ಮೈಸೂರು:ಮಾನಸಿಕ ಅಸ್ವಸ್ಥನ ಮೇಲೆ ಕಾಮ ತೀಟೆ ತೀರಿಸಿಕೊಂಡವನ ಬಂಧನ
ಮೈಸೂರು, ಜುಲೈ 31 : ಮಾನಸಿಕ ಅಸ್ವಸ್ಥನೊಬ್ಬನ ಜತೆ ಸಲಿಂಗ ಕಾಮ ನಡೆಸಿ ತನ್ನ ವಿಕೃತ ಕಾಮ ತೀಟೆ ತೀರಿಸಿಕೊಂಡಿದ್ದವ ಇದೀಗ ಎಚ್.ಡಿ.ಕೋಟೆ ಪೊಲೀಸರ ಅತಿಥಿಯಾಗಿದ್ದಾನೆ.
ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ನಂಜಯ್ಯನ ಕಾಲೋನಿ ಗ್ರಾಮದ ಮಣಿ (26) ಬಂಧಿತ ಆರೋಪಿ. ಮಣಿ ಅದೇ ಗ್ರಾಮದ 28 ವರ್ಷದ ಮಾನಸಿಕ ಅಸ್ವಸ್ಥ ಕೂಲಿ ಕೆಲಸಕ್ಕೆ ಹೋದಾಗ ಆತನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದ.

ಘಟನೆ ನಡೆದು ಐದು ದಿನಗಳ ಬಳಿಕ ದೇವಪ್ಪ ನೋವಿನಿಂದ ಬಳಲುತ್ತಾ ತಾಯಿಗೆ ವಿಷಯ ತಿಳಿಸಿದ್ದಾನೆ. ವಿಷಯ ತಿಳಿದ ತಾಯಿ ಮಣಿ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನ ಅನ್ವಯ ಎಚ್.ಡಿ.ಕೋಟೆ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಮಣಿಯ ಪೈಶಾಚಿಕ ಕೃತ್ಯಕ್ಕೆ ಒಳಗಾದ ದೇವಪ್ಪನನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications