ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈ ಬಾರಿ ಸಿದ್ದರಾಮಯ್ಯ ಆಟ ನಡೆಯೋಲ್ಲ: ಎಚ್ ಡಿ ಕುಮಾರಸ್ವಾಮಿ

By ಮೈಸೂರು ಜಿಲ್ಲಾಸುದ್ದಿ
|
Google Oneindia Kannada News

'ಬಿಜೆಪಿಗೆ ನಿಕಟವರ್ತಿಗಳು ಅಂದ್ರೆ ಕಾಂಗ್ರೆಸ್ ನವರು. ಜಾತಿ ಬಲ, ಹಣ ಬಲದಿಂದ ಮತ್ತೆ ಅಧಿಕಾರಕ್ಕೆ ಬರೋ ಕನಸು ಸಿದ್ದರಾಮಯ್ಯ ಅವರದ್ದು. ಆದ್ರೆ ಈ ಬಾರಿ ಸಿದ್ದರಾಮಯ್ಯ ಆಟ ನಡೆಯಲ್ಲ" ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಮೈಸೂರಿನ ಖಾಸಗಿ ಹೊಟೇಲ್ ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯಗೆ ರಸ್ತೆಯಲ್ಲೇ ಮಾನ ತೆಗೆದ ಮರಿಸ್ವಾಮಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯಗೆ ರಸ್ತೆಯಲ್ಲೇ ಮಾನ ತೆಗೆದ ಮರಿಸ್ವಾಮಿ

"ಯಾರ್ಯಾರ ಕಾಲನ್ನು ಹಿಡಿದುಕೊಂಡು ಕಾಂಗ್ರೆಸ್ ಸೇರಿ ಅಧಿಕಾರಕ್ಕೆ ಬಂದ್ರು ಸಿದ್ದರಾಮಯ್ಯ? ಚಾಮುಂಡೇಶ್ಚರಿ ಕ್ಷೇತ್ರದಲ್ಲಿ ಗೆಲ್ಲಲ್ಲ ಅಂತಾ ಬಾದಾಮಿಗೆ ಹೋಗಿದ್ದಾರೆ. ಜಾತಿ ಗುಂಪಿನ ನಾಯಕರನ್ನು ಚುನಾವಣೆಗೆ ನೇಮಕಮಾಡಿ ಜಾತಿ ವಾದ ಮಾಡುತ್ತಾರೆ. ಅದ್ಯಾರ ಜೊತೆ ಸಿಎಂ ವರುಣಾದಲ್ಲಿ ಒಪ್ಪಂದ ಮಾಡಿಕೊಂಡರೋ ಏನೊ! ವಿಜಯೇಂದ್ರ ಕಣದಿಂದ ಹಿಂದೆ ಸರಿಯಲು ಯಾರು ಕಾರಣ?" ಎಂದು ಸಿದ್ದರಾಮಯ್ಯ ಅವರನ್ನು ಕುಮಾರಸ್ವಾಮಿ ಪ್ರಶ್ನಿಸಿದರು.

Karnataka elections: Siddaramaiahs strategy will not work says HD Kumaraswamy

"ವರುಣಾ ಬಿಜೆಪಿ ಕಾರ್ಯಕರ್ತರಿಗೆ ಸಿಎಂ ಚಾಕು ಹಾಕಿದ್ದಾರೆ. ನಾವು ವರುಣಾದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಿಸಲು ಸ್ಟ್ಯಾಟರ್ಜಿ ಮಾಡುತ್ತೇನೆ. ಇವತ್ತು ಜಾತಿ ಭೇದ ಮರೆತು ಒಟ್ಟಾಗಿ ಜೆಡಿಎಸ್ ಬೆಂಬಲ ನೀಡಬೇಕಿದೆ. ಮೈಸೂರು ಜಿಲ್ಲೆಯನ್ನ ಸಿಎಂ ಅನಾಗರಿಕವಾಗಿ ನಡೆಸಿಕೊಂಡಿದ್ದಾರೆ. ವರುಣಾದಲ್ಲಿ ಮರಳು ದಂಧೆ ಹೆಚ್ಚಾಗಿದೆ" ಎಂದು ಕಳವಳ ವ್ಯಕ್ತಪಡಿಸಿದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

"ದೇವೇಗೌಡರು ನನಗೆ ಆಶೀರ್ವಾದ ಮಾಡ್ತಾರೆ ಎಂದು ಲೋಕೋಪಯೋಗಿ ಸಚಿವ ಎಚ್ ಸಿ ಮಹದೇವಪ್ಪ ಹೇಳಿದ್ದಾರೆ. ಆದರೆ ಮಹದೇವಪ್ಪ ಅವರಿಗೆ ದೇವೇಗೌಡರು ಯಾವುದೇ ರೀತಿ ಆಶೀರ್ವಾದ ಮಾಡಿಲ್ಲ. ಇಂಥ ಮಾತುಗಳನ್ನು ಜನ ನಂಬಬಾರದು" ಎಂದರು

ಮೋದಿ ಕರ್ನಾಟಕಕ್ಕೆ ಏನೂ ಕೊಟ್ಟಿಲ್ಲ!
ನಾಲ್ಕು ವರ್ಷಗಳಲ್ಲಿ ಮೋದಿ ರಾಜ್ಯಕ್ಕೆ ನೀಡಿದ ಕೊಡುಗೆ ಶೂನ್ಯ ಎಂಬುದು ನೆನಪಿರಲಿ. ಮೋದಿ ಭಾಷಣದಿಂದ ಏನೂ ಆಗುವುದಿಲ್ಲ ಎಂದ ಅವರು, ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದೆ ಎಂಬ ವದಂತಿಯನ್ನು ಅಲ್ಲಗಳೆದರು. ಮೋದಿ ಭಾಷಣದಿಂದ ರಾಜ್ಯ ರಾಜಕಾರಣ ಬದಲಾಗುತ್ತದೆ ಎಂಬ ಎಚ್ ಡಿ ದೇವೇಗೌಡ ಅವರ ಮಾತಿಗೆ ಸ್ಪಷ್ಟೀಕರಣ ನೀಡಿದ ಅವರು, 'ಮೋದಿ ಭಾಷಣ ಕೇಳಿ, ಕೆರಳಿ ಜನ ಜೆಡಿಎಸ್ ಗೆ ಮತ ಹಾಕುತ್ತಾರೆ ಎಂಬ ಅರ್ಥದಲ್ಲಿ ಎಚ್ ಡಿ ದೇವೇಗೌಡರು ಹೇಳಿದ್ದರು' ಎಂದಿದ್ದಾರೆ.

ಬಿಜೆಪಿ, ಜೆಡಿಎಸ್ ನೊಂದಿಗೆ ಅನಧಿಕೃತವಾಗಿ ಮೈತ್ರಿ ಮಾಡಿಕೊಂಡಿದೆ: ಸಿಎಂಬಿಜೆಪಿ, ಜೆಡಿಎಸ್ ನೊಂದಿಗೆ ಅನಧಿಕೃತವಾಗಿ ಮೈತ್ರಿ ಮಾಡಿಕೊಂಡಿದೆ: ಸಿಎಂ

"ನಾನೇನು ನಾಳೆ ಬೆಳಿಗ್ಗೆ ಅಧಿಕಾರ ಹಿಡಿಯುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಸಿದ್ದರಾಮಯ್ಯ ಮತ್ತೆ ಸಿಎಂ ಆಗೋ ಕನಸು ಕಂಡಿದ್ದಾರೆ. ಸಿಎಂ ಯಾರು ಆಗ್ಬೇಕು ಎಂದು ಜನ ತೀರ್ಮಾನ ಮಾಡುತ್ತಾರೆ. ಬಾದಾಮಿ ಕ್ಷೇತ್ರದಲ್ಲಿ ಹಣ ಬಲದಿಂದ ಸಿದ್ದರಾಮಯ್ಯ, ಶ್ರೀರಾಮುಲು ಗೆಲ್ಲಲು ಸಾಧ್ಯವಿಲ್ಲ. ಸಿದ್ದರಾಮಯ್ಯ, ಶ್ರೀರಾಮುಲು ಇಬ್ಬರೂ ಹೊರಗಿನವರು. ಜೆಡಿಎಸ್ ಅಭ್ಯರ್ಥಿ ಹನುಮಂತ ಮಾವಿನಮರದ್ ಬಾದಾಮಿ ಮನೆ ಮಗ. ಈ ಬಾರಿ ಬಾದಾಮಿಯಲ್ಲಿ ಜೆಡಿಎಸ್ ಗೆಲ್ಲಲಿದೆ" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮರಿಸ್ವಾಮಿ ಕುರಿತು ಮೆಚ್ಚುಗೆ
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಮುಖ್ಯಮಂಗತ್ರಿ ಕುಮಾರಸ್ವಾಮಿಯವರಿಗೆ ಸೆಡ್ಡುಹೊಡೆದು ಉತ್ತರ ನೀಡಿದ ಜೆಡಿಎಸ್ ಕಾರ್ಯಕರ್ತ ಮರಿಸ್ವಾಮಿ ಅವರನ್ನು ಈ ಸಂದರ್ಭದಲ್ಲಿ ಮೆಚ್ಚಿದ ಕುಮಾರಸ್ವಾಮಿ, ಅವರನ್ನು ಸನ್ಮಾನಿಸಿದರು. ಮರಿಸ್ವಾಮಿ ಹೇಳಿಕೆಯಿಂದ ಜೆಡಿಎಸ್ ಕಾರ್ಯಕರ್ತರಿಗೆ ಧೈರ್ಯ ಬಂದಿದೆ ಎಂದು ಅವರು ಹೇಳಿದರು.

English summary
Karnataka assembly elections 2018: "Karnataka chief minister Siddaramaiah's strategy will not work in this elections" Former CM and JDS state chief HD Kumaraswamy said in Mysuru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X