ಮಾವು ಮಾರಲು ಹೊಸ ಐಡಿಯಾ: ಮೈಸೂರು-ಮಡಿಕೇರಿ ರಸ್ತೆಯಲ್ಲಿ ಹುಡುಗನ ಸಖತ್ ಸ್ಟೆಪ್ಸ್

ವ್ಯವಹಾರ ಎನ್ನುವುದು ಒಂದು ಕಲೆ, ಕೆಲವರಿಗೆ ಅವರು ಚಿಕ್ಕ ವಯಸ್ಸಿನಲ್ಲೇ ರೂಢಿಯಾಗಿರುತ್ತದೆ. ಇಲ್ಲೊಬ್ಬ ಹುಡುಗ ಮಾವಿನ ಹಣ್ಣುಗಳನ್ನು ಮಾರಲು ಹೊಸ ಐಡಿಯಾ ಕಂಡುಕೊಂಡಿದ್ದಾನೆ. ರಸ್ತೆಯ ಪಕ್ಕದಲ್ಲಿ ತಳ್ಳುವ ಗಾಡಿಯಲ್ಲಿ ಮಾವಿನ ಹಣ್ಣುಗಳನ್ನು ಇಟ್ಟುಕೊಂಡಿದ್ದು ವಿಭಿನ್ನವಾಗಿ ನೃತ್ಯ ಮಾಡುವ ಮೂಲಕ ಗ್ರಾಹಕರನ್ನು ಆಕರ್ಷಿಸಲು ಪ್ರಯತ್ನ ಪಡುತ್ತಾನೆ.

ಈಗ ಮಾವಿನ ಹಣ್ಣಿನ ಸೀಸನ್ ಶುರುವಾಗಿದ್ದು, ಎಲ್ಲಾ ಕಡೆ ಹಣ್ಣಿನ ಮಾರಾಟ ಜೋರಾಗಿದೆ. ಮೈಸೂರು-ಕೊಡಗು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಗುವ ಇಲವಾಲ ಬಳಿ ಸಾಲು ಸಾಲು ತಳ್ಳು ಗಾಡಿಗಳಲ್ಲಿ ಮಾವಿನ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತದೆ. ಇಲ್ಲಿ ಮಾವು ಮಾರಲು ಭಾರಿ ಪೈಪೋಟಿ ಇದ್ದು, ಈ ಹುಡುಗ ಗ್ರಾಹಕರನ್ನು ಸೆಳೆಯಲು ನೃತ್ಯದ ಮೊರೆ ಹೋಗಿದ್ದಾನೆ.

Mango Seller Boy Dance Near His Cart

ರಸ್ತೆ ಪಕ್ಕದಲ್ಲಿ ನಿಂತು ಓಡಾಡುವ ಕಾರು, ಬೈಕ್‌ಗಳನ್ನು ನಿಲ್ಲಿಸುವಂತೆ ನೃತ್ಯದ ಮೂಲಕವೇ ಸನ್ನೆ ಮಾಡುತ್ತಾನೆ, ಇವರ ನೃತ್ಯವನ್ನು ಕಂಡು ಹಲವರು ವಾಹನ ಸವಾರರು ಗಾಡಿ ನಿಲ್ಲಿಸಿ ಮಾವುಗಳನ್ನು ಖರೀದಿಸುವುದು ಇದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ಈ ಪುಟ್ಟ ಹುಡುಗನ ಹೊಸ ಐಡಿಯಾ ಕಂಡು ನೆಟ್ಟಿಗರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೆಲ್ಲಾ ಸ್ಪರ್ಧೆ ಇರುವುದರಿಂದ ಗ್ರಾಹಕರನ್ನು ಸೆಳೆಯಬೇಕಾದರೆ ಇಂತಹ ಸರ್ಕಸ್ ಮಾಡುವುದು ಅನಿವಾರ್ಯ ಎಂದು ಕೆಲವರು ಹೇಳಿದ್ದರೆ, ಹುಡುಗ ತನ್ನ ಕೆಲಸವು ಎಂಜಾಯ್ ಮಾಡುತ್ತಿದ್ದಾನೆ ಎಂದು ಹೇಳಿದ್ದಾರೆ.

ಪ್ರತಿ ಬಾರಿ ಮಾವಿನ ಸೀಸನ್‌ನಲ್ಲಿ ಇಲ್ಲಿ ಮಾರಾಟ ಜೋರು

ಪ್ರತಿ ಬಾರಿ ಮಾವಿನಹಣ್ಣಿನ ಸೀಸನ್‌ನಲ್ಲಿ ಈ ಸ್ಥಳದಲ್ಲಿ ಮಾವು ಮಾರಾಟ ಜೋರಾಗಿ ನಡೆಯುತ್ತದೆ. ಹಲವು ವರ್ಷಗಳಿಂದ ಇಲ್ಲಿ ತಳ್ಳುವ ಗಾಡಿಗಳಲ್ಲಿ ಮಾವಿನ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತದೆ. ಈ ರಸ್ತೆಯಲ್ಲಿ ಓಡಾಡುವ ಪ್ರಯಾಣಿಕರೆ ಇವರ ಪ್ರಮುಖ ಗ್ರಾಹಕರಾಗಿದ್ದಾರೆ. ಬೇಸಿಗೆ ರಜೆಯ ಸಂದರ್ಭದಲ್ಲಿ ಪ್ರವಾಸಿ ಸ್ಥಳಗಳಿಗೆ ಭೇಟಿ ಕೊಡುವವರ ಸಂಖ್ಯೆ ಕೂಡ ಹೆಚ್ಚಾಗಿರುವುದರಿಂದ ಇಲ್ಲಿ ವ್ಯವಹಾರ ಕೂಡ ಉತ್ತಮವಾಗಿ ನಡೆಯುತ್ತದೆ.

ಇಲವಾಲ ಗ್ರಾಮದಲ್ಲಿ ಮಾವಿನ ತೋಟಗಳಿದ್ದು, ಇಲ್ಲಿನ ರೈತರು ಕೂಡ ನೇರವಾಗಿ ಹಣ್ಣುಗಳನ್ನು ಮಾರಾಟ ಮಾಡುವ ಮೂಲಕ ಹೆಚ್ಚಿನ ಲಾಭ ಗಳಿಸುತ್ತಾರೆ. ಸಾಲು ಸಾಲು ಗಾಡಿಗಳಲ್ಲಿ ಬಗೆ ಬಗೆಯ ಮಾವಿನ ಹಣ್ಣುಗಳನ್ನು ನೋಡುವುದೇ ಒಂದು ಸುಂದರ ಅನುಭವ. ಇಲ್ಲಿನ ಮಾವಿನ ರುಚಿ ತಿಳಿದಿರುವ ಹಲವು ಪ್ರವಾಸಿಗರು ಕೂಡ ಈ ಕಡೆ ಬಂದಾಗ ಇಲ್ಲಿನ ಮಾವಿನ ಹಣ್ಣುಗಳನ್ನು ಮರೆಯದೇ ಮನೆಗೆ ತೆಗೆದುಕೊಂಡು ಹೋಗುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+