ಮೈಸೂರು ಕೊಡಗು ಲೋಕಸಭಾ ಕ್ಷೇತ್ರ: ಕೆಲ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ

ಮೈಸೂರು, ಏಪ್ರಿಲ್ 18 : ಮೂಲಭೂತ ಸೌಕರ್ಯ ಕಲ್ಪಿಸದ ಹಿನ್ನೆಲೆಯಲ್ಲಿ ಯಾವ ಅಭ್ಯರ್ಥಿಗೂ ಮತದಾನ ಮಾಡದಂತೆ ಮೈಸೂರಿನ ಕೆಆರ್ ನಗರದ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ನಗರದ ಚಿಬುಕಹಳ್ಳಿ ಗ್ರಾಮದಲ್ಲಿ ನಡೆದಿದೆ. 628 ಮತಗಳಿರುವ ಚಿಬುಕಹಳ್ಳಿ ಗ್ರಾಮವುಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರಲಿದೆ. ಗ್ರಾಮಕ್ಕೆ ರಸ್ತೆ, ಚರಂಡಿ, ಬಸ್ ಸೌಕರ್ಯ, ಒದಗಿಸದ ಹಿನ್ನಲೆ ಮತದಾನ ಬಹಿಷ್ಕಾರ ಗ್ರಾಮದ ಜನರಿಗೆ ಮತಹಾಕುವಂತೆ ಅಧಿಕಾರಿಗಳಿಂದ ಮನವೊಲಿಸುವ ಕಾರ್ಯ ಸಹ ನಡೆಯಿತು.

ಅಧಿಕಾರಗಳ ಮಾತಿಗೂ ಕಿಮ್ಮತ್ತು ನೀಡದ ಗ್ರಾಮಸ್ಥರು ಮತದಾನಕ್ಕೆ ಯಾರು ಇದುವರೆಗೂ ಬಂದಿಲ್ಲ. ಇತ್ತ ಮತಗಟ್ಟೆಯಲ್ಲೇ ಅಧಿಕಾರಿಗಳು ಸುಮ್ಮನೆ ಕುಳಿತಿದ್ದಾರೆ.

KR Nagar people boycott Lok sabha election

ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದಲ್ಲಿ ನಿಧಾನಗತಿಯ ಮತದಾನ ನಡೆಯುತ್ತಿದೆ. ಇಂದು ಮಧ್ಯಾಹ್ನ 1 ಗಂಟೆಯ ಮತದಾನದ ಶೇಕಡವಾರು ಪ್ರಮಾಣ ಕೊಂಚ ಏರಿಕೆ ಕಂಡಿದೆ. ಮಡಿಕೇರಿ- ಶೇ.46.11, ವಿರಾಜಪೇಟೆ- ಶೇ.46.31ಪಿರಿಯಾಪಟ್ಟಣ- 38.89, ಹುಣಸೂರು- ಶೇ.39.53, ಚಾಮುಂಡೇಶ್ವರಿ- ಶೇ.27.81 ಕೃಷ್ಣರಾಜ- ಶೇ.29.65 ಚಾಮರಾಜ- ಶೇ.33.24, ನರಸಿಂಹರಾಜ- ಶೇ.29.36 ಒಟ್ಟು ಶೇ.35.69 ರಷ್ಟು ಮತ ಚಲಾವಣೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+