ತಿ.ನರಸೀಪುರದಲ್ಲಿ ನಿತ್ಯ ಅರ್ಧ ದಿನ ಸ್ವಯಂಪ್ರೇರಿತ ಲಾಕ್ ಡೌನ್
ಮೈಸೂರು, ಜುಲೈ 14: ಇಲ್ಲಿಗೆ ಸಮೀಪದ ತಿ.ನರಸೀಪುರ ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೊರೊನಾ ವೈರಾಣು ಹರಡದಂತೆ ತಡೆಯಲು ಜು.13ರಿಂದ ಪಟ್ಟಣದಲ್ಲಿ ಅರ್ಧ ದಿನ ಸ್ವಯಂಪ್ರೇರಣೆಯಿಂದ ಸಂಪೂರ್ಣ ಲಾಕ್‌ಡೌನ್ ಮಾಡಲು ಭಾನುವಾರ ನಡೆದ ನಾಗರಿಕ ಸೇವಾ ವೇದಿಕೆ ಹಾಗೂ ವರ್ತಕರ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.
ಪಟ್ಟಣದ ಎಂ.ಮಹದೇವಪ್ಪ ಸ್ಮಾರಕ ಭವನದಲ್ಲಿ ನಾಗರಿಕ ಸೇವಾ ವೇದಿಕೆ ನೇತೃತ್ವದಲ್ಲಿ ನಡೆದ ವರ್ತಕರ ಸಭೆಯಲ್ಲಿ ಸೋಮವಾರದಿಂದ ಪಟ್ಟಣದಲ್ಲಿ ಸ್ವಯಂಘೋಷಿತ ಲಾಕ್‌ಡೌನ್ ಮಾಡಲು ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಯಿತು.

ಸಭೆಯಲ್ಲಿ ಅಂತಿಮವಾಗಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಇನ್ನಿತರೆ ಎಲ್ಲ ವಾಣಿಜ್ಯ ಚಟುವಟಿಕೆಗಳನ್ನು ಬೆಳಿಗ್ಗೆ 6 ರಿಂದ ಮಧ್ಯಾಹ್ನ 2ರವರೆಗೆ ಸೀಮಿತಗೊಳಿಸಿ ನಂತರ ಅಂಗಡಿಗಳನ್ನು ಮುಚ್ಚಲು ತೀರ್ಮಾನಿಸಲಾಯಿತು.












Click it and Unblock the Notifications