ಮೈಸೂರಿನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೆಚ್ಚಿದ ಫ್ಲೈ ಬಸ್ ವ್ಯವಸ್ಥೆ

ಮೈಸೂರು, ಫೆಬ್ರವರಿ 22: ದಿನನಿತ್ಯ ಮೈಸೂರಿನಿಂದ ಬೆಂಗಳೂರಿಗೆ ವಿಮಾನದಲ್ಲಿ ತೆರಳುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದಕ್ಕೆ ಪೂರಕವೆಂಬಂತೆ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ಸಂಪರ್ಕ ಬೆಸೆಯುವ ಫ್ಲೈ ಬಸ್‌ ಸೇವೆಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸೇವೆಯನ್ನು ವಿಸ್ತರಿಸಲಾಗಿದೆ.

ವಿಮಾನ ನಿಲ್ದಾಣದಿಂದ ಮಡಿಕೇರಿಗೆ ಸಂಚರಿಸುವ 2 ಫ್ಲೈ ಬಸ್‌ಗಳು ಮೈಸೂರಿನ ಇನ್ಫೊಸಿಸ್ ಕ್ಯಾಂಪಸ್ ಬಳಿ ಹಾದು ಹೋಗಲಿವೆ. ಹೊಸದಾಗಿ ಇಲ್ಲಿ ಪಿಕ್ ಅಪ್‌ ವ್ಯವಸ್ಥೆ ಕಲ್ಪಿಸಿರುವುದರಿಂದ ಸುತ್ತಮುತ್ತಲಿನ ವಿವಿಧ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಅನುಕೂಲವಾಗಿದೆ.

ಈ ಬಸ್‌ಗಳು ಈ ಹಿಂದೆ ಬೇರೆ ಮಾರ್ಗದಲ್ಲಿ ಸಂಚರಿಸುತ್ತಿದ್ದವು. ಈಗಾಗಲೇ ಸಬ್‌ಅರ್ಬನ್‌ ನಿಲ್ದಾಣದಿಂದ 9 ಬಸ್‌ಗಳು 21 ಟ್ರಿಪ್‌ಗಳಲ್ಲಿ ವಿಮಾನ ನಿಲ್ದಾಣಕ್ಕೆ ಸೇವೆ ಒದಗಿಸುತ್ತಿವೆ. ಇದರೊಂದಿಗೆ ಮೈಸೂರಿಗೆ 11 ಫ್ಲೈ ಬಸ್‌ಗಳು ದೊರೆತಂತಾಗಿದೆ.

Increased fly buses number from Mysuru to Kempegowda international Airport

ಖಾಸಗಿ ವಾಹನಗಳಲ್ಲಿ ಕನಿಷ್ಠ 3 ಸಾವಿರ ನೀಡಿ ಪ್ರಯಾಣಿಸಬೇಕಿದ್ದ ಪ್ರಯಾಣಿಕರು ಸುರಕ್ಷತೆ ಹಾಗೂ ಮಿತವ್ಯಯದ ದೃಷ್ಟಿಯಿಂದ ಹೆಚ್ಚು ಫ್ಲೈ ಬಸ್‌ನತ್ತ ವಾಲುತ್ತಿದ್ದಾರೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಈ ಸೇವೆ ಕಲ್ಪಿಸಲಾಗುತ್ತಿದೆ.

ಮೈಸೂರು ಸಬ್‌ಅರ್ಬನ್‌ ಬಸ್‌ ನಿಲ್ದಾಣದಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಿಕೆಟ್ ದರ 800 ರೂ ಇದೆ.

ವಿಮಾನ ನಿಲ್ದಾಣದಿಂದ ಮೈಸೂರಿಗೆ 9 ಬಸ್‌, ಮಡಿಕೇರಿಗೆ ಎರಡು ಬಸ್‌, ಕುಂದಾಪುರ, ಮಣಿಪಾಲಕ್ಕೆ ತಲಾ ಒಂದು ಬಸ್‌ ಕಾರ್ಯಾಚರಣೆಯಲ್ಲಿ ತೊಡಗಿವೆ. ಅಲ್ಲದೇ, ಸೇಲಂ, ತಿರುಪತಿ, ಕೊಯಮತ್ತೂರು ಸೇರಿದಂತೆ ಹೊರರಾಜ್ಯದ ವಿವಿಧ ಪ್ರದೇಶಗಳಿಗೆ ಫ್ಲೈ ಬಸ್‌ ವ್ಯವಸ್ಥೆ ಕಲ್ಪಿಸಲಾಗಿದೆ.

ಐಷಾರಾಮಿ ವ್ಯವಸ್ಥೆಯ ಈ ಬಸ್‌ಗಳು 2+1 ಸೀಟ್‌ಗಳನ್ನು ಹೊಂದಿವೆ. ಅತ್ಯಾಧುನಿಕ ಶೌಚಾಲಯ, ವಿಮಾನದ ಬಗ್ಗೆ ಮಾಹಿತಿ ನೀಡುವ ಡಿಜಿಟಲ್ ಡಿಸ್‌ಪ್ಲೇ ಬೋರ್ಡ್‌, ಟಿ.ವಿ ಮುಂತಾದ ಸೌಲಭ್ಯಗಳನ್ನು ಒಳಗೊಂಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+