ವಾರ ಪೂರ್ತಿ ಮೈಸೂರು –ಬೆಂಗಳೂರು ಮೆಮು ರೈಲಿಗೆ ಜು.27ರಂದು ಗ್ರೀನ್ ಸಿಗ್ನಲ್

ಮೈಸೂರು, ಜುಲೈ 24: ಮೈಸೂರಿನಲ್ಲಿ ಬಹು ದಿನಗಳ ಕನಸಾದ ಮೆಮು ರೈಲಿನ ವಾರಪೂರ್ತಿ ಸಂಚಾರ ಸೇವೆಗೆ ಇದೇ ಜುಲೈ 27ರ ಬೆಳಗ್ಗೆ ಮೈಸೂರಿನ ರೈಲ್ವೆ ನಿಲ್ದಾಣದಲ್ಲಿ ಚಾಲನೆ ದೊರೆಯಲಿದೆ.

ಈ ಕುರಿತು ಸಂಸದ ಪ್ರತಾಪ್ ಸಿಂಹ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದು, ಅಂದು ಬೆಳಿಗ್ಗೆ 9.30ಕ್ಕೆ ಗ್ರೀನ್ ಸಿಗ್ನಲ್ ನೀಡುವುದಾಗಿ ತಿಳಿಸಿದ್ದಾರೆ.

ಈ ರೈಲು ಸದ್ಯ ನಾಲ್ಕು ದಿನ ಸಂಚರಿಸುತ್ತಿದ್ದು, ಇನ್ನು ಮುಂದೆ ಆರು ದಿನಗಳೂ ಸಂಚರಿಸಲಿದೆ. ಸೋಮವಾರದಿಂದ ಶನಿವಾರದವರೆಗೆ ರೈಲು ಸೇವೆ ದೊರೆಯಲಿದೆ. ಅದೇ ರೀತಿ ವೇಳಾಪಟ್ಟಿಯನ್ನು ಬದಲಿಸಲಾಗಿದೆ.

Green signal for daily Mysuru Bangalore Memu train on June 27

ಮೆಮು ರೈಲು ವಿದ್ಯುತ್ ಸಂಚಾಲಿತವಾದ್ದರಿಂದ ಇಂಧನ ವೆಚ್ಚವೂ ಇಳಿಮುಖವಾಗಲಿದೆ. ಈ ಹಿಂದೆ ಮೆಮು ರೈಲು ಬೆಂಗಳೂರಿನಿಂದ ರಾಮನಗರದವರೆಗೆ ಸಂಚರಿಸುತ್ತಿತ್ತು. ಇದೇ ರೈಲನ್ನು ಮೈಸೂರಿಗೆ ವಿಸ್ತರಿಸಲಾಗಿತ್ತು. 66539/66540 ರೈಲಿನ ಸಂಖ್ಯೆಯನ್ನು 06575/06576 ಎಂದು ಈಗ ಬದಲಾವಣೆ ಮಾಡಲಾಗಿದೆ.

ಈ ರೈಲು ಬೆಂಗಳೂರಿನಿಂದ ಸಂಜೆ 7.50ಕ್ಕೆ ಹೊರಡುತ್ತಿತ್ತು. ಇನ್ನು ಮುಂದೆ ಪ್ರತಿ ದಿನ ಸಂಜೆ 5.20ಕ್ಕೆ ಹೊರಟು ರಾತ್ರಿ 8.20ಕ್ಕೆ ಮೈಸೂರು ತಲುಪಲಿದೆ. ಮೈಸೂರಿನಿಂದ ಮತ್ತೆ ರಾತ್ರಿ 8.30ಕ್ಕೆ ಹೊರಟು ರಾತ್ರಿ 11.20ಕ್ಕೆ ಬೆಂಗಳೂರು ತಲುಪಲಿದೆ. ಇದೇ ರೀತಿ ಆರು ದಿನವೂ ಕಾರ್ಯಾಚರಣೆ ನಡೆಯಲಿದೆ. 8 ಬೋಗಿಗಳನ್ನು ಹೊಂದಿರುವ ಈ ರೈಲಿನ ಸಂಚಾರದಿಂದ ಜನರಿಗೆ ಅನುಕೂಲವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+