• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರಿನಲ್ಲಿ ನಾಪತ್ತೆಯಾಗಿದ್ದ ವಿಜ್ಞಾನಿ ಆಂಧ್ರದ ವಿಜಯವಾಡದಲ್ಲಿ ಪತ್ತೆ

|

ಮೈಸೂರು, ಅಕ್ಟೋಬರ್ 12: ಮೈಸೂರಿನಲ್ಲಿ ನಿಗೂಢವಾಗಿ ಕಣ್ಮರೆಯಾಗಿದ್ದ ವಿಜ್ಞಾನಿ ಆಂಧ್ರಪ್ರದೇಶದ ವಿಜಯವಾಡದಲ್ಲಿ ಪತ್ತೆಯಾಗಿದ್ದಾರೆ.

ಭಾಭಾ ಸಂಶೋಧನಾ ಸಂಸ್ಥೆಗೆ ಕರೆ ಮಾಡಿ ವಿಜ್ಞಾನಿ ಮಾಹಿತಿ ನೀಡಿದ್ದಾರೆ. ವಿಜ್ಞಾನಿ ಅಭಿಷೇಕ್ ರೆಡ್ಡಿ ಅಕ್ಟೋಬರ್ 6ರಿಂದ ನಾಪತ್ತೆಯಾಗಿದ್ದರು ಸಂಬಂಧಿಕರ ಮನೆಯಲ್ಲಿ ಇರುವುದಾಗಿ ಕರೆ ಮಾಡಿ ತಿಳಿಸಿದ್ದಾರೆ.

ಮೈಸೂರಿನಲ್ಲಿ ಅಣು ವಿಜ್ಞಾನಿ ನಿಗೂಢವಾಗಿ ನಾಪತ್ತೆ

ಭಾಭಾ ಪರಮಾಣು ಸಂಶೋಧನಾ ಸಂಸ್ಥೆಯಲ್ಲಿ ಕಳೆದ ಒಂದು ವರ್ಷದಿಂದ ಇವರು ಕೆಲಸ ಮಾಡುತಿದ್ದರು ಎನ್ನಲಾಗಿದೆ. ಅಲ್ಲದೆ ಅವರು ಖಿನ್ನತೆ ಮತ್ತು ಮೈಗ್ರೇನ್‌ನಿಂದ ಬಳಲುತ್ತಿದ್ದರು ಎಂದೂ ಸಹೋದ್ಯೋಗಿಯೊಬ್ಬರು ತಿಳಿಸಿದ್ದಾರೆ.

ಅಭಿಷೇಕ್​ ರೆಡ್ಡಿ ಯಾರಿಗೂ ತಿಳಿಸದೆ ಹೊರಟು ಹೋಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದರು.ಇದೀಗ ಅವರೇ ಖುದ್ದು ಕರೆ ಮಾಡಿ ತಾನು ಸುರಕ್ಷಿತವಾಗಿದ್ದೇನೆ ಎಂದು ತಿಳಿಸಿದ್ದಾರೆ.

ಸಹಾಯಕ ವೈಜ್ಞಾನಿಯಾಗಿದ್ದ ಅಭಿಷೇಕ್ ರೆಡ್ಡಿ ಗುಲ್ಲಾ ಮೈಸೂರಿನ ಕಾವೇರಿ ಲೇಔಟ್‍ನಲ್ಲಿ ವಾಸವಾಗಿದ್ದರು. ಮೈಸೂರಿನಿಂದ 15 ಕಿ.ಮೀ. ದೂರದಲ್ಲಿರುವ ಬಾರ್ಕ್ ನಲ್ಲಿ ಕೆಲಸ ಪಡೆದ ನಂತರ ರೆಡ್ಡಿ ಒಂದು ವರ್ಷದ ಹಿಂದೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಿಂದ ಮೈಸೂರಿಗೆ ಬಂದಿದ್ದರು.

ಒಂದೆರಡು ತಿಂಗಳ ಹಿಂದೆ ಹೆತ್ತವರ ಮರಣದ ನಂತರ ರೆಡ್ಡಿ ಒಬ್ಬಂಟಿಯಾಗಿದ್ದರು. ಇದೇ ವಿಚಾರವಾಗಿ ಮಾತನಾಡಿರುವ ಟಿಕೆ ಬೋಸ್ ಅವರು, 'ವೈಜ್ಞಾನಿಕ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಗುಲ್ಲಾ ಸೆಪ್ಟೆಂಬರ್ 17 ರಿಂದ ಕರ್ತವ್ಯಕ್ಕೆ ಗೈರುಹಾಜರಾಗಿದ್ದಾರೆ.

ಅಕ್ಟೋಬರ್ 5 ರಂದು, ಕಚೇರಿಯಿಂದ ಗುಲ್ಲಾ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲಾಗಿತ್ತು. ಅಕ್ಟೋಬರ್ 6 ರಂದು ಅವರು ಕಚೇರಿಗೆ ಸೇರ್ಪಡೆಗೊಳ್ಳುವುದಾಗಿ ಹೇಳಿದ್ದರು.

English summary
A 26 year old scientist working at the BhaBha Atomatic Research Centre has gone missing for the past 4 days found in Andhrapradesh's Vijayavada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X