ಕಾಚಿಗುಡ – ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಮೈಸೂರಿನವರೆಗೂ ವಿಸ್ತರಣೆ

ಮೈಸೂರು, ಫೆಬ್ರವರಿ 7: ಮೈಸೂರಿಗರಿಗೆ ಕಳೆದ ತಿಂಗಳಷ್ಟೇ ಹೊಸ ಚೆನ್ನೈ ರೈಲು ಸಿಕ್ಕಿತು. ಅದರ ಬೆನ್ನಲೇ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಹೌದು, ಈಚೆಗಷ್ಟೇ ಚೆನ್ನೈ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲು ಮೈಸೂರಿಗೆ ವಿಸ್ತರಣೆಗೊಂಡ ನಂತರ ಕಾಚಿಗುಡ - ಬೆಂಗಳೂರು ಎಕ್ಸ್‌ಪ್ರೆಸ್(12785/86) ರೈಲು ಮೈಸೂರಿನವರೆಗೂ ವಿಸ್ತರಣೆಗೊಂಡಿದೆ.

18 ವರ್ಷಗಳಿಂದ ಈ ರೈಲು ಕಾಚಿಗುಡ - ಬೆಂಗಳೂರು ನಡುವೆ ಸಂಚರಿಸುತ್ತಿದೆ. ಈ ರೈಲನ್ನು ಮೈಸೂರಿಗೆ ನೀಡುವಂತೆ ಅಷ್ಟು ವರ್ಷಗಳಿಂದಲೂ ಪ್ರಯಾಣಿಕರು ಕೋರುತ್ತಿದ್ದರು. ಆ ಮನವಿಗೆ ಈಗ ಹಸಿರುನಿಶಾನೆ ಸಿಕ್ಕಿದೆ. ಇದರಿಂದ ಹೈದರಾಬಾದಿಗೆ ತೆರಳಲು ಬಸ್ಸನ್ನೇ ಆಶ್ರಯಿಸಿದ್ದ ಮೈಸೂರಿನ ಪ್ರಯಾಣಿಕರು ಸಂತಸಪಡುವಂತಾಗಿದೆ.

ಮೈಸೂರಿನ ಅಶೋಕಪುರಂ ರೈಲು ನಿಲ್ದಾಣಕ್ಕೂ ಇದರಿಂದ ಮತ್ತೊಂದು ರೈಲು ಸಿಕ್ಕಂತಾಗಿರುವುದು ವಿಶೇಷ. ಇಲ್ಲಿಂದ ಹೊರಡುವ ವಿಶ್ವಮಾನವ ಎಕ್ಸ್‌ಪ್ರೆಸ್‌ ರೈಲು ಬೆಂಗಳೂರು ಮೂಲಕ ಹುಬ್ಬಳ್ಳಿಗೆ ಹೋಗಿ, ವಾಪಸಾಗುತ್ತಿತ್ತು. ಇದೀಗ ಇಲ್ಲಿಂದ ಹೈದರಾಬಾದಿಗೂ ಸಂಚರಿಸುವ ಅವಕಾಶ ಸಿಕ್ಕಿದೆ.

Kacheguda - Bangalore Express has been extended to Mysuru

ಕಾಚಿಗುಡ ಎಕ್ಸ್‌ಪ್ರೆಸ್‌ ಅಶೋಕಪುರಂ ರೈಲು ನಿಲ್ದಾಣದಿಂದ ಮಧ್ಯಾಹ್ನ 2.05ಕ್ಕೆ ಹೊರಡಲಿದೆ. ಮೈಸೂರು ನಿಲ್ದಾಣದಿಂದ ಮಧ್ಯಾಹ್ನ 2.45ಕ್ಕೆ ಹೊರಟು, ಸಂಜೆ 5.45ಕ್ಕೆ ಬೆಂಗಳೂರು ಸೇರಲಿದೆ. ಬೆಳಗಿನ ಜಾವ 5.40ಕ್ಕೆ ಹೈದರಾಬಾದ್‌ ಸೇರಲಿದೆ.

ಹೈದರಾಬಾದಿನಿಂದ ರಾತ್ರಿ 7.05ಕ್ಕೆ ಹೊರಟು, ಬೆಳಗ್ಗೆ 6.25ಕ್ಕೆ ಬೆಂಗಳೂರು ಸೇರಲಿದೆ. ಬೆಳಗ್ಗೆ 6.40ಕ್ಕೆ ಬೆಂಗಳೂರಿನಿಂದ ಹೊರಟು, ಮೈಸೂರು ನಿಲ್ದಾಣಕ್ಕೆ ಬೆಳಗ್ಗೆ 9.40ಕ್ಕೆ ಸೇರಲಿದೆ. ಬೆಳಗ್ಗೆ 10.05ಕ್ಕೆ ಅಶೋಕಪುರಂ ನಿಲ್ದಾಣ ತಲುಪಲಿದೆ.

ಅಶೋಕಪುರಂ ನಿಲ್ದಾಣದಿಂದ ಹಾಲಿ ಸಂಚರಿಸುತ್ತಿರುವ ವಿಶ್ವಮಾನವ ಎಕ್ಸ್‌ಪ್ರೆಸ್‌ ರೈಲು ಕತ್ತಲಿನಲ್ಲೇ ಸಂಚರಿಸುತ್ತಿದೆ. ಅಶೋಕಪುರಂ ನಿಲ್ದಾಣ ಸಂಪರ್ಕಿಸುವ ರಸ್ತೆಯಲ್ಲಿ ದೀಪದ ವ್ಯವಸ್ಥೆ ಇರದಿದ್ದ ಕಾರಣ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಹೊಸ ರೈಲು ಹಗಲಿನ ವೇಳೆ ಸಂಚರಿಸುವ ಕಾರಣ, ಪ್ರಯಾಣಿಕರು ಕೊಂಚ ನಿರಾಳರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+