ದಸರಾ ಅತಿಥಿಗಳಿಗೆ ಔಷಧೀಯ ಸಸ್ಯಗಳ ಸ್ವಾಗತ
ಮೈಸೂರು, ಸೆ.1 : ಮೈಸೂರು ದಸರಾಕ್ಕೆ ಆಗಮಿಸುವ ವಿಐಪಿಗಳು ಮತ್ತು ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸುವ ಸಂಪ್ರದಾಯವನ್ನು ಸ್ಥಗಿತಗೊಳಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಈ ಬಾರಿಯ ದಸರಾಕ್ಕೆ ಆಗಮಿಸುವವರ ಕೈಗೆ ಔಷಧೀಯ ಸಸ್ಯ ನೀಡಿ ಸ್ವಾಗತಿಸಲಾಗುತ್ತದೆ.
ಮೈಸೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಪುಷ್ಪಾವತಿ ಅಮರನಾಥ್ ಅವರು ಇಂತಹ ವಿನೂತನ ಪ್ರಯತ್ನ ಆರಂಭಿಸಿದ್ದಾರೆ. ದಸರಾಕ್ಕೆ ಆಗಮಿಸುವ ವಿಐಪಿಗಳು ಮತ್ತು ಅತಿಥಿಗಳಿಗೆ ಈ ಬಾರಿ ಔಷಧೀಯ ಸಸ್ಯವನ್ನು ಹೊಂದಿರುವ ಪಾಟ್‌ಅನ್ನು ನೀಡಿ ಸ್ವಾಗತ ಕೋರಲಾಗುತ್ತದೆ.

ಈಗಾಗಲೇ ಅತಿಥಿಗಳಿಗೆ ಔಷಧೀಯ ಸಸ್ಯ ನೀಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿಲ್ಲಾಧಿಕಾರಿ ಸಿ.ಶಿಖಾ ಅವರ ಜೊತೆ ಪುಷ್ಪಾವತಿ ಅಮರನಾಥ್ ಮಾತುಕತೆ ನಡೆಸಿದ್ದು, ಸಿಎಂ ಸಿದ್ದರಾಮಯ್ಯ ಅವರು ವಿನೂತನ ಪ್ರಯತ್ನಕ್ಕೆ ಒಪ್ಪಿಗೆ ನೀಡಿದ್ದಾರೆ. [ಗುತ್ತಿಗೆದಾರನಿಗೆ ಬೆದರಿಕೆ ಕರೆ]
ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ತಯಾರಿ ನಡೆಸಿರುವ ಜಿಲ್ಲಾಡಳಿತ, ಈಗಾಗಲೇ 5000 ಪಾಟ್‌ಗಳನ್ನು ಖರೀದಿಸಲು ಸಿದ್ಧತೆ ಆರಂಭಿಸಿದೆ. ದಸರಾ ಲಾಂಛನ ಹೊಂದಿರುವ ಪಾಟ್‌ಗಳಲ್ಲಿ ಔಷಧೀಯ ಸಸ್ಯಗಳನ್ನು ಇಟ್ಟು ಅತಿಥಿಗಳಿಗೆ ನೀಡಿ ಅವರನ್ನು ದಸರಾಕ್ಕೆ ಸ್ವಾಗತಿಸಲಾಗುತ್ತದೆ.
ಹೂಗುಚ್ಛ ನೀಡಿದರೆ ಅದನ್ನು ಅತಿಥಿಗಳನ್ನು ಮತೆತು ಬಿಡಬಹುದು ಅಥವ ಅಲ್ಲೇ ಬಿಟ್ಟು ಹೋಗಬಹುದು ಆದ್ದರಿಂದ ಔಷಧೀಯ ಸಸ್ಯಗಳನ್ನು ನೀಡುತ್ತಿದ್ದು, ಇದನ್ನು ತೆಗೆದುಕೊಂಡು ಹೋಗುತ್ತಾರೆ ಎಂದು ಪುಷ್ಪಾವತಿ ಅಮರನಾಥ್ ಹೇಳಿದ್ದಾರೆ. [ದಸರಾ ಮಾಹಿತಿ ಬೇಕೆ ಇಲ್ಲಿ ಕ್ಲಿಕ್ ಮಾಡಿ]
ಜಿಲ್ಲೆಯ ಪ್ರತಿ ತಾಲೂಕಿನಲ್ಲಿಯೂ ಔಷಧ ವನ ನಿರ್ಮಾಣ ಮಾಡುವ ಕನಸು ಷುಪ್ಪಾವತಿ ಅಮರನಾಥ್ ಅವರಿಗಿದೆ. ಹಾಗೆಯೇ ತಂಬಾಕು ರಹಿತ ದಸರಾವನ್ನು ಆಚರಿಸಲು ಅವರು ನಿರ್ಧರಿಸಿದ್ದು, ಧೂಮಪಾನ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
-
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Smriti Mandhana: ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮತ್ತೆ ಒಂದಾಗ್ತಾರಾ? ಇಬ್ಬರ ಕುಟುಂಬಗಳ ಸೀಕ್ರೆಟ್ ಮೀಟಿಂಗ್ ವಿಡಿಯೋ ವೈರಲ್ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Government Schools: ಈ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ನೀತಿ: ಎಲ್ಲ ಶಿಕ್ಷಕರಿಗೆ ಇಂಗ್ಲಿಷ್ ಟ್ರೈನಿಂಗ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಏಪ್ರಿಲ್ 11ರ ದರಪಟ್ಟಿ












Click it and Unblock the Notifications