ಜಂಬೂ ಸವಾರಿಗೆ ಚಾಲನೆ, ತಾಯಿ ಚಾಮುಂಡೇಶ್ವರಿ ಹೊತ್ತು ಹೊರಟ ರಾಜಗಜ
ಮೈಸೂರು, ಅಕ್ಟೋಬರ್ 19: ಮೈಸೂರು ದಸರಾದ ಹೆಮ್ಮೆ ಜಂಬೂ ಸವಾರಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. 2:30 ರಿಂದ 3:15 ರ ನಡುವಿನ ಸಮಯದಲ್ಲಿ ನಂದಿ ಧ್ವಜ ಪೂಜೆ ನಂತರ ಜಂಬೂ ಸವಾರಿ ಆರಂಭವಾಗಲಿದೆ.
ಚಿನ್ನದ ಅಂಬಾರಿಯಲ್ಲಿ ವಿರಾಜಮಾನವಾದ ತಾಯಿ ಚಾಮುಂಡೇಶ್ವರಿ ಅವರ ಚಿನ್ನದ ಮೂರ್ತಿಯನ್ನು ಹೊತ್ತು ಪಟ್ಟದ ಆನೆ ಅರ್ಜುನ ಹೊತ್ತು ರಾಜಬೀದಿಯಲ್ಲಿ ಮೆರವಣಿಗೆಯಲ್ಲಿ ಸಾಗಲಿದ್ದಾನೆ.

ಕುಮಾರಸ್ವಾಮಿ ಹಾಗೂ ಕೆಲವು ಸಚಿವರು ಜಂಬೂ ಸವಾರಿಗೆ ಚಾಲನೆ ನೀಡಲಿದ್ದಾರೆ. ಮಹರಾಜ ಯಧುವೀರ ಅವರು ಇರಲಿದ್ದಾರೆ.
ಕಲಾತಂಡಗಳು, ಜನಪದ ತಂಡಗಳು, ಕುಂಭ ಹತಹೊತ್ತ ಮಹಿಳೆಯರು ಜಂಬೂ ಸವಾರಿಯ ಜೊತೆ ಸಾಗಲಿದ್ದು, ಕರ್ನಾಟಕದ ಇತಿಹಾಸ, ಸಂಸ್ಕೃತಿ ಬಿಂಬಿಸುವ 42 ಸ್ಥಬ್ದ ಚಿತ್ರಗಳು ಜನರ ಕಣ್ ತಣಿಸಲಿವೆ.

ಅಂಬಾರಿ ಸಾಗುತ್ತಿರುವ ದಾರಿಯ ಇಕ್ಕೆಲದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸೇರಿರುವ ಜನಸ್ತೋಮ. ಹೂಗಳನ್ನು ಎರಚಿ ಕೈಮುಗಿಯುತ್ತಿರುವ ಜನಸಮೂಹ.
ಜಯಚಾಮರಾಜೇಂದ್ರ ವೃತ್ತ, ಕೃಷ್ಣರಾಜೇಂದ್ರ ವೃತ್ತ, ಮಾರ್ಕೆಟ್ ರಸ್ತೆ, ಬಂಬೂ ಬಜಾರ್ ಮೂಲಕ ಬನ್ನಿ ಮಂಟಪವನ್ನು ಜಂಬೂ ಸವಾರಿ ತಲುಪುತ್ತದೆ. ಒಟ್ಟು ಐದುವರೆ ಕಿ.ಮೀ ಜಂಬೂ ಸವಾರಿ ಸಾಗುತ್ತದೆ.
7ನೇ ಬಾರಿ ಅಂಬಾರಿ ಹೊತ್ತಿರುವ ಅರ್ಜುನ ಸರಿ ಸುಮಾರಿ 1000 ಕೆ.ಜಿ ಭಾರವನ್ನು ಹೊತ್ತು ಸಾಗುತ್ತಿದ್ದಾನೆ. ಆತನ ಪಕ್ಕ ಕುಮ್ಕಿ ಆನೆಗಳು ಸಾಗುತ್ತಿವೆ. ಹಿಂದೆ ಗಜಪಡೆ ಸಾಗಿಬರುತ್ತಿದೆ.
ಕಾಲಾಳುಗಳು, ಅಶ್ವಪಡೆ, ಪೊಲೀಸ್ ಪಡೆ, ಪೊಲೀಸ್ ಬ್ಯಾಂಡ್, ಸ್ಕಾಟ್‌ಲ್ಯಾಂಡ್ ಬ್ಯಾಂಡ್ ಇನ್ನೂ ಹಲವು ದಳಗಳು ಅಂಬಾರಿಯ ಹಿಂದೆ ಸಾಲಾಗಿ ಗತ್ತಿನಿಂದ ಸಾಗುತ್ತಿವೆ.
ಜಂಬೂ ಸವಾರಿಗೆ ಚಾಲನೆ ನೀಡಿದ ಸಿಎಂ ಕುಮಾರಸ್ವಾಮಿ. ಅಂಬಾರಿ ಹೊತ್ತ ಅರ್ಜುನ ರಾಜಗಾಂಭಿರ್ಯದಿಂದ ಹೆಜ್ಜೆ ಹಾಕುತ್ತಿದ್ದಾನೆ. ಆತನ ಪಕ್ಕ ಕುಮ್ಕಿ ಆನಿಗಳಾದ ಕಾವೇರಿ ಮತ್ತು ವರಲಕ್ಷ್ಮಿ ಜೊತೆಗೂಡಿವೆ.
ಅಂಬಾರಿಯನ್ನು ಕಟ್ಟುವ ಕಾರ್ಯ ಪ್ರಾರಂಭ. ಮುಸ್ಲಿಂ ಕುಟುಂಬವೊಂದು ಅಂಬಾರಿಯನ್ನು ಕಟ್ಟುವ ಕಾರ್ಯವನ್ನು ತಲೆತಲಾಂತರದಿಂದ ಮಾಡಿಕೊಂಡು ಬರುತ್ತಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯು, ಘಾಟಿ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ದೇವನಹಳ್ಳಿ ಕೋಟೆಯ ಸ್ಥಬ್ಧ ಚಿತ್ರವನ್ನು ಮೈಸೂರು ದಸರಾದಲ್ಲಿ ಪ್ರದರ್ಶಿಸಲಾಯಿತು. ಬೆಂಗಳೂರು ನಗರ ಜಿಲ್ಲೆಯು ಸ್ವಚ್ಛತಾ ಅಭಿಯಾನ ಕುರಿತ ಸ್ತಬ್ಧ ಚಿತ್ರ ಪ್ರದರ್ಶಿಸಿತು.
ಡೊಳ್ಳು ಕುಣಿತ, ವೀರಗಾಸೆ, ವಾಲಗ, ವೀರಭದ್ರನ ಕುಣಿತ, ನಂದಿ ಧ್ವಜ ಕುಣಿತ, ಮದ್ದಳೆ ಕಲೆ, ಜಗ್ಗಲಿಗೆ ಇನ್ನೂ ಹಲವು ಕಲಾ ತಂಡಗಳ ಪ್ರದರ್ಶನ ನಡೆಯುತ್ತಿದೆ.
ಸ್ತಬ್ಧ ಚಿತ್ರಗಳ ಪ್ರದರ್ಶನ ಆರಂಭವಾಗಿದೆ. ರಾಜ್ಯದ ಇತಿಹಾಸ, ಸಂಸ್ಕೃತಿ ಬಿಂಬಿಸುವ ಸ್ತಬ್ಧ ಚಿತ್ರಗಳ ಪ್ರದರ್ಶನ
ಸುಧಾ ಮೂರ್ತಿ, ಅನಿತಾ ಕುಮಾರಸ್ವಾಮಿ, ಸಚಿವ ಜಿ.ಟಿ.ದೇವೇಗೌಡ, ಜಯಮಾಲಾ, ಸಾರಾ ಮಹೇಶ್ ಇನ್ನೂ ಹಲವು ಮುಖಂಡರು ಜಂಬೂ ಸವಾರಿ ಚಾಲನೆಯಲ್ಲಿ ಭಾಗಿ.
ಜಂಬೂ ಸವಾರಿ ಚಾಲನೆಗೆ ಹಸಿರು ಶಾಲು ಹೊದ್ದು, ರೈತ ಪರ ನಿಲುವು ಪ್ರದರ್ಶಿಸಿದ ಕುಮಾರಸ್ವಾಮಿ. ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರಿಂದಲೂ ಪೂಜೆ.
More From
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications