ಲಾಕ್ ಡೌನ್ :ಮೈಸೂರಿನಲ್ಲಿ ನೆರವೇರಿತು ಕ್ಷಣಾರ್ಧದ ಮದುವೆ
ಮೈಸೂರು, ಏಪ್ರಿಲ್ 05: ಕೇವಲ ನಾಲ್ಕೇ ಜನರ ಸಮ್ಮುಖದಲ್ಲಿ ನವದಂಪತಿಗಳು ಹಸೆಮಣೆ ಏರಿದ್ದಾರೆ. ಲಾಕ್‌ಡೌನ್ ನಡುವೆಯೂ ಮೈಸೂರಿನಲ್ಲಿ ಸಿಂಪಲ್ ಮ್ಯಾರೇಜ್ ನಡೆದಿದೆ.
ಅಪ್ಪ, ಅಮ್ಮ, ತಾಯಿ, ತಮ್ಮ ಇವರ ಸಮ್ಮುಖದಲ್ಲಿ ಮೈಸೂರಿನ ಗೋಕುಲಂನ ಗಣಪತಿ ದೇವಸ್ಥಾನದಲ್ಲಿ ಅತ್ಯಂತ ಸರಳ ಮದುವೆ ನಡೆಯಿತು. ಸಿವಿಲ್ ಇಂಜಿನಿಯರ್ ಆಗಿರುವ ಸೋನಿಯಾ ಮತ್ತು ಎಲೆಕ್ಟ್ರಾನಿಕ್ ಇಂಜಿನಿಯರ್ ಪರಶುರಾಮ್ ನಡುವೆ ಕೇವಲ ಅರ್ಧ ಗಂಟೆಯಲ್ಲಿ ಪೋಷಕರು ಮದುವೆ ಮಾಡಿ ಮುಗಿಸಿದ್ದಾರೆ.

ಏಪ್ರಿಲ್ 17 ಕ್ಕೆ ಮದುವೆ ನಿಗದಿಯಾಗಿತ್ತು, ಲಾಕ್‌ಡೌನ್ ಮುಂದುವರೆಯುವ ಗೊಂದಲದಿಂದಾಗಿ ಇಂದೇ ಮದುವೆ ಮಾಡಿದರು.












Click it and Unblock the Notifications