಹಬ್ಬ ಮಾಡಿದರೆ ತಾಯಿ ಚಾಮುಂಡೇಶ್ವರಿಗೆ ಅವಮಾನ ಮಾಡಿದಂತೆ" ಎಂದಿದ್ದಾರೆ ಶಾಸಕ ತನ್ವೀರ್ ಸೇಠ್.

ಬಿಜೆಪಿಯವರು ಟಿಪ್ಪು ಜಯಂತಿ ಮಾಡಬೇಕಿಲ್ಲ: ಶಾಸಕ ತನ್ವೀರ್ ಸೇಠ್
ಅತಿವೃಷ್ಟಿ ಹಿನ್ನೆಲೆ ಸರಳ ದಸರಾ ಆಚರಣೆಗೆ ಮುಂದಾಗಿರುವ ರಾಜ್ಯ ಸರ್ಕಾರದ ನಡೆಗೆ ಶಾಸಕ ತನ್ವೀರ್ ಸೇಠ್ ವಿರೋಧ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಅದಕ್ಕಾಗಿ ಸರಳ ದಸರಾ ಬದಲು ಅದ್ದೂರಿ ದಸರಾ ಮಾಡಲಿ. ಕಷ್ಟದಲ್ಲಿದ್ದಾಗಲೇ ಜನರು ದೇವರ ಹತ್ತಿರ ಹೋಗುವುದು. ಈಗ ರಾಜ್ಯದ ಜನತೆ ಕಷ್ಟದಲ್ಲಿ ಇದ್ದಾರೆ. ನಾಡ ಹಬ್ಬ ದಸರಾವನ್ನು ಸರಳವಾಗಿ ಆಚರಿಸಿದರೆ ತಾಯಿ ಚಾಮುಂಡೇಶ್ವರಿಗೆ ಅವಮಾನ ಮಾಡಿದಂತೆ. ರಾಜ್ಯದ ಕಷ್ಟವನ್ನ ನೀಗಿಸಲು ಚಾಮುಂಡೇಶ್ವರಿಯನ್ನ ಪೂಜಿಸಬೇಕು. ಅದಕ್ಕಾಗಿ ಅದ್ದೂರಿ ದಸರಾ ಆಚರಣೆ ಮಾಡಬೇಕು" ಎಂದರು.

MLA Tanveer Sait opposes state governments move on Dassara

ಪ್ರಸ್ತುತ ಫೋನ್ ಕದ್ದಾಲಿಕೆ ಕುರಿತು ಮಾತನಾಡಿದ ಅವು, "ಹಿಂದಿನ ಸರ್ಕಾರದ ಅವಧಿಯಲ್ಲಿ ಫೋನ್ ಕದ್ದಾಲಿಕೆ ಆಗಿದೆ. ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಫೋನ್ ಕದ್ಧಾಲಿಕೆ ಮಾಡಿಸಿದ್ದಾರೆ. ನಮ್ಮ ಸರ್ಕಾರದಲ್ಲಿ ಫೋನ್ ಕದ್ದಾಲಿಕೆ ಆಗಿಲ್ಲ. ಒಂದು ವೇಳೆ ಆಗಿದ್ದರೆ ಸಮಗ್ರ ತನಿಖೆ ಆಗಲಿ. ವಿಶ್ವನಾಥ್ ಹೇಳುವ ಮಾತು ಸತ್ಯವಾಗಿದ್ದರೆ ಸಿಬಿಐ ತನಿಖೆ ಮಾಡಲಿ. ಫೋನ್ ಕದ್ದಾಲಿಕೆ ಸರ್ಕಾರದಲ್ಲಿ ಅವಕಾಶ ಇದೆ. ದೇಶದ, ರಾಜ್ಯದ ಭದ್ರತೆಗಾಗಿ ಫೋನ್ ಕದ್ದಾಲಿಕೆ ಮಾಡಬಹುದು. ಆದರೆ ಜನಪ್ರತಿನಿಧಿಗಳ ಫೋನ್ ಕದ್ದಾಲಿಕೆ ಮಾಡುವುದು ತಪ್ಪು" ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+