ಮೈಸೂರಲ್ಲಿ ಮ್ಯಾರಥಾನ್, ವಿದ್ಯಾರ್ಥಿಗಳೇ ಓಡೋಣ ಬನ್ನಿ

ಮೈಸೂರು, ಫೆ. 5: ಮೈಸೂರು ಮಹಾರಾಜ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯು 8ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದೆ. ಈ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ್ ಅಭಿಯಾನ ಹಾಗೂ ಮಹಾ ದಸರಾ ಮ್ಯಾರಥಾನ್ - 2015 ಓಟ ಸ್ಪರ್ಧೆ ಆಯೋಜಿಸಲಾಗಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಖಜಾಂಚಿ ಗುರು ಮಾಹಿತಿ ನೀಡಿದ್ದಾರೆ. ಫೆ. 8ರಂದು ಸಂಸ್ಥೆಯ ವಾರ್ಷಿಕೋತ್ಸವ ನಡೆಯಲಿದೆ. ಅಂದು ಬೆಳಗ್ಗೆ 7 ಗಂಟೆಗೆ ಸ್ವಚ್ಛ ಭಾರತ ಅಭಿಯಾನ ಹಾಗೂ ಮಹಾ ದಸರಾ ಮ್ಯಾರಥಾನ್ - 2015 ಓಟ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. [ಯುವಕರ ಸೆಳೆದ ಮಿಡ್ ನೈಟ್ ಮ್ಯಾರಥಾನ್]

mit

ಮ್ಯಾರಥಾನ್ ಸ್ಪರ್ಧೆ ಸಿಪಿಸಿ ಮಹಾವಿದ್ಯಾಲಯದಿಂದ ಆರಂಭವಾಗಿ ಎಂಐಟಿ ಕಾಲೇಜಿನಲ್ಲಿ ಮುಕ್ತಾಯಗೊಳ್ಳಲಿದೆ. ಸ್ಪರ್ಧೆಯಲ್ಲಿ ವಿಜೇತರಿಗೆ 8 ಸಾವಿರ ರು. ಬಹುಮಾನ ನೀಡಲಾಗುವುದು ಎಂದು ತಿಳಿಸಿದ್ದಾರೆ. [ಅಂಗಾಂಗ ದಾನ ಜಾಗೃತಿಗೆ ರಾಮನಗರ ಮ್ಯಾರಥಾನ್]

ಎಂಐಟಿ ಕಾಲೇಜು ವಿದ್ಯಾರ್ಥಿಗಳು 100 ರು., ಇತರೆ ಕಾಲೇಜು ವಿದ್ಯಾರ್ಥಿಗಳಿಗೆ 250 ರು., ಸಾರ್ವಜನಿಕರಿಗೆ 500 ರು. ಹಾಗೂ ನಾಗರಿಕರಿಗೆ 1,000 ರು. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಹೆಚ್ಚಿನ ವಿವರಗಳಿಗೆ ಅಮರಪ್ರಭು - 95354 1445, ಕಿರಣ್.ಡಿ. 96207 69134, ಶಶಿಕಿರಣ್ 88611 20699 ಸಂಪರ್ಕಿಸಬಹುದು ಎಂದು ಗುರು ಅವರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+