ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನನಗೆ ರೌಡಿಗಳ ಅವಶ್ಯಕತೆ ಇಲ್ಲ: ಮೈಸೂರಿನಲ್ಲಿ ಸಂಸದ ಪ್ರತಾಪ್‌ ಸಿಂಹ ಸ್ಪಷ್ಟನೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಡಿಸೆಂಬರ್‌, 06: ಸಾವಿರಾರು ಜನ ಬಿಜೆಪಿ ಪಕ್ಷ ಸೇರ್ಪಡೆಯಾಗುತ್ತಾರೆ. ಅವರೆಲ್ಲರ ಜಾತಕ, ಕುಂಡಲಿ ನೋಡಿಕೊಂಡು, ಅವರು ಹಿಂದೆ ಏನಾಗಿದ್ದರು, ಈಗ ಏನು ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳಲು ಸಾಧ್ಯವಿಲ್ಲ ಎಂದು ಸಂಸದ ಪ್ರತಾಪಸಿಂಹ ಮೈಸೂರಿನಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಹಾಗೆಯೇ ರೌಡಿ ಬೆತ್ತನಗೆರೆ ಶಂಕರನನ್ನು ಪಕ್ಷಕ್ಕೆ ಸಂಸದರು ಬರಮಾಡಿಕೊಂಡಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಜನರೊಂದಿಗೆ ಅಭಿವೃದ್ಧಿ ರಾಜಕಾರಣ ಮಾಡುವ ನನಗೆ ಯಾವ ರೌಡಿಗಳ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಪಕ್ಷ ಸೇರ್ಪಡೆ ಆಗುವಾಗ ಬೆತ್ತನಗೆರೆ ಶಂಕರ ಇದ್ದದ್ದು ನನಗೆ ತಿಳಿದಿರಲಿಲ್ಲ ಎಂದರು.

ಆದಿಚುಂಚನಗಿರಿ ಶ್ರೀಗಳನ್ನು ಸಿಎಂ ಮಾಡಲು ಪ್ಲಾನ್‌: ಮೈಸೂರಿನಲ್ಲಿ ಚಂದ್ರಗುರು ಆರೋಪಆದಿಚುಂಚನಗಿರಿ ಶ್ರೀಗಳನ್ನು ಸಿಎಂ ಮಾಡಲು ಪ್ಲಾನ್‌: ಮೈಸೂರಿನಲ್ಲಿ ಚಂದ್ರಗುರು ಆರೋಪ

ನನ್ನದು ಅಭಿವೃದ್ಧಿ ರಾಜಕಾರಣ
ಎಚ್.ಡಿ.ಕೋಟೆ ನಮ್ಮ ಲೋಕಸಭಾ ಕ್ಷೇತ್ರ ವ್ಯಾಪ್ತಿಗೂ ಬರುವುದಿಲ್ಲ. ಆದರೂ ಪಕ್ಷದ ನಾಯಕ ಅಪ್ಪಣ್ಣ ಅವರು ಆಹ್ವಾನಿಸಿದರು ಎಂಬ ಕಾರಣಕ್ಕೆ ಪಕ್ಷ ಸೇರಿದವರಿಗೆ ಶಾಲು ಹಾಕಿದ್ದೇನೆ. 9 ವರ್ಷದಿಂದ ರಾಜಕೀಯದಲ್ಲಿ ನನಗೆ ರೌಡಿಗಳ ಸಂಪರ್ಕ ಅವಶ್ಯಕತೆ ಇಲ್ಲ. ನನ್ನದು ಏನಿದ್ದರೂ ಅಭಿವೃದ್ಧಿ ರಾಜಕಾರಣ ಆಗಿದೆ. ಯಾವ ರಿಯಲ್ ಎಸ್ಟೇಟ್ ಕೂಡ ಅವಶ್ಯಕತೆ ಇಲ್ಲ. ರೌಡಿಶೀಟರ್ ಹಾಗೂ ರೌಡಿಗಳ ಸಂಪರ್ಕ ಮಾಡಿ ಜನರನ್ನು ಹೆದರಿಸಬೇಕಾದ ಅನಿವಾರ್ಯವೂ ನನಗಿಲ್ಲ ಎಂದರು.

I dont need Rowdies: Pratap Simha clarification in Mysuru

ಭಯೋತ್ಪಾದನೆ ಚಟುವಟಿಕೆ ಕಡಿಮೆ ಆಗಿದೆ
ನರೇಂದ್ರ ಮೋದಿ ಪ್ರಧಾನಿ ಆದ ಮೇಲೆ ದೇಶದ ಎ್ಲಲಾ ಭಾಗಗಳಲ್ಲಿ ನಡೆಯುತ್ತಿದ್ದ ಭಯೋತ್ಪಾದನೆ ಚಟುವಟಿಕೆ ಕಡಿಮೆ ಆಗಿದೆ. ಮೋದಿ ಅವರು ಪ್ರತ್ಯೇಕತಾವಾದಿಗಳು ಹಾಗೂ ಭಯೋತ್ಪಾದಕರನ್ನೇ ಬಿಟ್ಟಿಲ್ಲ. ಇನ್ನು ರೌಡಿಗಳನ್ನು ಬಿಡುತ್ತಾರಾ? ರೌಡಿಗಳು ಮನಃ ಪರಿವರ್ತನೆಯಾಗಿ ಬಿಜೆಪಿ ಪಕ್ಷಕ್ಕೆ ಬರುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಎಂದರು.ಕೊತ್ವಾಲ್ ರಾಮಚಂದ್ರ, ಜಯರಾಜ್, ಬೆಕ್ಕಿನ ಕಣ್ಣಿನ ರಾಜೇಂದ್ರನಂತಹವರನ್ನು ಇಟ್ಟುಕೊಂಡು ರಾಜಕೀಯ ಮಾಡಿದವರು ನಮಗೆ ಪಾಠ ಹೇಳಿಕೊಡುವ ಅವಶ್ಯಕತೆ ಇಲ್ಲ ತಿರುಗೇಟು ನೀಡಿದರು.

I dont need Rowdies: Pratap Simha clarification in Mysuru

ಸಾರ್ವಜನಿಕ ವಲಯಗಳ ಖಾಸಗೀಕರಣ
ಸಂಸದರಾದ ಪ್ರತಾಪ್ ಸಿಂಹ ಮತ್ತು ತೇಜಸ್ವಿ ಸೂರ್ಯ ಸಂವಿಧಾನವನ್ನು ಬದಲಾವಣೆ ಮಾಡುವುದಕ್ಕೆ ನಾವು ಬಂದಿರೋದು ಅಂದಿದ್ದಾರೆ. ಅದನ್ನು ಬದಲಾವಣೆ ಮಾಡಲು ಸಾಧ್ಯವೇ? ಈ ದೇಶದ ಸಂವಿಧಾನವನ್ನು ಯಾರೂ ಬದಲಾವಣೆ ಮಾಡುವುದಕ್ಕೆ ಸಾಧ್ಯವಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಸಂವಿಧಾನವನ್ನು ಪರೋಕ್ಷವಾಗಿ ದುರ್ಬಲಗೊಳಿಸುವುದಕ್ಕೆ ಕೈ ಹಾಕಿದ್ದಾರೆ ಎಂದು ಪ್ರಗತಿಪರ ಚಿಂತಕ ಪ್ರೊ.ಮಹೇಶ್ ಚಂದ್ರಗುರು ಮೈಸೂರಿನಲ್ಲಿ ಆರೋಪಿಸಿದರು. ಸಾರ್ವಜನಿಕ ವಲಯಗಳನ್ನು ಖಾಸಗೀಕರಣ ಮಾಡುವ ಮೂಲಕ ಸಂವಿಧಾನಾತ್ಮಕ ಹಕ್ಕು ಬಾಧ್ಯತೆಗಳನ್ನು ಕಿತ್ತುಕೊಳ್ಳುತ್ತಿದ್ದಾರೆ. ಮೂಲ ಸಂವಿಧಾನವನ್ನು ಯಾರಿಂದಲೂ ಬದಲಾವಣೆ ಮಾಡಲು ಸಾಧ್ಯವಿಲ್ಲ. ಎಷ್ಟೇ ಪ್ರಚಂಡ ಬಹುಮತ ಪಡೆದು ಏನೇ ಪ್ರಯತ್ನ ಮಾಡಿದರೂ ಕೂಡ ಸಂವಿಧಾನದ ಬುಡವನ್ನು ಅಲ್ಲಾಡಿಸಲು ಆಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

English summary
MP Pratap Simha Said in Mysur, I don't need Rowdies, No contact with rowdies in 9 years politics, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X