ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ನಡವಳಿಕೆ, ಘನತೆ ಬಿಟ್ಟರೆ ಸಿಎಂ ಅನ್ ಪಾಲಿಶ್ಡ್ ಡೈಮಂಡ್!"

By Yashaswini
|
Google Oneindia Kannada News

ಮೈಸೂರು, ಮಾರ್ಚ್ 12: "ಸಿಎಂ ಸಿದ್ದರಾಮಯ್ಯ ಅನ್ ಪಾಲಿಶ್ಡ್ ಡೈಮಂಡ್ ಅಂತ ಹೇಳಿದ್ದು ನಿಜ, ಆದರೆ ನಡವಳಿಕೆ, ಘನತೆಯಲ್ಲಿ ಅನ್ ಪಾಲಿಶ್ಡ್ ಡೈಮಂಡ್ ಆಗ್ಲಿಲ್ಲ. ಮಿಕ್ಕೆಲ್ಲಾ ವಿಚಾರಗಳಲ್ಲೂ ಅದು ನಿಜವಾಗಿದೆ..! ಎಂದು ಜೆಡಿಎಸ್ ನಾಯಕ, ಮಾಜಿ ಸಂಸದ ಎಚ್. ವಿಶ್ವನಾಥ್ ಲೇವಡಿ ಮಾಡಿದರು!

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, 'ಐಎಎಸ್, ಐಪಿಎಸ್ ಅಧಿಕಾರಿಗಳಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಖಾರವಾದ ಪತ್ರ ಬಂದಿರುವುದು ಗಂಭಿರವಾದ ವಿಚಾರ.
ಸಿದ್ದರಾಮಯ್ಯ ಆಡಳಿತದಲ್ಲಿ ಪೊಲೀಸರೇ ಅಧೀರರಾಗಿದ್ದಾರೆ. ಅವರಿಗೆ ಗೃಹ ಮಂತ್ರಿ ಹಾಗೂ ಸಿಎಂ ಮೇಲೆ ನಂಬಿಕೆ ಇಲ್ಲ" ಎಂದರು.

ಜನರನ್ನು ಮೂರ್ಖರು ಎಂದುಕೊಳ್ಳಬೇಡಿ: ಸಿಎಂ ಗೆ ವಿಶ್ವನಾಥ್ ಎಚ್ಚರಿಕೆಜನರನ್ನು ಮೂರ್ಖರು ಎಂದುಕೊಳ್ಳಬೇಡಿ: ಸಿಎಂ ಗೆ ವಿಶ್ವನಾಥ್ ಎಚ್ಚರಿಕೆ

"ದೇಶದಲ್ಲಿ ಎರಡನೇ ಅತಿ ಹೆಚ್ಚು ಕ್ರೈಂ ನಡೆದಿರುವ ನಗರ ಬೆಂಗಳೂರು ಎಂದು ಸರ್ವೆ ಹೇಳುತ್ತಿದೆ. ಜಾತಿ ವಿಚಾರವನ್ನು ಮುಂದಿಟ್ಟುಕೊಂಡು ಅಧಿಕಾರಿಗಳ ಬದಲಾವಣೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆ ಬಹಳಷ್ಟು ಅನುಮಾನಕ್ಕೆ ಕಾರಣವಾಗಿದೆ" ಎಂದು ಶಂಕೆ ವ್ಯಕ್ತಪಡಿಸಿದರು.

Karnataka chief minister Siddaramaiah does not suit for CM Candidate: H Vishwanath

"ಐಎಎಸ್ ಅಧಿಕಾರಿಗಳ ಸಂಘಟನೆ ಬಹಿರಂಗ ಪತ್ರ ಬರೆದಿರೋದು ಆಡಳಿತದ ಇತಿಹಾಸದಲ್ಲೇ ಮೊದಲು. ಆದರೂ ಸಿಎಂ ಈ ವಿಚಾರದಲ್ಲಿ ತಮ್ಮ ತಪ್ಪನ್ನು ಒಪ್ಪಿಕೊಳ್ಳಲು ರೆಡಿಯಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಅಧೋಗತಿಗೆ ತಲುಪಿದೆ. ನಿತ್ಯ ಪೊಲೀಸರ ವರ್ಗಾವಣೆ ಆಗುತ್ತಿದೆ. ಚುನಾವಣೆ ಮುಂದಿಟ್ಟುಕೊಂಡು ಈ ಬೆಳವಣಿಗೆ ನಡೆದಿರೋದು ಶಾಂತಿಯುತ ಚುನಾವಣೆ ನಡೆಯುವ ಬಗ್ಗೆಯೇ ಅನುಮಾನ ಹುಟ್ಟು ಹಾಕಿದೆ" ಎಂದು ಆತಂಕ ವ್ಯಕ್ತಪಡಿಸಿದರು.

ಸಿದ್ದರಾಮಯ್ಯನವರಿಂದ 'ಮಕ್ಕಳ ಭಾಗ್ಯ'ವೊಂದೇ ಬಾಕಿ: ವಿಶ್ವನಾಥ್ಸಿದ್ದರಾಮಯ್ಯನವರಿಂದ 'ಮಕ್ಕಳ ಭಾಗ್ಯ'ವೊಂದೇ ಬಾಕಿ: ವಿಶ್ವನಾಥ್

"ಹೇಗಾದರೂ ಮಾಡಿ ಚುನಾವಣೆ ಗೆಲ್ಲಬೇಕು ಎಂದುಕೊಂಡಿರುವ ಸಿದ್ದರಾಮಯ್ಯ ಗೂಂಡಾಗಳು, ಕ್ರಿಮಿನಲ್ ಗಳನ್ನು ಪಕ್ಷಕ್ಕೆ ಕರೆತಂದಿದ್ದಾರೆ. ಸರ್ಕಾರದ ವೆಚ್ಚದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ನಡೆಯುತ್ತಿದೆ. ಇದೆಲ್ಲ ಸೇರಿ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಅಧಿಕಾರ ಹಳ್ಳ ಹಿಡಿಯುವ ಮೊದಲು ಸೂಕ್ತ ಕ್ರಮ ಕೈಗೊಳ್ಳಬೇಕು" ಎಂದು ಅವರು ಹೇಳಿದರು.

Karnataka chief minister Siddaramaiah does not suit for CM Candidate: H Vishwanath

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

"ಡಿಸಿ ಕಚೇರಿ, ಜಯದೇವ ಹೃದ್ರೋಗ ಆಸ್ಪತ್ರೆಯ ಕಟ್ಟಡಗಳು ಇನ್ನೂ ಪೂರ್ಣಗೊಂಡಿಲ್ಲ. ಏಕಿಷ್ಟು ತರಾತುರಿಯಲ್ಲಿ ಎಲ್ಲದಕ್ಕೂ ಸಿಎಂ ಉದ್ಘಾಟನೆ ಮಾಡಬೇಕು? ಅವರಿಗೆ ಗೊತ್ತಾಗಿ ಹೋಗಿದೆ, ಮುಂದೆ ಕಾಂಗ್ರೆಸ್ ಸರ್ಕಾರವೂ ಬರಲ್ಲ, ನಾನು ಮುಖ್ಯಮಂತ್ರಿಯೂ ಆಗಲ್ಲ ಅಂತಾ, ಸೋಲ್ತೀನಿ ಅಂತಾ ಗೊತ್ತಾಗಿಯೇ ಎಲ್ಲವನ್ನು ಈಗಲೇ ಉದ್ಘಾಟಿಸಿ ಹೋಗುತ್ತಿದ್ದಾರೆ" ಎಂದು ಲೇವಡಿ ಮಾಡಿದರು.

English summary
"Karnataka chief minister Siddaramaiah does not suit for CM Candidate. He is establishing criminal situations in Karnataka" Former MP and JDS chief H Vishwanath told in a press meet in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X