ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿದೇಶಕ್ಕೆ ಹಬ್ಬುತ್ತಾ ಮೈಸೂರು ಸ್ಯಾಂಡಲ್ ಸೋಪ್ ಪರಿಮಳ?

By Kiran B Hegde
|
Google Oneindia Kannada News

ಮೈಸೂರು, ಜ. 16: ನಿರೀಕ್ಷೆಯಂತೆ ನಡೆದರೆ ಕರ್ನಾಟಕದ ಹೆಮ್ಮೆಯ ಮೈಸೂರು ಸ್ಯಾಂಡಲ್ ಸೋಪ್ ವಿದೇಶಗಳಲ್ಲೂ ತನ್ನ ಪರಿಮಳ ಬೀರಲಿದೆ.

ಕರ್ನಾಟಕ ಸರ್ಕಾರಿ ಸ್ವಾಮ್ಯದ ಕರ್ನಾಟಕ ಸೋಪ್ಸ್ ಆ್ಯಂಡ್ ಡಿಟರ್ಜಂಟ್ ಲಿ. (ಕೆಎಸ್‌ಡಿಎಲ್) ತನ್ನ ವ್ಯವಹಾರವನ್ನು ವಿದೇಶಕ್ಕೂ ವಿಸ್ತರಿಸಲು ಅನುಮತಿ ನೀಡಬೇಕೆಂದು ರಾಜ್ಯ ಸರ್ಕಾರವನ್ನು ಕೋರಿದೆ. ಆದರೆ, ಈ ಹಿಂದೆಯೂ ಹಲವು ಬಾರಿ ಅನುಮತಿ ಕೇಳಲಾಗಿತ್ತು. ಆದರೆ, ಸರ್ಕಾರ ನಿರಾಕರಿಸಿತ್ತು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೆಎಸ್‌ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಎ.ಸಿ. ಕೇಶವಮೂರ್ತಿ, "ಕಂಪನಿಗೆ ಈಗ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ನಮ್ಮ ಉತ್ಪನ್ನಗಳಾದ ಸೋಪ್, ಧೂಪದ್ರವ್ಯ ದಂಡಗಳು, ಶ್ರೀಗಂಧದ ಧೂಪ ಹಾಗೂ ಶ್ರೀಗಂಧದ ಎಣ್ಣೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಆದರೆ, ಇವನ್ನು ದೇಶದೊಳಗೆ ಮಾತ್ರ ಮಾರಲು ಅನುಮತಿ ಇದೆ. ಅನೇಕ ಅನಿವಾಸಿ ಭಾರತೀಯರು ಕರ್ನಾಟಕಕ್ಕೆ ಭೇಟಿ ನೀಡಿದಾಗ ಮಾತ್ರ ಇವನ್ನು ಖರೀದಿಸುವಂತಾಗಿದೆ" ಎಂದು ತಿಳಿಸಿದ್ದಾರೆ. [ಸ್ಯಾಂಡಲ್ ಸೋಪ್ ನಲ್ಲಿ ಹಗರಣದ ವಾಸನೆ]

soap

"ನಮ್ಮ ಅತ್ಯಂತ ಜನಪ್ರಿಯ ಬ್ರಾಂಡ್ ಆಗಿರುವ ಮೈಸೂರು ಸ್ಯಾಂಡಲ್ ಸೋಪ್ ಮಾರಾಟ ಪ್ರತಿ ವರ್ಷ ಶೇ. 14ರಷ್ಟು ಹೆಚ್ಚುತ್ತಿದೆ. ಜೊತೆಗೆ ಸ್ಯಾಂಡಲ್ ಗೋಲ್ಡ್ ಸೋಪ್ ಮಾರಾಟವೂ ವರ್ಷಕ್ಕೆ ಶೇ. 22ರಷ್ಟು ಹೆಚ್ಚಾಗಿದೆ" ಎಂದು ತಿಳಿಸಿದರು.

ಸಂಸ್ಥೆಯಿಂದಲೇ ಮೈಸೂರಲ್ಲಿ ಅಂಗಡಿ : "ಕೆಎಸ್‌ಡಿಎಲ್ ಸಂಸ್ಥೆ ಉತ್ಪನ್ನ ಮಾರಾಟಕ್ಕೆ ಕಂಪನಿ ವತಿಯಿಂದಲೇ ಮೈಸೂರಿನಲ್ಲಿ ಅಂಗಡಿ ತೆರೆಯುವ ಯೋಜನೆ ಇದೆ. ಅಂಗಡಿಗಾಗಿ ಸೂಕ್ತ ಸ್ಥಳ ಹುಡುಕುತ್ತಿದ್ದೇವೆ" ಎಂದು ಕೇಶವಮೂರ್ತಿ ತಿಳಿಸಿದ್ದಾರೆ.

ಪ್ರಸ್ತುತ ಅಶೋಕಪುರಂನಲ್ಲಿರುವ ಮೈಸೂರು ಶ್ರೀಗಂಧ ಕಾರ್ಖಾನೆಯಲ್ಲಿ ಈಗಾಗಲೇ ಒಂದು ಅಂಗಡಿಯಿದೆ. ಅದು ಗ್ರಾಹಕರನ್ನು ಹೆಚ್ಚು ಸಂಖ್ಯೆಯಲ್ಲಿ ಆಕರ್ಷಿಸುತ್ತಿದೆ. ಇದರಿಂದ ವಹಿವಾಟು ತಿಂಗಳಿಗೆ ಐದು ಲಕ್ಷ ರು.ಗಳಿಗೆ ಹೆಚ್ಚಾಗಿದೆ. ಮೊದಲು 3 ಲಕ್ಷ ರು. ಇತ್ತು ಎಂದು ತಿಳಿಸಿದರು.

ಆರಂಭವಾಗಿದೆ ಸೋಪ್ ಮೇಳ : ಮೈಸೂರಿನ ವಿನೋಬಾ ರಸ್ತೆಯಲ್ಲಿರುವ ನಂಜರಾಜ ಬಹದ್ದೂರ್ ಚೌಲ್ಟ್ರಿಯಲ್ಲಿ 'ಸೋಪ್ ಸಂತೆ' ಆಯೋಜಿಸಲಾಗಿದೆ. ಶುಕ್ರವಾರ ಆರಂಭವಾಗಿರುವ ಈ ಸಂತೆ 10 ದಿನಗಳ ಕಾಲ ನಡೆಯಲಿದೆ. ಕೆಎಸ್‌ಡಿಎಲ್ ಸಂಸ್ಥೆಯ ಎಲ್ಲ ಸೋಪ್‌ಗಳು, ಮೈಸೂರು ಸ್ಯಾಂಡಲ್ ಧೂಪ್ ಹಾಗೂ ಅಗರಬತ್ತಿಗಳನ್ನು ಪ್ರದರ್ಶನಕ್ಕಿಡಲಾಗಿದೆ ಎಂದು ಕೇಶವಮೂರ್ತಿ ತಿಳಿಸಿದ್ದಾರೆ.

English summary
The KSDL of Mysuru has sought permission to expand its business to foreign countries from the state government. The KSDL is likely to open an exclusive outlet also.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X