ಹಳೆಯ ಚೆಕ್ ನೀಡಿ ಪೇಚಿಗೆ ಸಿಲುಕಿದ ಶಾಸಕ ಸೋಮಶೇಖರ್

ಮೈಸೂರು,ಅಕ್ಟೋಬರ್ 24 : ಕಳೆದ 15 ದಿನಗಳ ಕೆಳಗೆ ಮೈಸೂರಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಉಂಟಾಗಿದ್ದ ಹಾನಿಗೆ ಪರಿಹಾರವಾಗಿ ಸರ್ಕಾರ ಕನಕಗಿರಿ ನಿವಾಸಿಗಳಿಗೆ ಹಳೆ ಚೆಕ್ ವಿತರಣೆ ಮಾಡಿದ್ದು, ಬ್ಯಾಂಕ್ ಅಧಿಕಾರಿಗಳು ಚೆಕ್ ಪಡೆಯಲು ನಿರಾಕರಿಸುತ್ತಿದ್ದಾರೆ.

ಅರೇ, ಇದ್ಯಾಕಪ್ಪಾ ಅಂತೀರಾ.. ಇದರಿಂದ ಹಳೆ ಚೆಕ್ ನೀಡಿ ಕೈ ತೊಳೆದುಕೊಂಡ ಅಧಿಕಾರಿಗಳ ಬಣ್ಣ ಬಯಲಾಗಿದೆ. ಜನರಿಂದ ಆಯ್ಕೆಯಾದ ಶಾಸಕ ಎಂ ಕೆ ಸೋಮಶೇಖರ್ ಕೂಡ ಇದೆ ಚೆಕ್ ನೀಡಿ ಜವಾಬ್ದಾರಿ ಮರೆತಿದ್ದಾರೆ.

MLA M Somashekhar cheats people by giving them old cheques

ಇದರಿಂದ ಚೆಕ್ ಪಡೆದ ಸಂತ್ರಸ್ತರ ಖುಷಿಗೆ ಅಲ್ಪ ಬ್ರೇಕ್ ಬಿದ್ದಿದೆ. ಕೆಲ ದಿನಗಳ ಹಿಂದೆ ಸಿ ಎಂ ಸಿದ್ದರಾಮಯ್ಯ ಇಲ್ಲಿಗೆ ಭೇಟಿ ನೀಡಿ ಪರಿಹಾರ ಕೊಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದರು. ಹೀಗಾಗಿ ಸೋಮವಾರ ಬೆಳಿಗ್ಗೆ ಸಂತ್ರಸ್ತರಿಗೆ ಶಾಸಕ ಎಂ ಕೆ ಸೋಮಶೇಖರ್ ಪರಿಹಾರದ ಚೆಕ್ ವಿತರಿಸಿದ್ದರು. ಬಳಿಕ ಫಲಾನುಭವಿಗಳು ಹಣ ಡ್ರಾ ಮಾಡಲು ಬ್ಯಾಂಕ್ ಗೆ ತೆರಳಿದಾಗ ಆಘಾತವಾಗಿದೆ. ಯಾಕೆಂದರೆ ಚೆಕ್ ಹಳೆಯದಾಗಿದ್ದು, ಬ್ಯಾಂಕ್ ಅಧಿಕಾರಿಗಳು ಚೆಕ್ ಪಡೆಯಲು ನಿರಾಕರಿಸಿದ್ದಾರೆ.

MLA M Somashekhar cheats people by giving them old cheques

ಇದರಿಂದ ಹಳೆ ಚೆಕ್ ನೀಡಿ ಕೈ ತೊಳೆದುಕೊಂಡ ಅಧಿಕಾರಿಗಳ ಬಣ್ಣ ಬಯಲಾಗಿದೆ. ಜನರಿಂದ ಆಯ್ಕೆಯಾದ ಶಾಸಕ ಎಂ ಕೆ ಸೋಮಶೇಖರ್ ಕೂಡ ಇದೆ ಚೆಕ್ ನೀಡಿ ಜವಾಬ್ದಾರಿ ಮರೆತಿದ್ದಾರೆ ಎಂಬ ಬೇಸರದ ಮಾತುಗಳು ಸಂತ್ರಸ್ತರಿಂದ ಕೇಳಿ ಬಂದಿದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+