ಮೈಸೂರಿನಲ್ಲಿ ಹೊಂಡಾದಿಂದ ವಾಹನಗಳಿಗೆ ಉಚಿತ ಸರ್ವೀಸ್!

ಮೈಸೂರು, ನವೆಂಬರ್ 17 : ಮೋಟಾರು ವಾಹನ ತಯಾರಿಕಾ ಸಂಸ್ಥೆಯಾದ ಹೊಂಡಾದ ಸಂಸ್ಥಾಪಕರ ಜನ್ಮದಿನದ ನೆನಪಿಗಾಗಿ ಶನಿವಾರ (ನ.೧೮) ಮೈಸೂರಿನಲ್ಲಿ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದೆ.
ಜಪಾನ್ ದೇಶದ ಸೋಹಿಚಿರೋ ಹೊಂಡಾ (Soichiro Honda) ಅವರ ಜನ್ಮದಿನ ನ.17.

ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಅವರ ಜನ್ಮದಿನ ಆಚರಣೆಗೆ ಮುಂದಾಗಿದ್ದಾರೆ. ಕಲ್ಯಾಣಗಿರಿಯ ಡಾ.ರಾಜ್ ಕುಮಾರ್ ರಸ್ತೆಯಲ್ಲಿರುವ ಯಶ್ ಮೋಟಾರ್ಸ್ ವತಿಯಿಂದ ಶನಿವಾರ ನ.೧೮ರಂದು ಬೆಳಗ್ಗೆ 11.30ಕ್ಕೆ ಹೊಂಡಾ ಅವರ ಜನ್ಮದಿನ ಅಚರಿಸಲಾಗುತ್ತಿದೆ. ಈ ಸಲುವಾಗಿ ಹೊಂಡಾ ಸಂಸ್ಥೆಯ ಯಾವುದೇ ದ್ವಿಚಕ್ರ ವಾಹನವಾದರೂ ಸರಿ ಉಚಿತವಾಗಿ ಸರ್ವೀಸ್ ಮಾಡಿಕೊಡಲಾಗುತ್ತದೆ ಎಂದು ಯಶ್ ಮೋಟಾರ್ಸ್ ನ ಮಾಲೀಕ ಶ್ರೀನಿವಾಸ ರಾವ್ ತಿಳಿಸಿದ್ದಾರೆ.

Honda Founder's Day - Free Service For Any Vehicle In Mysuru

ಹೊಂಡಾ ಸಂಸ್ಥೆ ಅಸ್ಥಿತ್ವದಿಂದ ಇಂದು ಲಕ್ಷಾಂತರ ಮಂದಿ ಉದ್ಯೋಗ ಕಂಡುಕೊಂಡಿದ್ದಾರೆ. ಆ ಮೂಲಕ ನೆಮ್ಮದಿಯಿಂದ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಆದ್ದರಿಂದ ಅವರನ್ನು ಸ್ಮರಿಸಿಕೊಳ್ಳುವುದು ನಮ್ಮ ಜವಾಬ್ದಾರಿ. ಆದ್ದರಿಂದಲೇ ನಾಳೆ ಅವರ ಜನ್ಮದಿನ ಆಚರಿಸುತ್ತಿದ್ದೇವೆ. ಈ ನೆಪದಲ್ಲಿ ವಾಹನಗಳನ್ನು ಉಚಿತವಾಗಿ ಸರ್ವೀಸ್ ಮಾಡುತ್ತಿದ್ದೇವೆ. ಜತೆಗೆ ಬಿಪಿ ತಪಾಸಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಸಸಿಗಳನ್ನು ಸಹ ನೆಡಲಾಗುತ್ತಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+