ನಮ್ಮಪ್ಪ ನನಗೆ 'ಗೌಡ' ಎಂದು ಹೆಸರಿಟ್ಟಿದ್ದೇ ತಪ್ಪಾ: ದೇವೇಗೌಡ ಪ್ರಶ್ನೆ
Recommended Video

ಮೈಸೂರು, ಏಪ್ರಿಲ್ 29: ದೇವೇಗೌಡರು ಕೇವಲ ಗೌಡ ಸಮುದಾಯದ ಪರ ಎಂಬ ಟೀಕೆಗೆ ಬೇಸರಗೊಂಡ ಜನತಾದಳ ರಾಷ್ಟ್ರಾಧ್ಯಕ್ಷ ದೇವೇಗೌಡ ಅವರು 'ನಮ್ಮಪ್ಪ ನನಗೆ 'ಗೌಡ' ಎಂದು ಹೆಸರಿಟ್ಟಿದ್ದು ತಪ್ಪಾ? ನಾನು ಯಾರಿಗೆ ಮೋಸ ಮಾಡಿದ್ದೀನಿ? ಎಂದರು.
ಮೈಸೂರಿನಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ನಾನು ಯಾವ ಪಾಪವನ್ನೂ ಮಾಡಿಲ್ಲ. ಆದರೆ, ನನ್ನ ಬೆನ್ನಿಗೆ ಚೂರಿ ಹಾಕುವವರ ಸಂಖ್ಯೆ ಹೆಚ್ಚಿದೆ. ನಮ್ಮಪ್ಪ ನನಗೆ ಗೌಡ ಎಂದು ಹೆಸರಿಟ್ಟರು. ಯಾವ ವರ್ಗಕ್ಕೆ ಮೋಸ ಮಾಡಿದ್ದೇನೆ ಹೇಳಿ' ಎಂದು ಪ್ರಶ್ನಿಸಿದರು.

ನಾನು ಯಾರನ್ನು ಮೆಚ್ಚಿ ಬೆನ್ನುತಟ್ಟುತ್ತೇನೊ ಅವರೇ ನನಗೆ ದ್ರೋಹ ಮಾಡುತ್ತಾರೆ ಎಂದ ಅವರು ಸಿದ್ದರಾಮಯ್ಯ ಅದ್ಬುತ ನಾಯಕ ಎಂದು ಹೇಳಿದ್ದೆ ಆದರೆ ಅವರೇ ನನಗೆ ಮೋಸ ಮಾಡಿದರು. ಹಲವಾರು ಅಂಹಿಂದ ನಾಯಕರನ್ನು ನಾನು ಬೆಳೆಸಿದ್ದೇನೆ ಎಂದರು.
ಕುಮಾರಸ್ವಾಮಿ ವರ್ಚಸ್ಸಿನಿಂದ ಕಾಂಗ್ರೆಸ್ ಮುಖಂಡರು ಹತಾಶರಾಗಿದ್ದಾರೆ. ಹೀಗಾಗಿ, ಜೆಡಿಎಸ್‌ನವರು ಮುಸ್ಲಿಂ ವಿರೋಧಿಗಳು, ದಲಿತ ವಿರೋಧಿಗಳು ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅಧಿಕಾರ ವ್ಯಾಮೋಹಿ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುವ ಭಯದಿಂದ ಬಾದಾಮಿಗೆ ಹೋಗಿದ್ದಾರೆ' ಎಂದು ಅವರು ಟೀಕಿಸಿದರು.
ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಗಿಂತಲೂ ಜೆಡಿಎಸ್‌ಗೆ ಅಧಿಕ ಸೀಟುಗಳು ಬರುತ್ತವೆ ಎಂದ ದೇವೇಗೌಡ ಅವರು, ತಿರುಕನ ಎಂದುಕೊಂಡರೂ ಪರವಾಗಿಲ್ಲ ಆದರೆ ನಮ್ಮ ಪಕ್ಷ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತದೆ, ಜೆಡಿಎಸ್‌ಗೆ 35-40 ಸೀಟು ಬರುತ್ತದೆ ಎನ್ನುವ ನಾಲ್ಕಾಣೆ ಏಜೆನ್ಸಿಗಳ ಸಮೀಕ್ಷೆ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಎಂದರು.












Click it and Unblock the Notifications