ಹುಣಸೂರು ಉಪ ಚುನಾವಣೆ, ದೇವೇಗೌಡರು ಮಾಡಿದ ಶಪಥವೇನು?

ಮೈಸೂರು, ಸೆಪ್ಟೆಂಬರ್ 03 : ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಹುಣಸೂರು ಕ್ಷೇತ್ರದತ್ತ ಗಮನಹರಿಸಿದ್ದಾರೆ. ಉಪ ಚುನಾವಣೆ ನಡೆದರೆ ಎಚ್. ವಿಶ್ವನಾಥ್‌ಗೆ ತಕ್ಕಪಾಠ ಕಲಿಸಲು ತಂತ್ರ ರೂಪಿಸಿದ್ದಾರೆ.

ಉಪ ಚುನಾವಣೆ ಸಿದ್ಧತೆಯನ್ನು ದೇವೇಗೌಡರು ಆರಂಭಿಸಿದ್ದಾರೆ. ಬುಧವಾರ ಹುಣಸೂರು ಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆಯನ್ನು ಕರೆದಿದ್ದು, ಅಭ್ಯರ್ಥಿಯಾರಾಗಬೇಕು? ಎಂದು ಚರ್ಚೆ ನಡೆಸಲಿದ್ದಾರೆ. ಎಚ್. ವಿಶ್ವನಾಥ್ ಕಟ್ಟಿ ಹಾಕಬೇಕು ಎಂದು ಗೌಡರು ಶಪಥ ಮಾಡಿದ್ದಾರೆ.

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನವನ್ನು ಕೊಟ್ಟರೂ ವಿಶ್ವನಾಥ್ ಪಕ್ಷಕ್ಕೆ ನಿಷ್ಠರಾಗಿ ಉಳಿಯಲಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾದರು. ಪಕ್ಷ ನೀಡಿದ ದೂರಿನ ಅನ್ವಯ ಸ್ಪೀಕರ್ ವಿಶ್ವನಾಥ್‌ರನ್ನು ಅನರ್ಹಗೊಳಿಸಿದ್ದಾರೆ.

ಎಚ್. ವಿಶ್ವನಾಥ್ ಬಿಜೆಪಿ ಸೇರುವ ಬಗ್ಗೆ ಇನ್ನೂ ಅಧಿಕೃತವಾದ ಹೇಳಿಕೆ ಕೊಟ್ಟಿಲ್ಲ. ಜೆಡಿಎಸ್‌ನಿಂದ ಅವರನ್ನು ಈಗಾಗಲೇ ಉಚ್ಚಾಟನೆ ಮಾಡಲಾಗಿದೆ. ಈಗ ಹುಣಸೂರು ಕ್ಷೇತ್ರದ ಉಪ ಚುನಾವಣೆ ನಡೆದರೆ ಕದನ ಕುತೂಹಲಕ್ಕೆ ಕಾರಣವಾಗಲಿದೆ.

ಎಚ್. ವಿಶ್ವನಾಥ್‌ಗೆ ಪಾಠ ಕಲಿಸಬೇಕು

ಎಚ್. ವಿಶ್ವನಾಥ್‌ಗೆ ಪಾಠ ಕಲಿಸಬೇಕು

ಎಚ್. ವಿಶ್ವನಾಥ್ ಹುಣಸೂರು ಕ್ಷೇತ್ರದಲ್ಲಿ ಉಪ ಚುನಾವಣೆಗೆ ನಿಂತರೂ ಗೆಲ್ಲಬಾರದು ಎಂಬುದು ಎಚ್. ಡಿ. ದೇವೇಗೌಡರ ಹಠವಾಗಿದೆ. ಆದ್ದರಿಂದ, ಖುದ್ದಾಗಿ ತಾವೇ ಉಪ ಚುನಾವಣೆ ಅಭ್ಯರ್ಥಿಯಾರಾಗಬೇಕು? ಎಂದು ತೀರ್ಮಾನ ಕೈಗೊಳ್ಳಲಿದ್ದಾರೆ. ಆದ್ದರಿಂದ, ಹುಣಸೂರಿನಲ್ಲಿ ಬುಧವಾರ ಸಭೆ ಕರೆದಿದ್ದಾರೆ.

ಯಾರಾಗಬಹುದು ಅಭ್ಯರ್ಥಿ?

ಯಾರಾಗಬಹುದು ಅಭ್ಯರ್ಥಿ?

ಹುಣಸೂರು ಕ್ಷೇತ್ರದಲ್ಲಿ ಉಪ ಚುನಾವಣೆ ನಡೆದರೆ ಜೆಡಿಎಸ್ ಅಭ್ಯರ್ಥಿಯಾರಾಗಲಿದ್ದಾರೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಜಿ. ಟಿ. ದೇವೇಗೌಡ ಪುತ್ರ ಹರೀಶ್ ಗೌಡ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. ಆದರೆ, ದೇವೇಗೌಡರು ಹೊಸ ಮುಖ ಹುಡುಕಲು ಮುಂದಾಗಿದ್ದಾರೆ. ವಿಶ್ವನಾಥ್ ಎದುರಾಳಿ ಯಾರು? ಎಂಬುದು ಇನ್ನೂ ಅಂತಿಮವಾಗಿಲ್ಲ.

ಮೋದಿ ಹೊಗಳುವ ಜಿಡಿಟಿ

ಮೋದಿ ಹೊಗಳುವ ಜಿಡಿಟಿ

ಮಾಜಿ ಸಚಿವ ಜಿ. ಟಿ. ದೇವೇಗೌಡರು ಮೈತ್ರಿ ಸರ್ಕಾರ ಪತನವಾದ ಬಳಿಕ ಪಕ್ಷದ ಚಟುವಟಿಕೆಯಿಂದ ದೂರವಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯನ್ನು ಹಾಡಿ ಹೊಗಳುತ್ತಾ ಪಕ್ಷದ ನಾಯಕರಿಗೆ ಮುಜುಗರ ಉಂಟು ಮಾಡುತ್ತಿದ್ದಾರೆ. ಆದ್ದರಿಂದ, ದೇವೇಗೌಡರ ಪುತ್ರನಿಗೆ ಟಿಕೆಟ್ ನೀಡಲು ಎಚ್. ಡಿ. ದೇವೇಗೌಡರು ಇನ್ನೂ ಒಪ್ಪಿಗೆ ಕೊಟ್ಟಿಲ್ಲ.

ವಿಶ್ವನಾಥ್ ಸೋಲಿಸುವುದು ಸುಲಭವೇ?

ವಿಶ್ವನಾಥ್ ಸೋಲಿಸುವುದು ಸುಲಭವೇ?

2018ರ ಚುನಾವಣೆಯಲ್ಲಿ ಎಚ್. ವಿಶ್ವನಾಥ್ ಹುಣಸೂರಿನಲ್ಲಿ ಗೆದ್ದಿದ್ದರು. ಈಗ ಅವರು ಉಪ ಚುನಾವಣೆಗೆ ಬಿಜೆಪಿಯಿಂದ ಕಣಕ್ಕಿಳಿದರೆ ಅವರನ್ನು ಸೋಲಿಸುವುದು ಅಷ್ಟು ಸುಲಭವಲ್ಲ. ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಜೆಡಿಎಸ್ ಕ್ಷೇತ್ರ ಉಳಿಸಿಕೊಳ್ಳಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+