311 ಮತ ಪಡೆದು ಚುನಾವಣೆ ಸೋತ ಭಿಕ್ಷುಕ ಅಂಕನಾಯ್ಕ!

ಮೈಸೂರು, ಡಿಸೆಂಬರ್ 31; ಮೈಸೂರಿನ ನಂಜನಗೂಡು ತಾಲೂಕಿನ ಹುಳಿಮಾವು ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಚುನಾವಣಾ ಕಣಕ್ಕಿಳಿದಿದ್ದ ಭಿಕ್ಷುಕ ಅಂಕನಾಯ್ಕ ಬೊಕ್ಕಹಳ್ಳಿಯಲ್ಲಿ ಸೋಲು ಕಂಡಿದ್ದಾರೆ. ಆದರೆ, 311 ಮತಗಳನ್ನು ಪಡೆದಿದ್ದಾರೆ.

ಗ್ರಾಮದ ಯುವಕರು ಬೊಕ್ಕಹಳ್ಳಿಯಲ್ಲಿ ಭಿಕ್ಷೆ ಬೇಡುತ್ತಿದ್ದ 40 ವರ್ಷದ ಅಂಕನಾಯ್ಕನನ್ನು ಗ್ರಾಮ ಪಂಚಾಯಿತಿ ಚುನಾವಣಾ ಕಣಕ್ಕಿಳಿಸಿದ್ದರು. ಚುನಾವಣೆಯಲ್ಲಿ ಅಂಕನಾಯ್ಕ ಸೋತರೂ ತಮ್ಮ ಪ್ರತಿಸ್ಪರ್ಧಿಯಾಗಿದ್ದ ನಾಗೇಂದ್ರ ಎಸ್. ಅವರನ್ನು ಸೋಲಿಸಿದ್ದಾರೆ.

ಸಾಮಾನ್ಯ ಮೀಸಲಾತಿ ಅನ್ವಯ ನಾಗೇಂದ್ರ ಎಸ್. ಮತ್ತು ಅಂಕನಾಯ್ಕ ಕಣಕ್ಕಿಳಿದಿದ್ದರು. ನಾಗೇಂದ್ರ ಎಸ್. 430 ಮತಗಳನ್ನು ಪಡೆದಿದ್ದಾರೆ. ನಾಗೇಂದ್ರ ಅವರ ಮತಗಳನ್ನು ಕಸಿದುಕೊಂಡ ಭಿಕ್ಷುಕ ಅಂಕನಾಯ್ಕ 311 ಮತಗಳನ್ನು ಪಡೆದರು.

Gram Panchayat Election Beggar Anka Nayak Bagged 311 Votes

ಬೊಕ್ಕಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಪಂಗಡ ಮೀಸಲಾತಿಯಲ್ಲಿ ಕಣಕ್ಕಿಳಿಸಿದ್ದ ಶಿವರಾಮನಾಯ್ಕ 482 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಭಿಕ್ಷಕು ಅಂಕನಾಯ್ಕಗಿಂತ ಹೆಚ್ಚು ಮತಗಳನ್ನು ನಾಗೇಂದ್ರ ಎಸ್. ಪಡೆದರೂ ಸಹ ಚುನಾವಣೆಯಲ್ಲಿ ಸೋತಿದ್ದಾರೆ.

ಹುಳಿಮಾವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಕ್ಕಹಳ್ಳಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಅಂಕನಾಯ್ಕನನ್ನು ಗ್ರಾಮದ ಯುವಕರು ಚುನಾವಣೆಗೆ ನಿಲ್ಲಿಸಿದ್ದರು. ಹಿಂದೆ ಆಯ್ಕೆಯಾದ ಸದಸ್ಯರು ಕೆಲಸ ಮಾಡಿಲ್ಲ ಎಂಬ ಕಾರಣಕ್ಕೆ ಭಿಕ್ಷುಕನನ್ನು ಕಣಕ್ಕಿಳಿಸಿದ್ದರು.

Anka Nayak

ಅವಿವಾಹಿತನಾದ ಅಂಕನಾಯ್ಕ ಅಂಗವಿಕಲರಾಗಿದ್ದು, ಹಲವಾರು ವರ್ಷಗಳಿಂದ ಗ್ರಾಮದಲ್ಲಿ ಭಿಕ್ಷೆ ಬೇಡುತ್ತಿದ್ದರು. ಯುವಕರು ಅವರಿಗೆ ಹೊಸ ಬಟ್ಟೆ ತೊಡಿಸಿ, ಕಾರಿನಲ್ಲಿ ಕರೆತಂದು ನಾಮಪತ್ರವನ್ನು ಹಾಕಿಸಿದ್ದರು. ಅವರ ಪರವಾಗಿ ಪ್ರಚಾರವನ್ನು ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+