ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಅವರು ಕಾಂಗ್ರೆಸ್ ನವರು ಎನ್ನಿ' ಎಂದು ನಗುತ್ತಾ ಹೇಳಿದ ಕುಮಾರಸ್ವಾಮಿ

By Yashaswini
|
Google Oneindia Kannada News

Recommended Video

ಚನ್ನಪಟ್ಟಣದಲ್ಲಿ ಯಾರು ( ಸಿದ್ದರಾಮಯ್ಯ ) ಬೇಕಾದರೂ ನನ್ನ ಎದುರು ನಿಲ್ಲಲಿ, ಎಂದ ಎಚ್ ಡಿ ಕೆ | Oneindia Kannada

ಮೈಸೂರು, ಏಪ್ರಿಲ್ 16 : "ಕಾಂಗ್ರೆಸ್ ನವರು ಇನ್ನೂ ಏಳು ಜನರಿಗೆ ಟಿಕೆಟ್ ನೀಡಲಿ. ನಮಗೇನೂ ನಷ್ಟವಿಲ್ಲ, ನಮಗೇನಿದ್ದರೂ ಲಾಭವೇ" ಎಂದಿದ್ದಾರೆ ಎಚ್.ಡಿ.ಕುಮಾರಸ್ವಾಮಿ. ಜೆಡಿಎಸ್ ನ ಬಂಡಾಯ ಶಾಸಕರು ಎಂದು ಕರೆಯಬೇಡಿ. ಅವರನ್ನು ಕಾಂಗ್ರೆಸ್ ನವರು ಅಂತ ಹೇಳಿ ಎಂದು ಮಾಧ್ಯಮದವರಿಗೆ ನಗುತ್ತಲೇ ಉತ್ತರಿಸಿದರು.

ಜೆಡಿಎಸ್ ನಿಂದ ಕಾಂಗ್ರೆಸ್ ಸೇರಿದ ಏಳು ಮಂದಿಗೆ ಟಿಕೆಟ್ ನೀಡಲಾದ ವಿಚಾರಕ್ಕೆ ಕುರಿತಂತೆ ಮಾಧ್ಯಮದವರ ಪ್ರಶ್ನೆಗೆ ಹೀಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೀಗೆ ಪ್ರತಿಕ್ರಿಯಿಸಿದರು. ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ಎಚ್.ಎಂ.ರೇವಣ್ಣ ಸ್ಪರ್ಧಿಸಿದರೂ ನನಗೇನೂ ನಷ್ಟವಿಲ್ಲ. ಬೇಕಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಬಂದು ನಿಲ್ಲಲಿ ಎಂದರು.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಸಿದ್ದರಾಮಯ್ಯನವರ ಕಾರ್ಯಕ್ರಮಗಳಿಗೆ ಜನರೇ ಬರುತ್ತಿಲ್ಲ. ಹಣದ ಆಮಿಷ ಒಡ್ಡಿ ಪ್ರಚಾರಕ್ಕೆ ಜನರನ್ನು ಕರೆತರುತ್ತಿದ್ದಾರೆ. ಸಿದ್ದರಾಮಯ್ಯನವರಿಗೆ ಸೋಲಿನ ಭೀತಿ ಎದುರಾಗಿದೆ ಎಂದು ಹೇಳಿದರು.

Karnataka elections: Call them as Congress men, said HDK

ತೇರದಾಳ ಗ್ರಾಮವಾಗುವಂತೆ ಒತ್ತಾಯ

ಇತ್ತ ಮೈಸೂರಿನಲ್ಲಿ ಖಾಸಗಿ ಹೋಟೆಲ್ ನಲ್ಲಿ ತಂಗಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ನೋಡಲು ತೇರದಾಳ ಗ್ರಾಮದಿಂದ ಇನ್ನೂರಕ್ಕೂ ಹೆಚ್ಚು ಗ್ರಾಮಸ್ಥರು ಆಗಮಿಸಿದ್ದರು. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತೇರದಾಳ ವಿಧಾನಸಭಾ ಕ್ಷೇತ್ರದ ಜನರು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ತಮ್ಮ ಕ್ಷೇತ್ರವನ್ನು ತಾಲೂಕು ಮಾಡಬೇಕೆಂದು ಮನವಿ ಮಾಡಿದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಟಿಕೆಟ್ ರಾಜಕೀಯ

ತೇರದಾಳ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ, ಆ ಕ್ಷೇತ್ರವನ್ನು ತಾಲೂಕು ಮಾಡುತ್ತೇನೆ ಎಂದು ಈ ಹಿಂದೆ ಹೇಳಿದ್ದರು. ಅದಕ್ಕಾಗಿ ನಾವು ಇಲ್ಲಿಗೆ ಬಂದಿದ್ದೇವೆ. ಅವರಲ್ಲಿ ಮತ್ತೊಮ್ಮೆ ಮನವಿ ಮಾಡುತ್ತಿದ್ದೇವೆ ಎಂದು ಹೇಳಿದರು.

English summary
Karnataka Assembly Elections 2018: Don't call them as JDS rebel leaders, all of 7 are Congress men, said JDS state president HD Kumaraswamy in Mysuru. Also said, we are not afraid of Congress, let them give a ticket whoever they want.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X