'ಕರ್ನಾಟಕ ಫಲಿತಾಂಶ 2019ರ ಲೋಕಸಭೆ ಚುನಾವಣೆಗೆ ಮುನ್ನುಡಿ'

ಮೈಸೂರು, ಮೇ 13 : 'ಕರ್ನಾಟಕದ ವಿಧಾನಸಭೆ ಚುನಾವಣೆ ಫಲಿತಾಂಶ 2019ರ ಲೋಕಸಭೆಯ ಚುನಾವಣೆ ಮಾತ್ರವಲ್ಲ ದೇಶದ ಚುನಾವಣೆಗೆ ಅಡಿಗಲ್ಲು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮೈಸೂರಿನಲ್ಲಿ ಭಾನುವಾರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಲೋಕಸಭೆ ಚುನಾವಣೆಗೆ ಮುಂಚಿತವಾಗಿ, ರಾಜಸ್ಥಾನ ಮತ್ತು ಮಧ್ಯಪ್ರದೇಶದ ಚುನಾವಣೆ ಬರಲಿದೆ. ಆ ಚುನಾವಣೆಗಳನ್ನು ಗೆದ್ದು ದೇಶವನ್ನು ಹಿಡಿತಕ್ಕೆ ತಗೆದುಕೊಳ್ಳುತ್ತೇವೆ' ಎಂದರು.

ದಲಿತ ಮುಖ್ಯಮಂತ್ರಿ : 'ದಲಿತ ಮುಖ್ಯಮಂತ್ರಿ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನ ಮಾಡಿದರೆ ನನ್ನ ತಕರಾರಿಲ್ಲ. ದಲಿತ ಸಿಎಂ ಒಮ್ಮೆಲೇ ಮಾಡಲು ಸಾಧ್ಯವಿಲ್ಲ, ಶಾಸಕರ ಸಮ್ಮತಿ ಬೇಕು' ಎಂದು ಸಿದ್ದರಾಮಯ್ಯ ಹೇಳಿದರು.

Karnataka elections : Karnataka result indication for 2019 Lok Sabha polls

'ನಾನು ಎರಡೂ ಕ್ಷೇತ್ರಗಳಲ್ಲಿ ಜಯಗಳಿಸುವೆ. ಬಾದಾಮಿಯಲ್ಲಿ ಹೆಚ್ಚು ಬಹುಮತ ಬರಲಿದೆ. ಚಾಮುಂಡೇಶ್ಚರಿಯಲ್ಲಿ ಕೂಡ ಗೆಲ್ಲುವೆ. ಆದರೆ, ನಿರೀಕ್ಷೆ ಮಟ್ಟದ ಲೀಡ್ ಬರದಿರಬಹುದು' ಎಂದರು.

'ಜಿ.ಟಿ.ದೇವೇಗೌಡ ಅವರು ಹೆಚ್ಚು ಹಣ ಖರ್ಚು ಮಾಡಿದ್ದಾರೆ. ಆದರೆ, ಹಣ ಎಲ್ಲಿಂದ ಬಂತು? ಅಂತಾ ಗೊತ್ತಿಲ್ಲ. ಹಣಕ್ಕೆ ಹೆಚ್ಚು ಮನ್ನಣೆ ಕೊಡುತ್ತಾರೆ ಅಂತ ಅನ್ನಿಸುವುದಿಲ್ಲ' ಎಂದು ತಿಳಿಸಿದರು.

'ಸಮಿಶ್ರ ಸರ್ಕಾರದ ಬಗ್ಗೆ, ವಿವಿಧ ಸರ್ವೆಗಳ ಬಗ್ಗೆ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದರು. ಸಮಿಶ್ರ ಸರ್ಕಾರ ಬರತ್ತೆ ಅನ್ನೋ ಸಮೀಕ್ಷೆ ಸತ್ಯ ಇರಬಹುದು. ಆದರೆ, ಸಂಪೂರ್ಣವಾಗಿ ಅದನ್ನು ನಂಬಲು ಸಾಧ್ಯವಿಲ್ಲ' ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+