ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಗಲಿದ ಒಡೆಯನಿಗೆ ಕಂಬನಿ ಮಿಡಿದ ಸೇವಕರು

|
Google Oneindia Kannada News

ಮೈಸೂರು, ಡಿ. 11 : "ನಮ್ಮ ಮನೆಯ ಮತ್ತು ಅರಮನೆಯ ನಂದಾ ದೀಪ ಆರಿ ಹೋಗಿದೆ" ಎಂದು ಅರಮನೆಯಲ್ಲಿ ಕಾರ್ಯ ನಿರ್ವಹಿಸುವ 300ಕ್ಕೂ ಅಧಿಕ ಸೇವಕರು ಮತ್ತು ಸಿಬ್ಬಂದಿ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಮಂಗಳವಾರ ಮಧ್ಯಾಹ್ನ ಒಡೆಯರ್ ನಿಧನದ ಸುದ್ದಿ ತಿಳಿದ ತಕ್ಷಣದಿಂದಲೇ ಅರಮನೆಯಲ್ಲಿ ನೀರವ ಮೌನ ಆವರಿಸಿದ, ಕೆಲಸಗಾರರು ಒಡೆಯನನ್ನು ಕಳೆದುಕೊಂಡ ದುಖಃದಲ್ಲಿ ಮುಳುಗಿ ಹೋಗಿದ್ದಾರೆ.

ನಮ್ಮ ಮನೆಯ ದೀಪ ಬೆಳಗಿದ ಒಡೆಯರು ಇಂದು ನಮ್ಮೊಂದಿಗಿಲ್ಲ ಎಂಬ ಸುದ್ದಿ ಆಘಾತವನ್ನು ಉಂಟು ಮಾಡಿದೆ. ಹಲವಾರು ವರ್ಷಗಳಿಂದ ಅವರ ಮತ್ತು ಅರಮನೆಯ ಕೆಲಸ ಮಾಡುತ್ತಿದ್ದೇವೆ ಎಂದು ಕಣ್ಣಿನಲ್ಲಿ ನೀರು ತುಂಬಿಕೊಂಡರು ಮುಜಾಹೀದ್ದಿನ್. 30 ವರ್ಷಗಳಿಂದ ಅರಮನೆಯಲ್ಲಿ ದುಡಿಯುತ್ತಿದ್ದ ರಾಮ ನಾಯಕ್. ತಾತ ಮುತ್ತಾತರ ಕಾಲದಿಂದ ನಮ್ಮ ವಂಶ ಅರಮನೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ನಾವು ತಂದೆಯನ್ನೇ ಕಳೆದುಕೊಂಡ ದುಖಃದಲ್ಲಿದ್ದೇವೆ ಎಂದು ನೋವನ್ನು ಹಂಚಿಕೊಂಡರು. (ನೀರವ ಮೌನದಲ್ಲಿ ಮುಳುಗಿದ ಮೈಸೂರು)

palace

ಅರಮನೆಯಲ್ಲಿ ಒಡೆಯರು ಮತ್ತು ರಾಜಮನೆತನದವರು ನೀಡಿದ ಸೂಚನೆಗಳನ್ನು ತಪ್ಪದೇ ಪಾಲಿಸಿ, ರಾಜ ವೈಭವದ ಮೆರಗು ನೀಡುತ್ತಿದ್ದ ಅರಮನೆಯ ಸಿಬ್ಬಂದಿ ಈಗ ಅರಸನಿಲ್ಲದೇ ಅನಾಥಪ್ರಜ್ಞೆ ಅನುಭವಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಒಡೆಯರು ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಅರಮನೆ ತಲುಪುತ್ತಿದ್ದಂತೆ, ಅರಮನೆಯಲ್ಲಿ ಶೋಕ ಮಡುಗಟ್ಟಿತು. ಒಡೆಯರ್ ಅವರ ಮೃತದೇಹ ಅರಮನೆ ತಲುಪುವ ವರೆಗೂ ಸಿಬ್ಬಂದಿ ಅವರ ದರ್ಶನಕ್ಕಾಗಿ ಕಾದು ಕುಳಿತಿದ್ದರು.

ನಮ್ಮನ್ನು ಅವರು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಅವರಿಲ್ಲದ ಅರಮನೆಯನ್ನು ಕಲ್ಪಿಸಿಕೊಳ್ಳುವುದಾದದರೂ ಹೇಗೆ? ಎಂದು ಕೆಲಸಗಾರರು ನೋವಿನಿಂದ ನುಡಿದರು. ಅವರ ಸೇವೆ ಮಾಡುವುದೇ ನಮಗೆ ದೊರೆತ ಪುಣ್ಯವಾಗಿತ್ತು. ಸಮೀಪದಿಂದಲೇ ರಾಜರನ್ನು ನೋಡುವ ಭಾಗ್ಯ ನಮ್ಮದಾಗಿತ್ತು. ಆದರೆ ಇದೀಗ ಒಡೆಯರು ನಮ್ಮಿಂದ ದೂರವಾಗಿದ್ದಾರೆ ಎಂದು ಅರಮನೆ ಕೆಲಸಗಾರರು ಕಂಬನಿ ಮಿಡಿದಿದ್ದಾರೆ. (ಒಡೆಯರಿಗೆ ಚಿತ್ರ ನಮನ)

English summary
"The light has gone out" said Amba Vilas, Mysore Palace staffers. Last scion of Wodeyar dynasty, Srikanthadatta Narasimharaja Wodeyar passed away on 10 th Dec. He suffered massive heart attack. He was 60. Bereaved by wife Pramoda Devi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X