ನನಗೆ ನೋಟೀಸ್ ನೀಡುವ ಅಧಿಕಾರ ನಿಮಗೆ ಕೊಟ್ಟವರ್ಯಾರು?: ಎಚ್.ವಿಶ್ವನಾಥ್ ಆಕ್ರೋಶ

ನಾವು ಕಾಂಗ್ರೆಸ್ ಪಕ್ಷದ ನಿಷ್ಠರು, ನಿಷ್ಠೂರರು. ನಮ್ಮ ವಿರುದ್ಧ ಶಿಸ್ತುಕ್ರಮ ‌ಜರುಗಿಸುವ ಕ್ರಮಕ್ಕೆ‌ ಮುಂದಾಗಿರುವುದು ಸರೀನಾ? ಎಂದು ಹೆಚ್ ವಿಶ್ವನಾಥ್ ಕೆಪಿಸಿಸಿ ಅಧ್ಯಕ್ಷರ ವಿರುದ್ಧ ವಾಗ್ದಾಳಿ ನಡೆಸಿದರು.

ಮೈಸೂರು, ಮಾರ್ಚ್ 8 : ಪಕ್ಷದ ವಿರುದ್ಧ ಹೇಳಿಕೆ ನೀಡಿದ್ದ ಆರೋಪದಲ್ಲಿ ತಮಗೆ ನೋಟಿಸ್ ನೀಡಿರುವ ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಕಿಡಿ ಕಾರಿರುವ ಮಾಜಿ ಸಂಸದ ಹೆಚ್. ವಿಶ್ವನಾಥ್, ನಮಗೆ ನೋಟಿಸ್ ನೀಡುವ ಅಧಿಕಾರ ನಿಮಗಿಲ್ಲ. ನಿಮ್ಮ ನೋಟಿಸಿಗೆ ನಮ್ಮ ಧಿಕ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಹೆಚ್. ವಿಶ್ವನಾಥ್, ನಮಗೆ ನೋಟಿಸ್ ನೀಡುವ ಅಧಿಕಾರ ಎಐಸಿಸಿಗೆ ಮಾತ್ರ ಇರುವುದು. ನಿಮಗಿಲ್ಲದ ಅಧಿಕಾರವನ್ನ ಚಲಾಯಿಸಲು ಕೊಟ್ಟದ್ದು ಯಾರು? ಇದರ ಹಿಂದಿನ ಉದ್ದೇಶ ಹಾಗೂ ಕೈವಾಡ ಏನು? ಎಂದು ಪ್ರಶ್ನಿಸಿದರು.

H. Vishwanath, congress leader shows outrage

ನಾವು ಕಾಂಗ್ರೆಸ್ ಪಕ್ಷದ ನಿಷ್ಠರು, ನಿಷ್ಠೂರರು. ನಾವೆಂದು ಒಳಗೆ. ಹೊರಗೆ ನಡೆದುಕೊಂಡಿಲ್ಲ. ನಿಮಗೆ ಎಚ್ಚರಿಕೆ ನೀಡುತಿದ್ದೇವೆ. ನಮ್ಮ ವಿರುದ್ಧ ಶಿಸ್ತುಕ್ರಮ ‌ಜರುಗಿಸುವ ಕ್ರಮಕ್ಕೆ‌ ಮುಂದಾಗಿರುವುದು ಸರೀನಾ? ಎಂದು ಹೆಚ್ ವಿಶ್ವನಾಥ್ ಕೆಪಿಸಿಸಿ ಅಧ್ಯಕ್ಷರ ವಿರುದ್ಧ ವಾಗ್ದಾಳಿ ನಡೆಸಿದರು.

ಪಕ್ಷದ ಹಾಗೂ ಹೈಕಮಾಂಡ್ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ಕೆಪಿಸಿಸಿ ವತಿಯಿಂದ ಮಾಜಿ ಸಂಸದ ಹೆಚ್. ವಿಶ್ವನಾಥ್ ಅವರಿಗೆ ನೋಟಿಸ್ ನೀಡಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+