Amit Shah Hugs SA Ramdas 'ತ್ಯಾಗ'ರಾಜ ಎಸ್ಎ ರಾಮದಾಸ್‌ಗೆ ಅಮಿತ್ ಶಾ ಕಿವಿಮಾತು; ಏನದು?

2023ರ ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಎದುರಿಸಲು ಮೂರು ರಾಜಕೀಯ ಪಕ್ಷಗಳು ಸರ್ವ ಸನ್ನದ್ಧವಾಗಿದ್ದು, ಈಗಾಗಲೇ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.

ಭಾರತೀಯ ಜನತಾ ಪಕ್ಷವು ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆಯ ಮಾನದಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ನಾಲ್ಕಕ್ಕಿಂತ ಹೆಚ್ಚು ಬಾರಿ ಗೆದ್ದವರು ಮತ್ತು ವಯಸ್ಸಾದ ಕೆಲ ಶಾಸಕರಿಗೆ ಟಿಕೆಟ್ ತಪ್ಪಿಸಿ, ಹೊಸ ಮುಖಗಳಿಗೆ ಮಣೆ ಹಾಕಿದೆ.

Karnataka Election: Amit Shah Hugs To SA Ramdas Who Compromised His KR Constituency

ಇಷ್ಟು ವರ್ಷಗಳ ಕಾಲ ಪಕ್ಷದ ಅಭ್ಯರ್ಥಿ ಪರ ನಿಂತು ಕೆಲಸ ಮಾಡಿದ್ದ ಕಾರ್ಯಕರ್ತರನ್ನು ಗುರುತಿಸಿ ಟಿಕೆಟ್ ನೀಡಿದೆ. ಅಲ್ಲದೇ ಕ್ಷೇತ್ರದಲ್ಲಿ ಆಂತರಿಕ ವಿರೋಧ ಮತ್ತು ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವವರಿಗೆ ಟಿಕೆಟ್ ನೀಡದೆ, ಯುವ ಹಾಗೂ ಹೊಸ ಮುಖಗಳಿಗೆ ನೀಡುವ ಮೂಲಕ ಗುಜರಾತ್ ಮತ್ತು ಉತ್ತರಪ್ರದೇಶ ಮಾಡೆಲ್ ರೀತಿ ಪ್ರಯೋಗ ಮಾಡಿದೆ. ಇದು ಎಷ್ಟರ ಮಟ್ಟಿಗೆ ಲಾಭ ತಂದುಕೊಡಲಿದೆ ಎಂಬುದಕ್ಕೆ ಮೇ 13ರ ಫಲಿತಾಂಶದವರೆಗೂ ಕಾಯಲೇಬೇಕು.

ಈ ಪ್ರಯೋಗದಿಂದ ಚುನಾವಣಾ ರಾಜಕೀಯ ಜೀವನ ಅಂತ್ಯವಾಗಿಸಿಕೊಂಡವರಲ್ಲಿ ಎಸ್ಎ ರಾಮದಾಸ್ ಕೂಡ ಒಬ್ಬರು. ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕನಾಗಿರುವ ಎಸ್ಎ ರಾಮದಾಸ್‌ಗೆ ಈ ಬಾರಿ ಟಿಕೆಟ್ ನೀಡಿಲ್ಲ. ಬದಲಾಗಿ ಶ್ರೀವತ್ಸ ಅವರಿಗೆ ಟಿಕೆಟ್ ಕೊಡಲಾಗಿದೆ.

ಟಿಕೆಟ್ ಸಿಗದೆ ಮೊದಲು ಸಿಟ್ಟಾಗಿದ್ದ ಎಸ್ಎ ರಾಮದಾಸ್‌ ನಂತರ, ಕೋಪ ಶಮನ ಮಾಡಿಕೊಂಡು ಕ್ಷೇತ್ರವನ್ನು ತ್ಯಾಗ ಮಾಡುವುದಾಗಿ, ಬಿಜೆಪಿಯಲ್ಲೇ ಉಳಿದು ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸುವುದಾಗಿಯೂ ಘೋಷಿಸಿದರು.

Karnataka Election: Amit Shah Hugs To SA Ramdas Who Compromised His KR Constituency

ಇದೀಗ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್ ಶಾ ಅವರು ಸೋಮವಾರ, ಏಪ್ರಿಲ್ 24ರಂದು ಮೈಸೂರು ಮತ್ತು ಚಾಮರಾಜನಗರ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪ್ರಚಾರಕ್ಕಾಗಿ ಆಗಮಿಸಿದರು. ಮೈಸೂರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಎಸ್‌ಎ ರಾಮದಾಸ್ ಅವರನ್ನು ಅಮಿತ್ ಶಾ ಅಪ್ಪಿಕೊಂಡರು.

ಟಿಕೆಟ್ ನೀಡದಿದ್ದರೂ ಪಕ್ಷದೊಂದಿಗೆ ನಿಂತಿರುವ ಮತ್ತು ಕೃಷ್ಣರಾಜ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿರುವ ಎಸ್ಎ ರಾಮದಾಸ್ ಬಗ್ಗೆ ಬಿಜೆಪಿ ರಾಷ್ಟ್ರೀಯ ನಾಯಕ ಅಮಿತ್ ಶಾ ಅವರಿಗೂ ಸಂತೋಷ ತಂದಿದೆ.

ಕಾಲಿಗೆ ಬೀಳಲು ಯತ್ನಿಸಿದ ಎಸ್‌ಎ ರಾಮದಾಸ್ ಅವರನ್ನು ಅಮಿತ್ ಶಾ ಅಪ್ಯಾಯಮಾನವಾಗಿ ಅಪ್ಪಿಕೊಂಡಿದ್ದು, ಪಕ್ಷ ನಿಷ್ಠರನ್ನು ಕೈಬಿಡುವುದಿಲ್ಲ ಎಂಬ ಸಂದೇಶ ನೀಡಿದ್ದಾರೆ. ಕ್ಷೇತ್ರ ತ್ಯಾಗ ಮಾಡಿರುವ ರಾಮದಾಸ್‌ಗೆ ಭವಿಷ್ಯದಲ್ಲಿ ದೊಡ್ಡ ಜವಾಬ್ದಾರಿ ನೀಡುವ ಕಿವಿಮಾತು ಹೇಳಿರಬಹುದೆಂದು ತಿಳಿದುಬಂದಿದೆ.

Karnataka Election: Amit Shah Hugs To SA Ramdas Who Compromised His KR Constituency

ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮತ್ತು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಟಿಕೆಟ್ ಸಿಗದ ಕಾರಣ ಬಿಜೆಪಿ ಪಕ್ಷವನ್ನೇ ತ್ಯಜಿಸಿದರು. ಹಾಲಿ ಶಾಸಕನಾಗಿದ್ದರೂ ಎಸ್‌ಎ ರಾಮದಾಸ್‌ಗೆ ಟಿಕೆಟ್ ಸಿಗಲಿಲ್ಲ. ಆದರೂ ಹೈಕಮಾಂಡ್‌ಗೆ ಸೆಡ್ಡು ಹೊಡೆಯಲಿಲ್ಲ ಮತ್ತು ಪಕ್ಷ ತೊರೆಯಲಿಲ್ಲ.

ಟಿಕೆಟ್ ಸಿಗದಿದ್ದಾಗ ಸಣ್ಣ ಅಸಮಾಧಾನ ಹೊರಹಾಕಿದರೂ, ಪಕ್ಷಕ್ಕೆ ಅವಮಾನವಾಗುವ ಕೆಲಸ ಮಾಡಲಿಲ್ಲ ಎಂದು ಎಸ್‌ಎ ರಾಮದಾಸ್ ಬಗ್ಗೆ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಕ್ಷೇತ್ರ ತ್ಯಾಗ ಮಾಡಿದ ಹಾಲಿ ಶಾಸಕರ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಅಂತಹವರಲ್ಲಿ ಎಸ್ಎ ರಾಮದಾಸ್ ಕೂಡ ಒಬ್ಬರು. ತ್ಯಾಗ ಎಂದರೆ ಎಸ್ಎ ರಾಮದಾಸ್ ಮಾಡಿದ್ದಾರಲ್ಲಾ ಅದು ತ್ಯಾಗ ಎಂದು ಪಕ್ಷ ತ್ಯಜಿಸಿದ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿಗೆ ಟಾಂಗ್ ನೀಡಿದ್ದರು.

ಈ ಹಿಂದೆ ಮೈಸೂರಿನ ಅಭಿವೃದ್ಧಿ ಕೆಲಸಗಳ ಉದ್ಘಾಟನೆಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಸಮಾರಂಭದ ವೇದಿಕೆಯಲ್ಲೇ ಎಸ್‌ಎ ರಾಮದಾಸ್ ಅವರ ಬೆನ್ನಿಗೆ ಆತ್ಮೀಯವಾಗಿ ಗುದ್ದಿದ್ದರು. ಪ್ರಧಾನಿಯಾಗುವುದಕ್ಕಿಂತ ಮುಂಚೆಯೇ ನರೇಂದ್ರ ಮೋದಿ ಜೊತೆ ಎಸ್‌ಎ ರಾಮದಾಸ್ ಒಳ್ಳೆಯ ಒಡನಾಟ ಹೊಂದಿದ್ದರು ಎನ್ನಲಾಗಿದೆ.

ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಂತಹ ಟಾಪ್ ನಾಯಕರಿಂದ ಶಹಬ್ಬಾಷ್‌ಗಿರಿ ಪಡೆದುಕೊಂಡ ಎಸ್‌ಎ ರಾಮದಾಸ್ ಬಿಜೆಪಿ ಪಕ್ಷ ಬಿಡುವುದುಂಟೇ? ಎಂಬ ಪ್ರಶ್ನೆಯನ್ನು ನಮಗೆ ನಾವೇ ಹಾಕಿಕೊಳ್ಳಬೇಕು. ಟಿಕೆಟ್ ನೀಡದಿದ್ದರೂ ಪಕ್ಷ ಅವರನ್ನು ಕಡೆಗಣಿಸುವುದಿಲ್ಲ ಎಂಬ ಸಂದೇಶ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+