ಇನ್ಮುಂದೆ ರಾಜ್ಯದಲ್ಲಿ ಅಭಿವೃದ್ಧಿ ಪರ್ವ ಆರಂಭ; ಕೆ.ಎಸ್.ಈಶ್ವರಪ್ಪ

ಮೈಸೂರು, ಆಗಸ್ಟ್ 21:"ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಇವರಿಬ್ಬರ ದೂರದೃಷ್ಟಿಯಿಂದ ಸಚಿವ ಸಂಪುಟ ರಚನೆಯಾಗಿದ್ದು, ಇನ್ನು ಮುಂದೆ ರಾಜ್ಯದಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಲಿದೆ" ಎಂದು ಸಚಿವ ಈಶ್ವರಪ್ಪ ತಿಳಿಸಿದ್ದಾರೆ.

ಕೊನೆ ಕ್ಷಣದಲ್ಲಿ ಪಟ್ಟಿ ಬದಲು, 5 ಹೆಸರು ಕೈ ಬಿಟ್ಟ ಯಡಿಯೂರಪ್ಪ!
ಚಾಮುಂಡಿ ಬೆಟ್ಟಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮೋದಿ ನಾಯಕತ್ವದಲ್ಲಿ ದೇಶದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ. ಅದರಂತೆಯೇ ರಾಜ್ಯದಲ್ಲಿಯೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಅಭಿವೃದ್ಧಿ ಕಾಣಲಿದೆ. ಅವರಿಬ್ಬರು ಬುದ್ಧಿವಂತರು. ಅವರ ತಲೆಯಲ್ಲಿ ಏನಿದೆ ಎಂಬುದು ನಮಗೆ ಗೊತ್ತಿಲ್ಲ" ಎಂದರು.

Minister K S Eshwarappa expressed his view on Cabinet expansion

"ಸಚಿವ ಸಂಪುಟ ರಚನೆ ಸಮಯದಲ್ಲಿ ಕೆಲವರಿಗೆ ಅಸಮಾಧಾನವಾಗುವುದು ಸಹಜ. ಅದನ್ನು ಪಕ್ಷದ ಮುಖಂಡರು ಶಮನ ಮಾಡುತ್ತಾರೆ. ಎಲ್ಲ ಖಾತೆಗಳು ಒಳ್ಳೆಯವೇ. ಯಾವುದೇ ಇಲಾಖೆ ಕೊಟ್ಟರೂ ಯಶಸ್ವಿಯಾಗಿ ಕೆಲಸ ಮಾಡುತ್ತೇನೆ. ಈ ಹಿಂದೆ ಇಂಧನ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಹಲವು ಖಾತೆಗಳನ್ನು ನಿಭಾಯಿಸಿದ್ದೇನೆ" ಎಂದು ಉತ್ತರಿಸಿದರು.

"ಮೈಸೂರು ಜಿಲ್ಲೆ ಎಲ್ಲರಿಗೂ ಇಷ್ಟ. ಯಾರೇ ಉಸ್ತುವಾರಿ ಸಚಿವರಾದರೂ ನಾಡಹಬ್ಬ ದಸರಾ ಉತ್ಸವ ಅಚ್ಚುಕಟ್ಟಾಗಿ ನಡೆಯಬೇಕು. ನಾಡಿಗೆ ಚಾಮುಂಡೇಶ್ವರಿ ದೇವಿ ಒಳಿತು ಮಾಡಲಿ ಎಂದು ಬೇಡಿರುವೆ. ಸಾಕಷ್ಟು ಮಳೆಯಾಗಿ ತೊಂದರೆಯಾಗಿದೆ. ಜನರು ಸುಭಿಕ್ಷವಾಗಿರಲಿ ಎಂದು ಕೇಳಿಕೊಂಡಿರುವೆ" ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+