ಟಿಕ್‌ ಟಾಕ್ ಮಾಡಿ ಅಣಕಿಸಿದ್ದಕ್ಕೆ ಹೆಂಡತಿಗೆ ಚಾಕು ಹಾಕಿದ ಗಂಡ

ಮೈಸೂರು, ಜನವರಿ 31: ಪ್ರತಿದಿನ ಟಿಕ್ ಟಾಕ್ ಮಾಡಿ ತನ್ನನ್ನು ಹೀಯಾಳಿಸುತ್ತಿದ್ದಳು ಎಂದು ಗಂಡನೊಬ್ಬ ತನ್ನ ಹೆಂಡತಿಗೆ ಚಾಕುವಿನಿಂದ ಇರಿದಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ಶ್ರೀನಿವಾಸ್ ಎಂಬಾತ 10 ವರ್ಷಗಳ ಹಿಂದೆ ಸವಿತಾ ಎಂಬುವವರನ್ನು ಮದುವೆಯಾಗಿದ್ದ. ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಆಗಾಗ ಇವರ ಮಧ್ಯೆ ಜಗಳ ನಡೆಯುತ್ತಿದ್ದುದಾಗಿ ತಿಳಿದುಬಂದಿದೆ. ಇವರಿಬ್ಬರ ಮಧ್ಯೆ ಮತ್ತೆ ಜಗಳವಾಗಿದ್ದು, ಕೋಪಗೊಂಡ ಶ್ರೀನಿವಾಸ್​ ತನ್ನ ಪತ್ನಿ ಸವಿತಾ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾನೆ. ಪರಿಣಾಮ ಸವಿತಾ ಸ್ಥಳದಲ್ಲೇ ಕುಸಿದು ಬಿದ್ದಿದ್ದಾಳೆ. ಇನ್ನು ಶ್ರೀನಿವಾಸ್​, ನನ್ನ ಹೆಂಡ್ತಿಯನ್ನು ನಾನೇ ಚಾಕುವಿನಿಂದ ಇರಿದಿದ್ದೇನೆ ಎಂದು ಪೊಲೀಸರಿಗೆ ಶರಣಾಗಿದ್ದಾನೆ.

Husband Stab Wife For Mocking Him Through Tiktok In Piriyapatna

ನನ್ನನ್ನು ಮತ್ತು ಮಕ್ಕಳನ್ನು ದೂರ ಮಾಡಿ ಬೇರೊಬ್ಬರೊಂದಿಗೆ ಸವಿತಾ ಜೀವನ ನಡೆಸುತ್ತಿದ್ದಳು. ಪ್ರತಿದಿನ ಟಿಕ್ ಟಾಕ್ ಮಾಡಿ ನನ್ನನ್ನು ಹೀಯಾಳಿಸುತ್ತಿದ್ದಳು. ಮಕ್ಕಳ ಹುಟ್ಟುಹಬ್ಬಕ್ಕೆ ಮನೆಗೆ ಬಂದಿದ್ದಾಗ ನಾನು ಈ ಕೃತ್ಯ ಎಸಗಿದ್ದೇನೆ ಎಂದು ಆರೋಪಿ ಶ್ರೀನಿವಾಸ್​ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಸವಿತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+