ಮೈಸೂರು : ಮನುಷ್ಯ ರೂಪಿ ಮರಿ ಹಾಕಿದ ಮೇಕೆ

ಮೈಸೂರು, ಡಿ. 23 : ಮೈಸೂರು ಜಿಲ್ಲೆಯ ಎಚ್‌.ಡಿ.ಕೋಟೆ ತಾಲೂಕಿನಲ್ಲಿ ಅಚ್ಚರಿಯೊಂದು ನಡೆದಿದ್ದು, ಮೇಕೆಯೊಂದು ಎರಡು ಮನುಷ್ಯ ರೂಪದ ಮರಿಗಳಿಗೆ ಜನ್ಮ ನೀಡಿದೆ. ಮರಿಗಳು ಹುಟ್ಟಿದ ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿವೆ. ಈ ಮರಿಗಳನ್ನು ದಸರಾ ವಸ್ತು ಪ್ರದರ್ಶನದಲ್ಲಿ ಇಡಲಾಗುತ್ತದೆ.

ಎಚ್‌.ಡಿ.ಕೋಟೆ ತಾಲೂಕಿನ ಸೊಳ್ಳೆಪುರ ಗ್ರಾಮದಲ್ಲಿ ಈ ಅಚ್ಚರಿ ನಡೆದಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಮರಿಗಳನ್ನು ನೋಡಲು ಗ್ರಾಮಕ್ಕೆ ಆಗಮಿಸಿದ್ದರು. ಭಾಸ್ಕರ್ ಎಂಬುವವರಿಗೆ ಸೇರಿದ ಮೇಕೆ ಸೋಮವಾರ 15 ನಿಮಿಷಗಳ ಅಂತರದಲ್ಲಿ ಎರಡು ಮರಿಗಳಿಗೆ ಜನ್ಮ ನೀಡಿತ್ತು. ಮರಿಗಳು ಹುಟ್ಟಿದ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿದವು.

goat

ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಪ್ರಸಾರವಾಗುತ್ತಿದ್ದಂತೆ ಪಶುವೈದ್ಯರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಪೂರ್ಣರೂಪ ಪಡೆಯುವ ಮೊದಲೇ ಮರಿಗಳು ಜನಿಸಿರುವುದರಿಂದ ಮರಿಗಳ ದೇಹದಲ್ಲಿ ನೀರು ತುಂಬಿದೆ. ನೀರನ್ನು ಹೊರತೆಗೆದರೆ ಸಹಜ ಸ್ಥಿತಿಗೆ ಬರಲಿವೆ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಪಶುವೈದ್ಯ ಡಾ.ಮದನ್‌ ಹೇಳಿದ್ದಾರೆ.[ಎಚ್.ಡಿ.ಕೋಟೆ : ಹುಲಿ ದಾಳಿಗೆ ವ್ಯಕ್ತಿ ಬಲಿ]

ಸ್ಥಳಕ್ಕೆ ಆಗಮಿಸಿದ್ದ ಪಶುಸಂಗೋಪನಾ ಇಲಾಖೆ ಉಪ ನಿರ್ದೇಶಕ ದೇವದಾಸ್ ಅವರು, ಅನುವಂಶಿಕ ತೊಂದರೆ ಅಥವಾ ಮೇಕೆ ವಿಷಪೂರಿತ ಗಿಡಗಳನ್ನು ತಿಂದಾಗ ಆಗುವ ಸೋಂಕಿನಿಂದ ಇಂತಹ ಮರಿಗಳು ಜನಿಸಿವೆ ಎಂದು ತಿಳಿಸಿದರು.

ಪಶುವೈದ್ಯರು ಮೃತ ಮರಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದು, ಮರಿಗಳನ್ನು ಕಡೆದಂತೆ ಸಂರಕ್ಷಿಸಿ ದಸರಾ ವಸ್ತು ಪ್ರದರ್ಶನದಲ್ಲಿ ಪ್ರದರ್ಶನಕ್ಕಿಡಲಾಗುವುದು ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+